ಲಾಕ್ಡೌನ್: ಸ್ಯ್ನಾಪ್ ಡೀಲ್‌ನಲ್ಲೇ ಹಂಗಾಮಾ ಮ್ಯೂಸಿಕ್ ಪ್ಲೇ

ಬೆಂಗಳೂರು, ಏಪ್ರಿಲ್ 20: ಇ-ಕಾಮರ್ಸ್ ಮಾರುಕಟ್ಟೆ ಪ್ಲೇಸ್, ಸ್ನ್ಯಾಪ್ ಡೀಲ್ ತನ್ನ ಬಳಕೆದಾರರಿಗೆ ವೀಡಿಯೋ ಸ್ಟ್ರೀಮಿಂಗ್ ಸೇವೆಯನ್ನು ನೀಡಲು ಹಂಗಾಮಾ ಡಿಜಿಟಲ್ ಮೀಡಿಯಾ ಒಡೆತನದ ಪ್ರಮುಖ ವಿಡಿಯೋ ಆನ್ ಡಿಮ್ಯಾಂಡ್ ಪ್ಲಾಟ್ ಫಾರ್ಮ್ ಹಂಗಾಮಾ ಪ್ಲೇ ಜತೆ ಪಾಲುದಾರಿಕೆ ಹೊಂದಿದೆ.

ಜಗತ್ತು ಸಾಮಾಜಿಕ ಅಂತರ ಕಾಯ್ದಕೊಳ್ಳಲು ಅಭ್ಯಾಸ ಮಾಡುತ್ತಿರುವ ಈ ಸಂದರ್ಭದಲ್ಲಿ ಸ್ನ್ಯಾಪ್ ಡೀಲ್ ತನ್ನ ಬಳಕೆದಾರರಿಗಾಗಿ ಇದನ್ನು ಬಿಡುಗಡೆ ಮಾಡಿದೆ. ಈ ಮೂಲಕ ಸ್ನ್ಯಾಪ್ ಡೀಲ್ ಬಳಕೆದಾರರಿಗೆ ಅವರ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಲು ಮತ್ತು ಇದೇ ಆ್ಯಪ್ ಅನ್ನು ಬಳಸಿಕೊಂಡು ಸುರಕ್ಷತೆಯ ದೃಷ್ಟಿಯಿಂದ ಮನೆಯಲ್ಲಿಯೇ ಇದ್ದು ಕೊಂಡು ಮನರಂಜನೆ ಪಡೆಯಲು ಇದು ಸುಲಭವಾದ ಮಾರ್ಗವಾಗಿದೆ. ಇದು ಕಿರು ಸ್ವರೂಪದ ವಿಷಯ, ಸಿನಿಮಾ ಹಾಗೂ ಹಿಂದಿ, ಇಂಗ್ಲಿಷ್, ಭೋಜ್ ಪುರಿ, ಪಂಜಾಬಿ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಬಂಗಾಳಿ, ಗುಜರಾತಿ ಮತ್ತು ಇನ್ನಿತರ 15ಕ್ಕೂ ಹೆಚ್ಚು ಭಾಷೆಗಳಲ್ಲಿ ಟಿವಿ ಕಾರ್ಯಕ್ರಮಗಳು ಮತ್ತು ಕಿರುಚಿತ್ರಗಳ ಸೇವೆಯನ್ನು ನೀಡಲಿದೆ.

150ಕ್ಕೂ ಹೆಚ್ಚು ಕಿರುಚಿತ್ರ

150ಕ್ಕೂ ಹೆಚ್ಚು ಕಿರುಚಿತ್ರ

ಹಾಗೇ ಹಾಸ್ಯ, ಚಲನಚಿತ್ರ, ಗಾಸಿಪ್, ಆಧ್ಯಾತ್ಮ, ಫ್ಯಾಷನ್, ಲೈಫ್ ಸ್ಟೈಲ್ ಇತ್ಯಾದಿ ಹಾಗೂ 150ಕ್ಕೂ ಹೆಚ್ಚು ಕಿರುಚಿತ್ರ, 41,500ಕ್ಕೂ ಹೆಚ್ಚು ಕಿರು-ಸ್ವರೂಪದ ವಿಡಿಯೋಗಳಿಗೆ ಸುಲಭವಾಗಿ ಪ್ರವೇಶವನ್ನು ನೀಡುವುದರ ಜತೆಗೆ ಸ್ನ್ಯಾಪ್ ಡೀಲ್ ಬಳಕೆದಾರರಿಗಾಗಿ ಹಂಗಾಮಾ ಪ್ಲೇ ಲೈಬ್ರೆರಿಯನ್ನು ಕೂಡ ಸಂಗ್ರಹಿಸಿದೆ. ಕಿರು ಸ್ವರೂಪದ ವಿಷಯದ ಹೊರತಾಗಿ ವೀಕ್ಷಕರು 400ಕ್ಕೂ ಹೆಚ್ಚು ಚಲನಚಿತ್ರಗಳು, ವಿವಿಧ ಟಿವಿ ಕಾರ್ಯಕ್ರಮಗಳು ಮತ್ತು ಹಂಗಾಮಾ ಒರಿಜಿನಲ್ಸ್ ಗಳನ್ನು ಹೊಂದಿರುವ ದೀರ್ಘ-ಸ್ವರೂಪದ ವಿಡಿಯೋಗಳ ಲೈಬ್ರೆರಿಯನ್ನು ಇಲ್ಲಿ ಅನ್ವೇಷಿಸಬಹುದು.

ಹಂಗಾಮ ಡಿಜಿಟಲ್ ಮೀಡಿಯಾದ ಸಿಒಒ

ಹಂಗಾಮ ಡಿಜಿಟಲ್ ಮೀಡಿಯಾದ ಸಿಒಒ

ಈ ಅಸೋಸಿಯೇಷನ್ ಕುರಿತು ಮಾತನಾಡಿದ ಹಂಗಾಮ ಡಿಜಿಟಲ್ ಮೀಡಿಯಾದ ಸಿಒಒ ಸಿದ್ಧಾರ್ಥ ರಾಯ್ "ಜಗತ್ತು ಒಂದು ದೊಡ್ಡ ಸಂಕಷ್ಟವನ್ನು ಎದುರಿಸುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಜನರನ್ನು ಮನೆಯಲ್ಲಿಯೇ ಇರಲು ಹೇಳಲಾಗಿದೆ. ಅದು ಅಲ್ಲದೇ ಭಾರತದಲ್ಲಿ ಸ್ಮಾರ್ಟ್ ಫೋನ್ ಗಳು ಅನಿವಾರ್ಯವೆಂದು ಸಾಬೀತಾಗಿದ್ದು ಜನರಿಗೆ ಸುದ್ದಿ, ಅಗತ್ಯ ಸೇವೆಗಳು ಮತ್ತು ಸ್ಟ್ರೀಮಿಂಗ್ ಫಾಟ್ ಫಾರ್ಮ್ ಗಳನ್ನು ಪ್ರವೇಶಿಸಲು ಇದು ಸಹಾಯ ಮಾಡುತ್ತದೆ.

ಆರೋಗ್ಯಕರ ಮನರಂಜನೆ

ಆರೋಗ್ಯಕರ ಮನರಂಜನೆ

''ಸ್ನ್ಯಾಪ್ ಡೀಲ್ ನೊಂದಿಗಿನ ನಮ್ಮ ಸಹಯೋಗವು ಕಿರು-ಸ್ವರೂಪದ ವಿಡಿಯೋಗಳು, ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ಮತ್ತು ಹಂಗಾಮ ಒರಿಜಿನಲ್ ಗಳ ಲೈಬ್ರೆರಿ ನೇತೃತ್ವದಲ್ಲಿ ಬಳಕೆದಾರರಿಗೆ ಆರೋಗ್ಯಕರ ಮನರಂಜನೆಯನ್ನು ನೀಡಲಿದೆ. ಸ್ನ್ಯಾಪ್ ಡೀಲ್ ನಲ್ಲಿ ಹಂಗಾಮ ಪ್ಲೇ ನೀಡುವ ವಿಷಯ ಅನುಭವವು ಬಳಕೆದಾರರದು ಇದರಲ್ಲಿ ತೊಡಗಿಕೊಂಡಿರಲು ಸಹಾಯ ಮಾಡುತ್ತದೆ ಎಂಬುದು ನಮಗೆ ಖಚಿತವಾಗಿದೆ'' ಎಂದು ಹೇಳಿದರು.

ಸ್ನ್ಯಾಪ್ ಡೀಲ್ ವಕ್ತಾರರ ಹೇಳಿಕೆ

ಸ್ನ್ಯಾಪ್ ಡೀಲ್ ವಕ್ತಾರರ ಹೇಳಿಕೆ

ಸ್ನ್ಯಾಪ್ ಡೀಲ್ ವಕ್ತಾರರು : ಹಂಗಾಮ ಪ್ಲೇ ದೇಶಾದ್ಯಂತ ನಮ್ಮ ಮೆಟ್ರೋಯೇತರ ಪ್ರೇಕ್ಷಕರಿಗೆ ಕಿರು-ಸ್ವರೂಪದ ವಿಡಿಯೋಗಳು, ಟಿವಿ ಕಾರ್ಯಕ್ರಮಗಳು, ಅನೇಕ ಭಾಷೆಗಳ್ಲು ಚಲನಚಿತ್ರಗಳ ವೈವಿಧ್ಯಮಯ ಲೈಬ್ರೆರಿಯನ್ನು ಹೊಂದಿದೆ. ನಮ್ಮ ಬಳಕೆದಾರರು ಈಗ ಅಗತ್ಯ ವಸ್ತುಗಳನ್ನು ಖರೀದಿಸಲು ಮತ್ತು ಸ್ನ್ಯಾಪ್ ಡೀಲ್ ನಲ್ಲಿ ಮನರಂಜನೆಯನ್ನು ಪಡೆಯುವುದನ್ನು ಇಷ್ಟಪಡುತ್ತಾರೆ ಎಂಬುದು ನಮಗೆ ಖಾತ್ರಿಯಾಗಿದೆ. ಯಾವುದೇ ಹೆಚ್ಚುವರಿ ಪಾವತಿ ಇಲ್ಲದೆ ಹಂಗಾಮ ಪ್ಲೇ ವಿಷಯವನ್ನು ಸ್ನ್ಯಾಪ್ ಡೀಲ್ ಅಪ್ಲಿಕೇಷನ್, ವೆಬ್ ಸೈಟ್ ಅಥವಾ ಎಂ-ಸೈಟ್ ಮೂಲಕ ಪ್ರವೇಶಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+