ಟಾಟಾ ಮೋಟಾರ್ಸ್ ಷೇರುಗಳ ಭರ್ಜರಿ ಏರಿಕೆ: ಶೇಕಡಾ 9ರಷ್ಟು ಹೆಚ್ಚಳ

ನವದೆಹಲಿ, ಜನವರಿ 12: ಕೋವಿಡ್-19 ಪ್ರಭಾವದಿಂದಾಗಿ ಇಳಿಕೆಗೊಂಡಿದ್ದ ಆಟೋಮೊಬೈಲ್ ದೈತ್ಯ ಟಾಟಾ ಮೋಟಾರ್ಸ್, ಮೂರನೇ ತ್ರೈಮಾಸಿಕದಲ್ಲಿ ಚೇತರಿಕೆ ಕಂಡ ಬಳಿಕ ಈ ವರ್ಷ ಶೇಕಡಾ 9ರಷ್ಟು ಹೆಚ್ಚಳ ಕಂಡುಬಂದಿದ್ದು, 252.40 ರೂಪಾಯಿವರೆಗೂ ಗರಿಷ್ಠ ಹೆಚ್ಚಳ ದಾಖಲಿಸಿದೆ.

ಕಂಪನಿಯ ವಿದೇಶಿ ಅಂಗಸಂಸ್ಥೆ ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್ಆರ್) 2020 ರ ಅಂತ್ಯದ ಮಾರಾಟದಲ್ಲಿ ಎರಡನೇ ತ್ರೈಮಾಸಿಕದಲ್ಲಿ ಚೇತರಿಕೆಯೊಂದಿಗೆ ಗುರುತಿಸಿದ ನಂತರ ಟಾಟಾ ಮೋಟಾರ್ಸ್ ಶೇಕಡಾ 9ಕ್ಕೂ ಹೆಚ್ಚು ಹೆಚ್ಚಳ ದಾಖಲಿಸಿದೆ.

31 ಡಿಸೆಂಬರ್ 2020 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಚಿಲ್ಲರೆ ಮಾರಾಟವು 1.28 ಲಕ್ಷ ವಾಹನಗಳಾಗಿದ್ದು, ಹಿಂದಿನ ತ್ರೈಮಾಸಿಕದಲ್ಲಿ ಮಾರಾಟವಾದ 1.13 ಲಕ್ಷ ವಾಹನಗಳಿಗಿಂತ ಶೇಕಡಾ 13.1ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಆದರೆ ಕಳೆದ ವರ್ಷ ಇದೇ ಅವಧಿಯಲ್ಲಿ ಶೇಕಡಾ 9 ರಷ್ಟು ಕಡಿಮೆಯಾಗಿದೆ.

Tata Motors Share Up As JLR Sales Recover In December

ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಚೀನಾ ಮಾರಾಟವು ಶೇಕಡಾ 20.2ರಷ್ಟು ಮತ್ತು ವರ್ಷದಿಂದ ವರ್ಷಕ್ಕೆ ಶೇಕಡಾ 19.1 ರಷ್ಟು ಏರಿಕೆಯಾಗಿದೆ. ಇತರ ಪ್ರದೇಶಗಳಲ್ಲಿನ ಚಿಲ್ಲರೆ ಮಾರಾಟವು ಚೇತರಿಸಿಕೊಳ್ಳುತ್ತಲೇ ಇದೆ ಮತ್ತು ಉತ್ತರ ಅಮೆರಿಕಾದಲ್ಲಿ (ಶೇಕಡಾ 31.7 ರಷ್ಟು), ವಿದೇಶ ಮಾರುಕಟ್ಟೆಗಳಲ್ಲಿ (ಶೇಕಡಾ 26.6ರಷ್ಟು) ಮತ್ತು ಯುರೋಪ್‌ನಲ್ಲಿ (ಶೇಕಡಾ 20.5ರಷ್ಟು) ಹಿಂದಿನ ತ್ರೈಮಾಸಿಕದಲ್ಲಿ ಗಮನಾರ್ಹವಾಗಿ ಏರಿಕೆಯಾಗಿದೆ.

ಆದಾಗ್ಯೂ, ಈ ಪ್ರದೇಶಗಳಲ್ಲಿನ ಮಾರಾಟವು ಕೋವಿಡ್-19 ರ ಪೂರ್ವದ ಮಟ್ಟಕ್ಕೆ ಇನ್ನೂ ಚೇತರಿಸಿಕೊಂಡಿಲ್ಲ. ಒಂದು ವರ್ಷದ ಹಿಂದೆ ಉತ್ತರ ಅಮೆರಿಕಾದಲ್ಲಿ (ಶೇಕಡಾ 17.2ರಷ್ಟು ಕುಸಿತ), ಸಾಗರೋತ್ತರ (ಶೇಕಡಾ 20ರಷ್ಟು ಕುಸಿತ), ಯುರೋಪ್ (ಶೇಕಡಾ 16.3ರಷ್ಟು ಕುಸಿತ) ಮತ್ತು ಬ್ರಿಟನ್ (8.9ರಷ್ಟು ಕುಸಿದಿತ್ತು).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+