• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನವರಿ 2020ರಿಂದ ಟಾಟಾ ಕಾರುಗಳ ಬೆಲೆ ಏರಿಕೆ

|

ನವದೆಹಲಿ, ಡಿಸೆಂಬರ್ 04: ಬಿಎಸ್ 6 ಗುಣಮಟ್ಟಕ್ಕೆ ಅನುಗುಣವಾಗಿ ಕಾರು ಉತ್ಪಾದನೆ ಪ್ರಕ್ರಿಯೆ ಬದಲಾಯಿಸಲಾಗಿದ್ದು, ಜನವರಿ 2020ರಿಂದ ಎಲ್ಲಾ ಬಗೆಯ ಪ್ರಯಾಣಿಕರ ವಾಹನಗಳ ಬೆಲೆ ಏರಿಕೆ ಮಾಡಲಾಗುವುದು ಎಂದು ಟಾಟಾ ಮೋಟರ್ಸ್ ಬುಧವಾರದಂದು ಪ್ರಕಟಿಸಿದೆ.

ಹಾಚ್ ಬ್ಯಾಕ್ ಟಿಯಾಗೋದಿಂದ ಎಸ್ ಯು ವಿ ಹಾರಿಯರ್ ತನಕ, 4.39 ಲಕ್ಷ ರು ನಿಂದ 16. 85 ಲಕ್ಷ ರು(ದೆಹಲಿ ಎಕ್ಸ್ ಶೋರೂಂ ಬೆಲೆ)ತನಕ ವಿವಿಧ ಬಗೆಯ ವಾಹನಗಳನ್ನು ಟಾಟಾ ಮೋಟರ್ಸ್ ಮಾರುಕಟ್ಟೆಗೆ ಬಿಡುತ್ತಿದೆ.

ಜನವರಿ 2019ರಿಂದ ಟಾಟ ಮೋಟರ್ಸ್ ವಾಹನಗಳ ಬೆಲೆ ಏರಿಕೆಜನವರಿ 2019ರಿಂದ ಟಾಟ ಮೋಟರ್ಸ್ ವಾಹನಗಳ ಬೆಲೆ ಏರಿಕೆ

ಬಿಎಸ್ 6 ಉತ್ಪನ್ನಗಳು ಸಂಪೂರ್ಣ ಜಾರಿಯಾಗುವ ಹೊತ್ತಿಗೆ ಟಾಟಾ ಸಂಸ್ಥೆ ಕಾರುಗಳ ಬೆಲೆಯೂ ಏರಿಕೆ ಮಾಡುವುದು ಅನಿವಾರ್ಯ ಎಂದು ಟಾಟಾ ಮೋಟರ್ಸ್ ನ ನಿರ್ದೇಶಕರಲ್ಲಿ ಒಬ್ಬರಾದ ಮಾಯಾಂಕ್ ಪರೀಕ್ ಅವರು ಪಿಟಿಐ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕಾರು ಕೊಳ್ಳುವ ಕನಸಿಗೆ ತಡೆ ಹಾಕಿದ ಮಾರುತಿ ಸುಝುಕಿ

ಏಪ್ರಿಲ್ 2020ರಿಂದ ಬಿಎಸ್ 6 ನಿಯಮಗಳು ಕಡ್ಡಾಯವಾಗಿ ಜಾರಿಗೆ ಬರಲಿದೆ. ಟಾಟಾ ಮೋಟರ್ಸ್ ವಾಹನಗಳ ಬೆಲೆ ಏರಿಕೆ ಪ್ರಮಾಣದ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲವಾದರೂ, 10,000 ರು ನಿಂದ 15,000 ರು ತನಕ ಏರಿಕೆ ನಿರೀಕ್ಷೆಯಿದೆ.

34 ವರ್ಷಗಳ ಬಳಿಕ ಮಾರುತಿ ಸುಜುಕಿ ಓಮ್ನಿ ಉತ್ಪಾದನೆ ಬಂದ್!34 ವರ್ಷಗಳ ಬಳಿಕ ಮಾರುತಿ ಸುಜುಕಿ ಓಮ್ನಿ ಉತ್ಪಾದನೆ ಬಂದ್!

ಮಾರುತಿ ಸುಜುಕಿ, ಟೊಯೋಟಾ, ಮಹೀಂದ್ರಾ ಅಂಡ್ ಮಹೀಂದ್ರಾ, ಮರ್ಸಿಡೀಸ್ ಬೆಂಜ್ ಕೂಡಾ ಇದೇ ಹಾದಿ ಹಿಡಿಯುವ ಸಾಧ್ಯತೆ ಹೆಚ್ಚಿದೆ. ಆದರೆ ಹ್ಯುಂಡೈ ಮೋಟರ್ಸ್ ಇಂಡಿಯಾ, ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಗಳು ಜನವರಿ ತಿಂಗಳಿನಲ್ಲಿ ತಮ್ಮ ಸಂಸ್ಥೆಯ ವಾಹನಗಳ ಬೆಲೆಯನ್ನು ಏರಿಕೆ ಮಾಡದಿರಲು ನಿರ್ಧರಿಸಿವೆ.

English summary
Tata Motors on Wednesday said it will increase prices of its passenger vehicles from January, primarily in order to offset impact of upgrading its portfolio to conform to BSVI emission norms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X