Gold Price: ಬೆಳ್ಳಿ ಬೆಲೆ ಮತ್ತೊಮ್ಮೆ 1 ಲಕ್ಷ ರೂಪಾಯಿ ಆಗುವುದು ಗ್ಯಾರಂಟಿ?
ಚಿನ್ನ & ಬೆಳ್ಳಿ ಬೆಲೆಯಲ್ಲಿ ಮತ್ತೆ ಭರ್ಜರಿ ಏರಿಕೆ ಕಂಡುಬರುತ್ತಿದೆ. ಅದರಲ್ಲೂ ಮದುವೆಗಳ ಸೀಸನ್ ಆರಂಭ ಆಗುತ್ತಿದ್ದಂತೆ ಇದೊಂದು ಹೊಸ ತಲೆನೋವು ಮಧ್ಯಮ & ಬಡ ವರ್ಗದ ಜನರನ್ನ ಕಾಡುತ್ತಿದೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಕಂಡಿದೆ. ಅದ್ರಲ್ಲೂ ಬೆಳ್ಳಿ ಬೆಲೆ ಮತ್ತೊಮ್ಮೆ 1 ಲಕ್ಷ ರೂಪಾಯಿ ತಲುಪುವ ಸಾಧ್ಯತೆ ದಟ್ಟವಾಗಿದೆ ಅಂತಿದ್ದಾರೆ ತಜ್ಞರು. ಹಾಗಾದ್ರೆ ಇದೀಗ ಎಷ್ಟಿದೆ ಬೆಳ್ಳಿ ಬೆಲೆ ಹಾಗೂ ಚಿನ್ನದ ಬೆಲೆ?
ಚಿನ್ನ & ಬೆಳ್ಳಿ ಬೆಲೆ ಸಾಕಷ್ಟು ಏರಿಳಿತ ಕಾಣುತ್ತಿದ್ದು, ಖರೀದಿ ಮಾಡುವವರು ಕೂಡ ಇದೇ ಕಾರಣಕ್ಕೆ ಗೊಂದಲದ ಪರಿಸ್ಥಿತಿ ಎದುರಿಸುವ ವಾತಾವರಣ ಇದೆ. ಯಾಕಂದ್ರೆ ಕಳೆದ ಮೂರು ಅಥವಾ ನಾಲ್ಕು ತಿಂಗಳಿಂದ ಚಿನ್ನ & ಬೆಳ್ಳಿ ಬೆಲೆಯಲ್ಲಿ ಸಾಕಷ್ಟು ಏರಿಳಿತಗಳು ಎದುರಾಗಿವೆ. ಜನರಿಗೆ ಕೂಡ ಇಂತಹ ಸಮಯದಲ್ಲಿ ಏನು ಮಾಡಬೇಕು? ಚಿನ್ನ & ಬೆಳ್ಳಿ ಬೆಲೆ ಹೆಚ್ಚಾದಾಗ ಖರೀದಿ ಮಾಡಬೇಕಾ? ಚಿನ್ನ & ಬೆಳ್ಳಿ ಬೆಲೆ ಇಳಿಕೆ ಕಂಡಾಗ ಖರೀದಿ ಮಾಡಬೇಕಾ? ಎನ್ನುವ ಗೊಂದಲಕ್ಕೆ ಸಿಲುಕಿದ್ದಾರೆ. ಹೀಗಿದ್ದಾಗಲೇ ನಿನ್ನೆ ಕೂಡ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನ & ಬೆಳ್ಳಿ ರೇಟ್? ಮುಂದೆ ಓದಿ.

ಚಿನ್ನ 11,500 ರೂಪಾಯಿ ಏರಿಕೆ!
ಕರ್ನಾಟಕ & ಬೆಂಗಳೂರಲ್ಲಿ ನಿನ್ನೆ ಚಿನ್ನದ ಬೆಲೆ ಏರಿಕೆ ಕಂಡು, 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಏರಿಕೆ ಬಳಿಕ ತಲೆನೋವು ಶುರುವಾಗಿದೆ. ಪ್ರತಿ 100 ಗ್ರಾಂಗೆ 11,500 ರೂಪಾಯಿ ಏರಿಕೆಯನ್ನು ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನ. ಈ ಹಿನ್ನೆಲೆ ಶುದ್ಧ ಬಂಗಾರದ ಬೆಲೆಯು, ಪ್ರತಿ 100 ಗ್ರಾಂಗೆ 7,27,700 ರೂಪಾಯಿ ಆಗಿದೆ. ಶುದ್ಧ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 72,770 ರೂಪಾಯಿಗೆ ಏರಿಕೆ ಆಗಿದ್ದು, ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಬಂಗಾರದ ಬೆಲೆ ಈಗ ಎಷ್ಟಿದೆ? ಬೆಳ್ಳಿ ಬೆಲೆ ಎಷ್ಟಾಗಿದೆ? ಆ ಬಗ್ಗೆ ಮಾಹಿತಿಗಾಗಿ ಮುಂದೆ ಇದೆ ಓದಿ.
ಬೆಳ್ಳಿ ಬೆಲೆ ಶೀಘ್ರದಲ್ಲೇ 1 ಲಕ್ಷ?
ಆಭರಣ ಚಿನ್ನ ಅಂದರೆ 22 ಕ್ಯಾರೆಟ್ ಚಿನ್ನದ ಬೆಲೆ ಏರಿಕೆ ಕಂಡು 100 ಗ್ರಾಂ ಆಭರಣ ಚಿನ್ನ ಬೆಲೆ ಈಗ 10,500 ರೂಪಾಯಿ ಏರಿಕೆ ಆಗಿದೆ. ಈ ಮೂಲಕ 10 ಗ್ರಾಂ ಆಭರಣ ಚಿನ್ನ ಬೆಲೆ ಈಗ 1050 ರೂಪಾಯಿ ಏರಿಕೆ ಆಗಿದೆ. ಆಭರಣ ಚಿನ್ನದ ಬೆಲೆ ಏರಿಕೆ ಬಳಿಕ 10 ಗ್ರಾಂ 66,700 ರೂಪಾಯಿಗೆ ಮಾರಾಟ ಆಗ್ತಿದೆ. ಮತ್ತೊಂದು ಕಡೆ ಬೆಳ್ಳಿ ಬೆಲೆಯಲ್ಲಿ 2000 ರೂಪಾಯಿ ಏರಿಕೆ ಕಂಡು 86,000 ರೂಪಾಯಿಗೆ ಮಾರಾಟ ಆಗುತ್ತಿದೆ. ಅದರಲ್ಲೂ ಬೆಳ್ಳಿ ಬೆಲೆ ಕಳೆದ 2 ದಿನಗಳಲ್ಲಿ ಬರೋಬ್ಬರಿ 6 ಸಾವಿರ ರೂಪಾಯಿ ಏರಿಕೆ ಕಂಡಿದೆ. ಹೀಗಾಗಿ ಬೆಳ್ಳಿ ಶೀಘ್ರದಲ್ಲೇ 1 ಲಕ್ಷ ರೂಪಾಯಿ ಪ್ರತಿ ಕೆಜಿಗೆ ತಲುಪುತ್ತಾ? ಎಂಬ ಪ್ರಶ್ನೆ ಕಾಡುತ್ತಿದೆ.












Click it and Unblock the Notifications