Gold-Silver Price: ಬೆಳ್ಳಿ ದರ ಬರೋಬ್ಬರಿ ₹38,000 ಏರಿಕೆ, ಚಿನ್ನದ ಬೆಲೆ ಹೆಚ್ಚಾಗಿದ್ದೆಷ್ಟು? ಇಲ್ಲಿದೆ ಡಿಟೇಲ್ಸ್
ಬೆಂಗಳೂರು: ಜಾಗತಿಕವಾಗಿ ರಾಜಕೀಯ, ಆರ್ಥಿಕ ನೀತಿಗಳ ಕಾರಣದಿಂದಾಗಿ ಚಿನ್ನ-ಬೆಳ್ಳಿ ದರವು ನಿರಂತರವಾಗಿ ದುಬಾರಿ ಆಗುತ್ತಿದೆ. ಬೆಳ್ಳಿ ದರವಂತೂ ಬರೋಬ್ಬರಿ 38,000 ಸಾವಿರ ರೂಪಾಯಿ ಹೆಚ್ಚಾಗಿದೆ. ಕಡಿಮೆ ಅವಧಿಯಲ್ಲಿ ಚಿನ್ನದ ದರ ಏರಿಕೆ ಪ್ರಮಾಣಕ್ಕಿಂತಲೂ ಅಧಿಕವಾಗಿ ಬೆಳ್ಳಿಯು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಇಂದು ಭಾನುವಾರ (ಜನವರಿ 18) ರಂದು ಚಿನ್ನ-ಬೆಳ್ಳಿ ದರವು ಸ್ಥಿರವಾಗಿದೆ. ಮುಂದಿನ ದಿನಗಳಲ್ಲಿ ಈ ಲೋಹಗಳ ಬೆಲೆ ಭಾರೀ ಹೆಚ್ಚಾಗುವ ಮುನ್ಸೂಚನೆ ಇದೆ.
ಭಾರತದ ಚಿನ್ನದ ಮಾರುಕಟ್ಟೆಯಲ್ಲಿ ಬೇಡಿಕೆ ಹಚ್ಚಿದೆ. ಆದರೆ ಬ್ಯಾಂಕುಗಳ ನಿರಂತರ ಖರೀದಿ ಪ್ರಕ್ರಿಯೆಯು, ಹೂಡಿಕೆದಾರರ ನಿರ್ಧಾರಗಳು ಚಿನ್ನ-ಬೆಳ್ಳಿಯ ದರ ಏರಿಕೆ ಕಾರಣವಾಗಿವೆ. ಪ್ರಮುಖ ಬ್ಯಾಂಕ್‌ಗಳು ಈಗಾಗಲೇ ಚಿನ್ನ ದಾಸ್ತಾನಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿವೆ. ದೇಶದಲ್ಲಿ ಕಳೆದ ಒಂದೇ ವಾರದಲ್ಲಿ ಅಂದರೆ ಜನವರಿ 12ರಿಂದ 18ರವರೆಗೆ ಚಿನ್ನವು ನಾಲ್ಕು ಬಾರಿ ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ ಎರಡು ಬಾರಿ ಅತ್ಯಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಈ ದರ ಏರಿಕೆಯು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಹೂಡಿಕೆದಾರರ ಮೊಗದಲ್ಲಿ ನಗು ಮೂಡಿಸಿದೆ.

ಚಿನ್ನದ ದರ ಹೆಚ್ಚಾಗಿದ್ದೆಷ್ಟು?
24 ಕ್ಯಾರಟ್ ಒಂದು ಗ್ರಾಂ ಚಿನ್ನವು ಜನವರಿ 12ರಂದು 169 ರೂಪಾಯಿ ಏರಿಕೆ ಆಗಿದೆ. ಜನವರಿ 13ರಂದು 38 ರೂಪಾಯಿ, ಜನವರಿ 14ರಂದು 147 ರೂಪಾಯಿ, ಜನವರಿ 17ರಂದು ಮತ್ತೆ 38 ರೂಪಾಯಿ ಹೆಚ್ಚಾಗಿದೆ. ಜನವರಿ 15 ಮತ್ತು 16ರಂದು ಕ್ರಮವಾಗಿ 38 ಮತ್ತು 18 ರೂಪಾಯಿ ಕುಸಿತ ಕಂಡಿದೆ. ಕುಸಿತಕ್ಕೆ ಹೋಲಿಸಿದರೆ ಯಾವಾಗಲೂ ಚಿನ್ನದ ಬೆಲೆ ಏರಿಕೆ ಪ್ರಮಾಣ ಹೆಚ್ಚಿರುತ್ತದೆ.
ಅದೇ ರೀತಿ 22 ಕ್ಯಾರಟ್ ಚಿನ್ನವು ಈ ಮೇಲಿನ ದಿನಾಂಕಗಳಂತೆ ಕ್ರಮವಾಗಿ ಒಂದು ಗ್ರಾಂ ಚಿನ್ನಕ್ಕೆ 155, 35, 135 ಹಾಗೂ 35 ರೂಪಾಯಿ ಹೆಚ್ಚಾಗಿದೆ. ಆ ಎರಡು ದಿನ (ಜನವರಿ 15 &16) ಕ್ರಮವಾಗಿ 35 ಮತ್ತು 20 ರೂಪಾಯಿ ಕುಸಿತ ಕಂಡಿದೆ. ಇಂದು ಭಾನುವಾರ ಜನವರಿ 18 ರಂದು 22 ಕ್ಯಾರಟ್ ಚಿನ್ನದ 10 ಗ್ರಾಂ ದರ 1,31,800 ರೂಪಾಯಿ ಇದ್ದು, 24 ಕ್ಯಾರಟ್ ಚಿನ್ನದ 10 ಗ್ರಾಮ ಬೆಲೆ 1,43, 780 ರೂಪಾಯಿ ಏರಿಕೆ ಆಗಿದೆ.
ಬೆಳ್ಳಿ ದರ 38,000 ಸಾವಿರ ಹೆಚ್ಚಳ!
ಚಿನ್ನದ ಬೆಲೆ ಹೆಚ್ಚಳಕ್ಕೆ ತೀವ್ರ ಪೈಪೋಟಿ ಒಡ್ಡಿದಂತೆ ಏರುಗತಿಯಲ್ಲಿ ಓಡುತ್ತಿರುವ ಬೆಳ್ಳಿ ಲೋಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ. ಖರೀದಿದಾರರಿಗೆ ದರ ಏರಿಕೆ ಆಘಾತ ನೀಡಿದರೆ, ಹೂಡಿಕೆ ದಾರರಿಗೆ ಕಳೆದ ಒಂದೇ ವಾರದಲ್ಲಿ (ಜನವರಿ 12-18) ಹೆಚ್ಚಿನ ಲಾಭ ತಂದುಕೊಂಡಿದೆ. ಕಳೆದ ಏಳು ದಿನದಲ್ಲಿ (ಒಟ್ಟು 38,000 ರೂ. ಏರಿಕೆ ಪೈಕಿ) ಒಂದೇ ದಿನ 1ಕೆಜಿ ಬೆಳ್ಳಿ ದರ ಗರಿಷ್ಠ 15,000 ರೂಪಾಯಿ ಏರಿಕೆ ಕಂಡು ದಾಖಲೆ ಬರೆಯಿತು.
ಏರಿಕೆ ನೋಡುವುದಾದರೆ 1ಕೆಜಿ ಬೆಳ್ಳಿಗೆ ಜನವರಿ 12ರಂದು ಒಂದೇ ದಿನ 10,000 ರೂಪಾಯಿ, ಜನವರಿ 13ಕ್ಕೆ 5000 ರೂಪಾಯಿ, ಜನವರಿ 14ರಂದು 15,000 ರೂಪಾಯಿ, ಜನವರಿ 15ರಂದು ಮತ್ತೆ 5000 ರೂಪಾಯಿ, ಜನವರಿ 17ಕ್ಕೆ 3000 ರೂ. ಹೆಚ್ಚಾಗಿದೆ. ಇದರಲ್ಲಿ ಜನವರಿ 16 ರಂದು ಒಂದು ದಿನ ಮಾತ್ರವೇ -3000 ರೂ.ಕುಸಿತ ಕಂಡಿದೆ. ಈ ಮೂಲಕ ಬೆಳ್ಳಿ ದರ ಏರಿಕೆ ಬಿರುಗಾಳಿ ವೇಗದಲ್ಲಿ ಹೆಚ್ಚಾಗಿದೆ.
ಈ ವರ್ಷ ಬೆಳ್ಳಿ ಪೂರೈಕೆ ಕೊರತೆ, ಬೆಲೆ ಗಗನಕ್ಕೆ!
ಈ ರೀತಿ ಏರಿಕೆ ಆಗುವ ಬೆಳ್ಳಿ ದರವು ಕಳೆದ 13 ತಿಂಗಳಲ್ಲಿ ಶೇಕಡಾ 210ರಷ್ಟು ಏರಿಕೆ ಆಗಿದೆ. ವಿದೇಶಗಳಲ್ಲಿ ಬೆಳ್ಳಿ ಗಣಿಕಾರಿಯಲ್ಲಿನ ಉತ್ಪಾದನೆ ಕಡಿಮೆ ಆಗಿದೆ. ಖರೀತಿ, ಕೈಗಾರಿಕೆ ಬಳಕೆ ಹಾಗೂ ಇತರ ಬಳಕೆ ಉದ್ದೇಶ ಹೆಚ್ಚಾಗಿದೆ. ಹೀಗಾಗಿ ಬೇಡಿಕೆ ಹೆಚ್ಚಾಗುತ್ತಿದ್ದು, ಈ ವರ್ಷ ಪೂರೈಕೆಯಲ್ಲಿ ಕೊರತೆ ಉಂಟಾಗುವ ಮುನ್ಸೂಚನೆ ಇದೆ ಎಂದು ಮಾರುಕಟ್ಟೆ ತಜ್ಞರು ಮಾಹಿತಿ ನೀಡಿದ್ದಾರೆ. ಪೂರೈಕೆ ಕೊರತೆ ಆದಂತೆಲ್ಲ ಬೆಳ್ಳಿ ದರ ಮತ್ತಷ್ಟು ದುಬಾರಿ ಆಗುವ ನಿರೀಕ್ಷೆಗಳು ಇವೆ.












Click it and Unblock the Notifications