Gold Silver Price: ಇಂದು ಬೆಳ್ಳಿ ದರ ದಾಖಲೆಯ ರೂ.50,000 ಕುಸಿತ, ಚಿನ್ನ ಇಳಿಕೆ ಆಗಿದ್ದೆಷ್ಟು? ಅಪ್ಡೇಟ್ಸ್
ಬೆಂಗಳೂರು: ಕೆಲವು ವಾರಗಳಿಂದ ನಿರಂತರವಾಗಿ ಏರುಗತ್ತಿಯನ್ನು ಮಾತ್ರವೇ ಕಂಡಿದ್ದ ಚಿನ್ನ-ಬೆಳ್ಳಿ ದರದಲ್ಲಿ ಮಹಾಕುಸಿತ ಸಂಭವಿಸಿದೆ. ಅದರಲ್ಲೂ ಒಂದೇ ದಿನಕ್ಕೆ ಬಿಳಿ ಲೋಹ ಬೆಳ್ಳಿ ದರವು ಬರೋಬ್ಬರಿ 50,000 ರೂಪಾಯಿ ಇಳಿಕೆ ಆಗಿದ್ದು, ಹೂಡಿಕೆದಾರರಿಗೆ ಶಾಕ್ ನೀಡಿದೆ. ಈ ಮೂಲಕ ಗ್ರಾಹಕರಿಗೆ ನಿಟ್ಟುಸಿರುವ ಬಿಡುವಂತಾಗಿದೆ. ಬೆಳ್ಳಿ ಐದು ದಿನದ ಹಿಂದೆ 4.10 ಲಕ್ಷ ರೂಪಾಯಿಗೆ ಏರಿಕೆ ಆಗಿತ್ತು. ಚಿನ್ನ ಬೆಳ್ಳಿಯ ಹೊಸ ದರದ ಮಾಹಿತಿ ಮುಂದಿದೆ.
ಜನವರಿ 30ರಿಂದ ಚಿನ್ನ ಹಾಗೂ ಬೆಳ್ಳಿ ಬೆಲೆ ಇಳಿಕೆ ಮುಂದುವರಿದಿದೆ. ಇಂದು ಫೆಬ್ರವರಿ 02ರಂದು ಸತತ ನಾಲ್ಕನೇ ದಿನವೂ ಬೆಳ್ಳಿ ಇಳಿಕೆಯ ಹಾದಿ ಹಿಡಿದಿದೆ. ಬೆಳ್ಳಿ ರೋಬ್ಬರಿ 50,000 ರೂಪಾಯಿ ಕುಸಿಯುವ ಮೂಲಕ ಒಂದು ಕೆಜಿಯ ದರವು 3,00,000 ರೂಪಾಯಿ ತಲುಪಿದೆ. ಈ ಹೊಸ ದರದಲ್ಲಿ ಗ್ರಾಹಕರಿಗೆ ಖುಷಿ ಸುದ್ದಿ ಸಿಕ್ಕಿದ್ದು, ಅಧಿಕ ಲಾಭದ ಆಸೆಗೆ ಹೂಡಿಕೆ ಮಾಡಿದ್ದ ಹೂಡಿಕೆದಾರರು ನಾಲ್ಕು ದಿನದಿಂದ ನಷ್ಟಕ್ಕೀಡಾಗಿದ್ದಾರೆ. ಕೆಲವರು ಬೆಳ್ಳಿ, ಚಿನ್ನದ ಸಹವಾಸ ಸಾಕೆಂದು ಹೂಡಿಕೆಯನ್ನು ಹಿಂಪಡೆಯುತ್ತಿರುವುದು ಸಾಮಾನ್ಯವಾಗಿದೆ. ಗ್ರಾಹಕರಿಗೆ ದರ ಇಳಿಕೆ ಕೊಂಚ ನೆಮ್ಮದಿ ನೀಡಿದೆ.

ಇಂದು ಚಿನ್ನದ ಬೆಲೆ ಎಷ್ಟಿದೆ? ಇಳಿಕೆ ಆಗಿದ್ದೆಷ್ಟು?
ಇನ್ನೂ 24 ಕ್ಯಾರಟ್ ಅಪರಂಜಿ ಚಿನ್ನದ 10 ಗ್ರಾಂ ದರ ಇಂದು ಸೋಮವಾರ ಮತ್ತೆ 9050 ರೂಪಾಯಿ ಕುಸಿಯುವ ಮೂಲಕ 1,51,530 ರೂಪಾಯಿಗೆ ತಲುಪಿದೆ. ನೆನ್ನೆ ಭಾನುವಾರ (ಫೆಬ್ರವರಿ 1) ಇದರ ದರ 1,60, 580 ರೂಪಾಯಿ ಇತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆ ಆಗುವ ಮುನ್ಸೂಚನೆ ಇದೆ.
22 ಕ್ಯಾರಟ್ ಆಭರಣ ಚಿನ್ನದ 10ಗ್ರಾಂ ಬೆಲೆ 8,300 ರೂಪಾಯಿ ಕುಸಿತ ಕಾಣುವ ಮೂಲಕ 1,38, ರೂಪಾಯಿಗೆ ಮುಟ್ಟಿದೆ. ಇದರ ಬೆಲೆ ನೆನ್ನೆ ಫೆಬ್ರವರಿ 1ರಂದು 1,47,200 ರೂಪಾಯಿ ಇತ್ತು. ಈ ಒಂದೇ ದಿನದಲ್ಲಿ ಭಾರೀ ಪ್ರಮಾಣದಲ್ಲಿ ಈ ಲೋಹಗಳ ದರದಲ್ಲಿ ವ್ಯತ್ಯಾಸವಾಗಿದೆ. ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ, ಹೂಡಿಕೆ, ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಚಿನ್ನದ ದರ ಇಳಿಕೆ ವಿವರ
ಜನವರಿ 30: 24k 1ಗ್ರಾಂ ದರ 965 ರೂ. ಇಳಿಕೆ, 22k 1ಗ್ರಾಂ ಬೆಲೆ 885 ರೂ.
ಜನವರಿ 31: 24k 1ಗ್ರಾಂ ದರ 862 ರೂ. ಇಳಿಕೆ, 22k 1ಗ್ರಾಂ ಬೆಲೆ 790 ರೂ.
ಫೆಬ್ರವರಿ 02: 24k 1ಗ್ರಾಂ ದರ 905 ರೂ. ಇಳಿಕೆ, 22k 1ಗ್ರಾಂ ಬೆಲೆ 830 ರೂ.












Click it and Unblock the Notifications