ಪ್ರೇಮಿಗಳ ದಿನದಂದು ಸ್ಪೈಸ್ ಜೆಟ್ ನಲ್ಲಿ ಹಾರಾಡಿ

ಮುಂಬೈ, ಫೆ. 4: ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಗ್ರಾಹಕರಿಗೆ ವಿವಿಧ ಆಫರ್ ಗಳನ್ನು ನೀಡಿದೆ. ಒಂದು ಬದಿಯ (ಒನ್ ವೇ) ಪ್ರಯಾಣ ದರವನ್ನು 1,599 ರೂ. ಗೆ ನಿಗದಿಪಡಿಸಲಾಗಿದೆ.

ಜನವರಿ 4 ರಿಂದ 6 ರವರೆಗೆ ಟಿಕೆಟ್ ಬುಕಿಂಗ್ ನಡೆಯಲಿದೆ. ಫೆಬ್ರವರಿ 14 ಮತ್ತು 15 ರಂದು ಪ್ರರಯಾಣ ಮಾಡುವವರು ಈ ಸೌಲಭ್ಯ ಪಡೆದುಕೊಳ್ಳಬಹುದು.[ದರ ಸಮರಕ್ಕೆ ಸ್ಪೈಸ್ ಜೆಟ್ : 1,499 ರೂಪಾಯಿಗೆ ಟಿಕೆಟ್]

spicejet

ದೇಶದ ಒಳಗಡೆ ಸಂಚರಿಸುವ ಎಲ್ಲ ವಿಮಾನಗಳಿಗೆ ಈ ಆಫರ್ ಅನ್ವಯಿಸುತ್ತದೆ. ಪ್ರೇಮಿಗಳ ದಿನವನ್ನು ಮತ್ತಷ್ಟು ಸ್ಮರಣಿಯ ಮಾಡಲು ಈ ಆಫರ್ ಕೊಡಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.[ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಇನ್ಫಿ ಭಾರೀ ಹೂಡಿಕೆ]

2015ರಲ್ಲಿ ಇದು ಸಂಸ್ಥೆ ನೀಡುತ್ತಿರುವ ಮೊದಲ ಆಫರ್ ಆಗಿದೆ. ಉತ್ತಮ ಫಲಿತಾಂಶ ಬರಬಹುದೆಂಬ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕೈಗೆಟಕುವ ದರದಲ್ಲಿ ವಿಮಾನ ಯಾನ ಸೌಲಭ್ಯ ನೀಡಿದ್ದೇವೆ ಎಂದು ಸ್ಪೈಸ್ ಜೆಟ್ ನ ವಾಣಿಜ್ಯ ವಿಭಾಗದ ಮುಖ್ಯಸ್ಥ ಕನ್ನೇಶ್ವರನ್ ಅವಿಳಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+