ಬೆಂಗಳೂರಿಗೆ ಕಾಲಿಟ್ಟ ಅಮೆರಿಕದ ಪ್ರೀಮಿಯಂ ಶೂ ಬ್ರ್ಯಾಂಡ್
ಬೆಂಗಳೂರು, ಆಗಸ್ಟ್ 28: ಅಮೆರಿಕದ ಪ್ರೀಮಿಯಂ ಶೂ ಬ್ರಾಂಡ್ ಆಗಿರುವ ಸ್ಟೀವ್ ಮ್ಯಾಡೆನ್, ಹೊಸ ಮಳೆಗಾಲದ ಮತ್ತು ಚಳಿಗಾಲದ ಸೀಸನ್‍ಗಾಗಿ ಅಂತಾರಾಷ್ಟ್ರೀಯ ಮಟ್ಟದ ಹೊಸ ಶೂ ಸಂಗ್ರಹವನ್ನು ಭಾರತಕ್ಕೆ ಪರಿಚಯಿಸಿದೆ.
ಪುರುಷರು ಹಾಗೂ ಮಹಿಳೆಯರಿಗೆ ವೈವಿಧ್ಯಮಯ ಶ್ರೇಣಿಯ ಉತ್ಪನ್ನಗಳು ಲಭ್ಯ ಇವೆ. ಬಿಗ್ ಬಾಟಮ್ ಸ್ನೀಕರ್ಸ್, ಟ್ರೆಂಡಿ ನಿಯಾನ್ ಹೀಲ್ಸ್, ಸ್ಟೇಟ್‍ಮೆಂಟ್ ಡ್ರೈವರ್ ಲೋಫೇರ್ಸ್, ಸ್ಲಿಪ್ಸ್ ಆನ್ಸ್, ಸ್ಯಾಂಡಲ್ ಹಾಗೂ ಮತ್ತಿತರ ವೈವಿಧ್ಯಮಯ ಅತ್ಯಾಕರ್ಷಕ ಉತ್ಪನ್ನಗಳು ಇದರಲ್ಲಿ ಸೇರಿವೆ. ಬೋರ್ಡ್ ಮೀಟಿಂಗ್‍ನಿಂದ ಹಿಡಿದು, ಸಾಂದರ್ಭಿಕ ರಾತ್ರಿಗಳಿಗೆ ಕೂಡಾ ಸೂಕ್ತವೆನಿಸುವ ಉತ್ಪನ್ನ ಶ್ರೇಣಿಗಳಿವೆ.
ವಿಶ್ವಾದ್ಯಂತ ಅತ್ಯಾಕರ್ಷಕ ಶೈಲಿಯನ್ನು ಅಳವಡಿಸಿಕೊಂಡಿರುವ ಶೂ ಬ್ರಾಂಡ್, ಫ್ಯಾಷನ್‍ಪ್ರಿಯರಿಗೂ ಅಚ್ಚುಮೆಚ್ಚು ಎನಿಸಿದೆ. ಈ ಬಿಗ್ ಬಾಟಮ್ ಸ್ನೀಕರ್ ಗಳು ರನ್‍ವೇ ಹಾಗೂ ಕಾಲೇಜು ಕ್ಯಾಂಪಸ್‍ಗಳಲ್ಲಿ ಚಿರಪರಿಚಿತವಾಗಿದ್ದು, ಈ ಟ್ರೆಂಡ್ ಅದೇ ಆಕರ್ಷಣೆ ಉಳಿಸಿಕೊಂಡಿದೆ.

ಕ್ರೀಡೆಯಿಂದ ಸ್ಫೂರ್ತಿ ಪಡೆದ ಅನಿಮಲ್ ಪ್ರಿಂಟ್, ಅತ್ಯಾಕರ್ಷಕ ಮಹಿಳೆಯನ್ನಾಗಿ ರೂಪಿಸುವಂತಿದ್ದು, ನಿಮ್ಮ ಬಾಹ್ಯ ನೋಟಕ್ಕೆ ವಿಶೇಷ ತಿರುವು ನೀಡುವಂತಿದೆ. ಈ ಸ್ನೀಕರ್ ಗಳ ಮೂಲಕ ಸುಲಲಿತ ಹಾಗೂ ಸುಗಮವಾದ ನಡಿಗೆಯನ್ನು ನೀವು ಅನುಭವಿಸಬಹುದಾಗಿದೆ. ಬೆಂಗಳೂರಿನಲ್ಲಿ ಓರಿಯನ್ ಮಾಲ್ ನಲ್ಲಿ ಸ್ಟೀವ್ ಮ್ಯಾಡೆನ್ ಮಳಿಗೆಯಲ್ಲಿ ರಿಯಾಯಿತಿ ದರದಲ್ಲಿ ವೈವಿಧ್ಯಮಯ ಶ್ರೇಣಿ ಶೂಗಳು ಲಭ್ಯವಿದೆ.












Click it and Unblock the Notifications