• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಶಾಕ್: ಎಟಿಎಂ ವಿತ್ ಡ್ರಾ ಮಿತಿಯಲ್ಲಿ ಭಾರೀ ಕಡಿತ

|

ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತೊಂದು ಬದಲಾವಣೆಯನ್ನು ತರುವ ಮೂಲಕ, ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ. ಮೈಸೂರು ಬ್ಯಾಂಕ್ ಸೇರಿದಂತೆ ಆರು ಸಹವರ್ತಿ ಬ್ಯಾಂಕುಗಳು ವಿಲೀನವಾದ ನಂತರ, ಎಸ್ಬಿಐ ಹಲವು ಬದಲಾವಣೆಗಳನ್ನು ಜಾರಿಗೆ ತರುತ್ತಿದೆ.

ಗ್ರಾಹಕರಿಗೆ ತೊಂದರೆಯಾಗುವ ಮತ್ತೊಂದು ಬದಲಾವಣೆಯನ್ನು ಸ್ಟೇಟ್ ಬ್ಯಾಂಕ್ ತಂದಿದ್ದು, ಎಟಿಎಂ ಮೂಲಕ ಹಣ ವಿತ್ ಡ್ರಾ ಮಾಡುವ ಮಿತಿಯನ್ನು ನಲವತ್ತು ಸಾವಿರದಿಂದ ಇಪ್ಪತ್ತು ಸಾವಿರಕ್ಕೆ ಇಳಿಸಿದೆ. ಈ ಹೊಸ ನಿಯಮ ಅಕ್ಟೋಬರ್ 31ರಿಂದ ಅನ್ವಯವಾಗಲಿದೆ.

ಮಿನಿಮಮ್ ಬ್ಯಾಲನ್ಸ್ ಇಟ್ಟುಕೊಳ್ಳದ ಗ್ರಾಹಕರಿಗೆ 5 ಸಾವಿರ ಕೋಟಿ ದಂಡ

ಸ್ಟೇಟ್ ಬ್ಯಾಂಕ್ ಮೂಲಗಳ ಪ್ರಕಾರ, ಡಿಜಿಟಲ್ ವ್ಯವಹಾರ ಹೆಚ್ಚಿಸುವ ಉದ್ದೇಶದಿಂದ ಈ ಬದಲಾವಣೆ ತರಲು ಬ್ಯಾಂಕ್ ಮುಂದಾಗಿದೆ. ಜೊತೆಗೆ, ಎಟಿಎಂನಲ್ಲಿ ವಂಚನೆ ಮತ್ತು ಮೋಸದ ವ್ಯವಹಾರಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಎಟಿಎಂ ಮಿತಿಯನ್ನು ಕಮ್ಮಿಗೊಳಿಸಲು ಬ್ಯಾಂಕ್ ನಿರ್ಧರಿಸಿದೆ.

ತುರ್ತು ಸಂದರ್ಭಗಳಲ್ಲಿ , ಹೆಚ್ಚಿನ ಮೊತ್ತದ ಅವಶ್ಯಕತೆಬಿದ್ದಲ್ಲಿ ಬ್ಯಾಂಕಿಗೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 1ರಿಂದ ಗೃಹ ಸಾಲದ ಬೆಂಚ್ ಮಾರ್ಕ್ ದರವನ್ನು ಎಸ್ಬಿಐ ಏರಿಕೆ ಮಾಡಿತ್ತು.

Q1 ವರದಿ : ಎಸ್ಬಿಐಗೆ 4,876 ಕೋಟಿ ರು ನಷ್ಟ

ಎಟಿಎಂನಲ್ಲಿ ವಂಚನೆ ಪ್ರಕರಣದ ದೂರುಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಕ್ಲಾಸಿಕ್ ಮತ್ತು ಮೆಸ್ಟ್ರೋದಲ್ಲಿ ಬಿಡುಗಡೆ ಮಾಡಲಾಗಿದ್ದ ಡೆಬಿಟ್ ಕಾರ್ಡುಗಳ ನಗದು ಹಿಂಪಡೆಯುವಿಕೆಯ ಮಿತಿಯನ್ನು ಇಳಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ಇತ್ತೀಚೆಗೆ ಜಾರಿಗೆ ತಂದ ಕೆಲವು ಪ್ರಮುಖ ಬದಲಾವಣೆಗಳು, ಮುಂದೆ ಓದಿ..

ಬೆಂಚ್ ಮಾರ್ಕ್ ದರ ಸೆಪ್ಟೆಂಬರ್ 1ರಿಂದ ಏರಿಕೆ

ಬೆಂಚ್ ಮಾರ್ಕ್ ದರ ಸೆಪ್ಟೆಂಬರ್ 1ರಿಂದ ಏರಿಕೆ

ಗೃಹ ಸಾಲದ ಬೆಂಚ್ ಮಾರ್ಕ್ ದರವನ್ನು ಸೆಪ್ಟೆಂಬರ್ 1ರಿಂದ ಏರಿಕೆ ಮಾಡಿತ್ತು. ಆ ಕಾರಣಕ್ಕೆ ಎಲ್ಲಾ ಗೃಹ ಸಾಲಗಳು ಇಪ್ಪತ್ತು ಮೂಲಾಂಕಗಳ ಏರಿಕೆ ಕಾಣುತ್ತವೆ. ಈ ಹಿಂದೆ 8.25% ಇದ್ದ ಬಡ್ಡಿ ದರವು 8.45% ಗೆ ಏರಿಕೆ ಆಗಿತ್ತು. ಸದ್ಯಕ್ಕೆ ಅದರಲ್ಲಿಯೂ ಇಪ್ಪತ್ತು ಮೂಲಾಂಕ ಏರಿಕೆಯಾಗುತ್ತದೆ. ಸಾಲ ಪಡೆದುಕೊಳ್ಳುವ ಅವಧಿ, ಸಾಲದ ಮೊತ್ತ ಹಾಗೂ ಸಾಲ ಪಡೆಯುತ್ತಿರುವವರು ಮಹಿಳೆಯರೇ ಅಥವಾ ಪುರುಷರೇ ಎಂಬುದು ಕೂಡ ಬಡ್ಡಿ ದರವನ್ನು ನಿರ್ಧರಿಸುವ ಅಂಶಗಳಾಗಿರುತ್ತವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಶ್ಚಿತ ಠೇವಣಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಶ್ಚಿತ ಠೇವಣಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಮೇಲಿನ ಬಡ್ಡಿ ದರಗಳಲ್ಲಿ ಏರಿಕೆ ಮಾಡಿತ್ತು. ಜುಲೈ 30ರಿಂದಲೇ ಪರಿಷ್ಕೃತ ದರಗಳು ಅನ್ವಯ ಆಗಿದ್ದವು. ಒಂದು ಕೋಟಿ ರುಪಾಯಿ ಒಳಗಿನ ಠೇವಣಿಗೆ ಸಾಮಾನ್ಯ ನಾಗರಿಕರಿಗೆ 1 ರಿಂದ 2 ವರ್ಷದೊಳಗೆ 6.65% ನಿಂದ 6.7% ಗೆ, 2ರಿಂದ 3 ವರ್ಷದೊಳಗೆ 6.65% ನಿಂದ 6.75%, 3ರಿಂದ 5 ವರ್ಷದೊಳಗೆ 6.7% ನಿಂದ 6.8%, 5ರಿಂದ 10 ವರ್ಷದೊಳಗೆ 6.75% ನಿಂದ 6.85% ಏರಿಕೆಯಾಗಿತ್ತು.

ಗಣೇಶ ಚತುರ್ಥಿಗೆ ಈ ಸಲ ಸಾಲ ದುಬಾರಿ, ಎಸ್ ಬಿಐನಿಂದ ಹೊಸ ದರ ಜಾರಿ

OT ಪೇಮೆಂಟ್ ಮರು ಪಾವತಿ ಮಾಡುವಂತೆ ಸೂಚನೆ

OT ಪೇಮೆಂಟ್ ಮರು ಪಾವತಿ ಮಾಡುವಂತೆ ಸೂಚನೆ

ಅಪನಗದೀಕರಣದ ವೇಳೆಯಲ್ಲಿ ಪಡೆದುಕೊಂಡಿದ್ದ OT ಪೇಮೆಂಟ್ ಮರು ಪಾವತಿ ಮಾಡುವಂತೆ ಸರಿ ಸುಮಾರು 70 ಸಾವಿರ ಸಿಬ್ಬಂದಿಗಳಿಗೆ ಸೂಚಿಸಲಾಗಿತ್ತು ಮತ್ತು ಈ ಹಣವನ್ನು ವೇತನದಿಂದ ಕಡಿತವನ್ನೂ ಮಾಡಿತ್ತು. ಸ್ಟೇಟ್ ಬ್ಯಾಂಕಿಗೆ ವಿಲೀನವಾದ ಬ್ಯಾಂಕುಗಳ ಸಿಬ್ಬಂದಿಗಳಿಗೆ ಮಾತ್ರ ಈ ನಿಯಮ ಅನ್ವಯವಾಗಿತ್ತು, ಎಸ್ಬಿಐನ ಮೂಲ ಸಿಬ್ಬಂದಿಗಳಿಗೆ ಇದರಿಂದ ವಿನಾಯತಿ ನೀಡಿತ್ತು.

ಮೂಲ ದರದಲ್ಲಿ ಏಪ್ರಿಲ್ ತಿಂಗಳಿಂದ ಅನ್ವಯವಾಗುವಂತೆ ಏರಿಕೆ

ಮೂಲ ದರದಲ್ಲಿ ಏಪ್ರಿಲ್ ತಿಂಗಳಿಂದ ಅನ್ವಯವಾಗುವಂತೆ ಏರಿಕೆ

ಗೃಹ ಸಾಲ ಹಾಗೂ ವಾಹನದ ಮೇಲಿನ ಸಾಲದ BPLR ಮತ್ತು ಮೂಲ ದರದಲ್ಲಿ ಏಪ್ರಿಲ್ ತಿಂಗಳಿಂದ ಅನ್ವಯವಾಗುವಂತೆ ಏರಿಕೆ ಮಾಡಲಾಗಿತ್ತು. 5 ಮೂಲಾಂಶದಂತೆ ಶೇ 8.65 ರಿಂದ ಶೇ 8.70ಕ್ಕೆ ಏರಿಕೆಯಾಗಿತ್ತು. ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಏರಿಕೆಯನ್ನು ಮಾಡಲಾಗಿತ್ತು. ಇದಲ್ಲದೇ, benchmark prime lending rate(BPLR) ಆಧಾರದ ಮೇಲೆ ಸಾಲ ಪಡೆಯುವವರಿಗೆ, ಶೇ 13.40ರಿಂದ ಶೇ 13.45ಕ್ಕೇರಿಕೆಯಾಗಿತ್ತು. ಆದರೆ, ಮಾರ್ಜಿನಲ್ ಕಾಸ್ಟ್ ಲೀಡಿಂಗ್ ರೇಟ್ (ಎಂಸಿಎಲ್ ಆರ್) ಮೇಲೆ ಸಾಲ ಪಡೆಯುವವರಿಗೆ ಇದರಿಂದ ಯಾವುದೇ ಬದಲಾವಣೆಯಾಗಿರಲಿಲ್ಲ.

ಅಪನಗದೀಕರಣ: ಎಸ್ಬಿಐ ಉದ್ಯೋಗಿಗಳ OT ಪೇಮೆಂಟ್ ಗೆ ಕುತ್ತು

ಠೇವಣಿಯ ಕನಿಷ್ಟ ದರವನ್ನು ಇಳಿಕೆ

ಠೇವಣಿಯ ಕನಿಷ್ಟ ದರವನ್ನು ಇಳಿಕೆ

ಉಳಿತಾಯ ಖಾತೆಯ ಠೇವಣಿಯ ಕನಿಷ್ಟ ದರವನ್ನು ಇಳಿಕೆ ಮಾಡಿದ ಬಳಿಕ ಮತ್ತೊಂದು ಹಿತಕರ ಸುದ್ದಿ ನೀಡಿದ್ದ ಎಸ್ಬಿಐ, ಉಳಿತಾಯ ಖಾತೆ ಸ್ಥಗಿತಗೊಳಿಸುವುದಕ್ಕೆ ವಿಧಿಸುತ್ತಿದ್ದ ದುಬಾರಿ ಶುಲ್ಕವನ್ನು ರದ್ದು ಮಾಡಿರುವುದಾಗಿ ಘೋಷಿಸಿತ್ತು. ಈ ಹೊಸ ನಿಯಮವು ಅಕ್ಟೋಬರ್‌ 1, 2017ರಿಂದಲೇ ಜಾರಿಗೆ ಬಂದಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
State Bank of India (SBI) has cut its ATM cash withdrawal limit from Rs 40,000 per day to Rs 20,000 per day, according to a report by The Economic Times. The new restriction will be effective from October 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more