ಹೊಸ ವರ್ಷಕ್ಕೆ ಬರೋಬ್ಬರಿ 3.5 ಲಕ್ಷ ಬಿರಿಯಾನಿ ಮಾರಿದ ಸ್ವಿಗ್ಗಿ

ಬೆಂಗಳೂರು, ಜನವರಿ 1: ದೇಶದೆಲ್ಲೆಡೆ ಜನರ ಹೊಸ ವರ್ಷವನ್ನು ಜನರು ಖುಷಿಯಿಂದ ಬರಮಾಡಿಕೊಂಡಿದ್ದಾರೆ. ಇದರೊಂದಿಗೆ ಆನ್‌ಲೈನ್‌ ಆಹಾರ ವಿತರಣ ಕಂಪೆನಿ ಸ್ವಿಗ್ಗಿಗೂ ಹೊಸ ವರ್ಷದ ಆರಂಭಕ್ಕೂ ಮುನ್ನ ದಿನ ಭರ್ಜರಿ ವ್ಯಾಪಾರವಾಗಿದೆ.

ಫುಡ್‌ ಡೆಲಿವರಿ ಕಂಪೆನಿ ಸ್ವಿಗ್ಗಿ ಹೊಸ ವರ್ಷದ ಹಿಂದಿನ ದಿನ ಡಿಸೆಂಬರ್‌ 31ರಂದು ಬರೋಬ್ಬರಿ 3.5 ಲಕ್ಷ ಬಿರಿಯಾನಿಯನ್ನು ಮಾರಾಟ ಮಾಡಿ ದಾಖಲೆ ಮಾಡಿದೆ. ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿ ಶನಿವಾರ 3.50 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ಪಡೆದು ವಿತರಿಸಿದೆ. ಇದು ರಾತ್ರಿ 10.25ರ ಹೊತ್ತಿಗೆ ಹೊತ್ತಿಗೆ ಅಪ್ಲಿಕೇಶನ್ ದೇಶಾದ್ಯಂತ 61,000 ಪಿಜ್ಜಾಗಳನ್ನು ರವಾನಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಟ್ವಿಟರ್‌ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಹೈದರಾಬಾದಿ ಬಿರಿಯಾನಿಗೆ ಶೇಕಡಾ 75.4 ರಷ್ಟು ಆರ್ಡರ್‌ಗಳು ಬಂದಿವೆ. ನಂತರ ಲಕ್ನೋವಿ ಬಿರಿಯಾನಿಗೆ 14.2 ಮತ್ತು ಕೋಲ್ಕತ್ತಾ ಬಿರಿಯಾನಿಗೆ 10.4 ಶೇಕಡಾ ಆರ್ಡರ್‌ಗಳು ಸ್ವಿಗ್ಗಿಗೆ ಬಂದಿದೆ. ಸ್ವಿಗ್ಗಿಯಲ್ಲಿ 3.50 ಲಕ್ಷ ಆರ್ಡರ್‌ಗಳೊಂದಿಗೆ ಕಂಪೆನಿ ವಿತರಿಸಿದ ಮುಖ್ಯ ಆಹಾರ ಪಧಾರ್ಥವಾಗಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

Swiggy sold 3.5 Biryani in New Year eve

ಸ್ವಿಗ್ಗಿ ಆ್ಯಪ್ ಮೂಲಕ ಪಡೆದ ಆರ್ಡರ್‌ನಲ್ಲಿ ಶನಿವಾರ ಸಂಜೆ 7.20ಕ್ಕೆ 1.65 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ತಲುಪಿಸಿತ್ತು. ಹೈದರಾಬಾದ್‌ನ ಟಾಪ್ ಬಿರಿಯಾನಿ ಮಾರಾಟದ ರೆಸ್ಟೋರೆಂಟ್‌ಗಳಲ್ಲಿ ಒಂದಾದ ಬವರ್ಚಿ 2021 ಹೊಸ ವರ್ಷದ ಮುನ್ನಾ ದಿನದಂದು ನಿಮಿಷಕ್ಕೆ ಎರಡು ಬಿರಿಯಾನಿಗಳನ್ನು ವಿತರಿಸಿತು. ಡಿಸೆಂಬರ್ 31, 2022ಕ್ಕೆ ಬೇಡಿಕೆಯನ್ನು ಪೂರೈಸಲು 15 ಟನ್ ಬಿರಿಯಾನಿಯನ್ನು ಸಿದ್ಧಪಡಿಸಿತ್ತು.

ಡೋಮಿನೊಸ್‌ ಪೀಜಾ 61,287 ಪಿಜ್ಜಾಗಳನ್ನು ವಿತರಿಸಲಾಗಿದೆ. ಆರ್ಡರ್‌ಗೆ ಹೋಗುವ ಓರೆಗಾನೊ ಪ್ಯಾಕೆಟ್‌ಗಳ ಸಂಖ್ಯೆಯನ್ನು ಮಾತ್ರ ನಾವು ಊಹಿಸಬಹುದು ಎಂದು ಸ್ವಿಗ್ಗಿ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ. ಶನಿವಾರ ಸಂಜೆ 7 ಗಂಟೆಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ 1.76 ಲಕ್ಷ ಪ್ಯಾಕೆಟ್‌ಗಳ ಚಿಪ್‌ಗಳನ್ನು ಆರ್ಡರ್ ಮಾಡಲಾಗಿದೆ ಎಂದು ಅದು ಹೇಳಿದೆ.

Swiggy sold 3.5 Biryani in New Year eve

ಕಿರಾಣಿ ವಿತರಣಾ ವೇದಿಕೆಯಾದ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ 2,757 ಪ್ಯಾಕೆಟ್ ಡ್ಯೂರೆಕ್ಸ್ ಕಾಂಡೋಮ್‌ಗಳನ್ನು ವಿತರಿಸಲಾಗಿದೆ ಎಂದು ಹೇಳಿದ್ದು, ಅದನ್ನು "6969' ಮಾಡಲು 4,212 ಹೆಚ್ಚುವರಿ ಆರ್ಡರ್ ಮಾಡಲು ಜನರನ್ನು ವಿನಂತಿಸಿದೆ. ಆಚರಣೆ ಈಗಾಗಲೇ ವೇಗವಾಗಿ ಪ್ರಾರಂಭವಾಗಿದೆ. ನಾವು ಈಗಾಗಲೇ 1.3 ಮಿಲಿಯನ್ ಆರ್ಡರ್‌ಗಳನ್ನು ತಲುಪಿಸಿದ್ದು, ಮತ್ತಷ್ಟು ಎಣಿಸುತ್ತಿದ್ದೇವೆ. ನಮ್ಮ ಫ್ಲೀಟ್ ಮತ್ತು ರೆಸ್ಟೋರೆಂಟ್ ಪಾಲುದಾರರು ಈ ಹೊಸ ವರ್ಷವನ್ನು ಅನ್ನು ಅವಿಸ್ಮರಣೀಯವಾಗಿಸಲು ಸಜ್ಜಾಗಿದ್ದಾರೆ ಎಂದು ಸ್ವಿಗ್ಗಿ ಸಿಇಒ ಶ್ರೀಹರ್ಷ ಮೆಜೆಟಿ ನಿನ್ನೆ ಸಂಜೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+