• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಾಟಾ ಸ್ಟೀಲ್ ಕಂಪನಿ ಲಾಭ 3,604 ಕೋಟಿ, ಮೂರು ಪಟ್ಟು ಏರಿಕೆ

|

ಟಾಟಾ ಸ್ಟೀಲ್ ಕಂಪನಿಯು ಎರಡನೇ ತ್ರೈ ಮಾಸಿಕದಲ್ಲಿ, ಸೆಪ್ಟೆಂಬರ್ 30ಕ್ಕೆ 3,604.21 ಕೋಟಿ ರುಪಾಯಿ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದ ಅವಧಿಯಲ್ಲಿ ಕಂಪನಿಯು 957.85 ಕೋಟಿ ರುಪಾಯಿ ಲಾಭ ಪಡೆದಿತ್ತು. ಅದಕ್ಕೆ ಹೋಲಿಸಿದರೆ 269.31% ಹೆಚ್ಚು ಲಾಭ ಪಡೆದಂತೆ ಆಗಿದೆ.

ಜೆಟ್ ಏರ್ ವೇಸ್ ಖರೀದಿಗೆ ಟಾಟಾ ಸನ್ಸ್ ನಲ್ಲಿ ಲೆಕ್ಕಾಚಾರ ಶುರು

ಟಾಟಾ ಸ್ಟೀಲ್ ಕಂಪನಿಯು ಈ ಅವಧಿಯಲ್ಲಿ 2455 ಕೋಟಿ ರುಪಾಯಿ ಲಾಭ ಗಳಿಸಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದರು. ಕಂಪನಿಯ ನಿವ್ವಳ ಮಾರಾಟವು 34.10% ಹೆಚ್ಚಳ ಆಗಿದೆ. ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿ ಹೇಳುವುದಾದರೆ 32,464.14 ಕೋಟಿ ಇದ್ದದ್ದು 43,544.10 ಕೋಟಿ ರುಪಾಯಿಗೆ ಹೆಚ್ಚಳ ಆಗಿದೆ.

ಈ ಅವಧಿಯಲ್ಲಿ ಸಾಲ ಪ್ರಮಾಣವು 2,065 ಕೋಟಿ ರುಪಾಯಿ ಹೆಚ್ಚಳ ಆಗಿದೆ. ಮುಖ್ಯವಾಗಿ ವಿದೇಶಿ ವಿನಿಮಯ ಪರಿಣಾಮವಾಗಿ 3,528 ಕೋಟಿ ರುಪಾಯಿ ಆಗಿದೆ. ನಿವ್ವಳ ಸಾಲ ಪ್ರಮಾಣವು 1,04,202 ಕೋಟಿ ರುಪಾಯಿ ಆಗಿದೆ ಎಂದು ಟಾಟಾ ಸ್ಟೀಲ್ ಕಂಪನಿಯ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

English summary
Tata Steel on Tuesday reported a 269.31 per cent jump in profit to Rs 3,604.21 crore (attributable to the owners) for the quarter ended September 30. The company had posted a profit of Rs 975.87 crore for the year ago period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X