Karnataka Bank: ಕರ್ಣಾಟಕ ಬ್ಯಾಂಕ್‌ನಲ್ಲಿ ಮಹತ್ವದ ಬದಲಾವಣೆ, ಗ್ರಾಹಕರಿಗೆ ಹೊಸ ಸಿಇಓ ಹೇಳಿದ್ದೇನು ?
Karnataka Bank: ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್‌ನಲ್ಲಿ ಮಹತ್ವದ ಬದಲಾವಣೆ ಆಗಿದೆ. ಇತ್ತೀಚಿಗೆ ಈ ಬ್ಯಾಂಕ್‌ನ ವಿಚಾರಕ್ಕೆ ಎದುರಾಗಿದ್ದ ಗೊಂದಲವು ಗ್ರಾಹಕರಲ್ಲಿ ಆತಂಕವನ್ನು ಮೂಡಿಸಿತ್ತು. ಹಲವು ಗ್ರಾಹಕರು ಬ್ಯಾಂಕ್‌ನಿಂದ ಹಣ ವಾಪಸ್ ತೆಗೆದುಕೊಂಡು ಖಾತೆಗಳನ್ನು ಮುಚ್ಚುತ್ತಿದ್ದರು. ಇದೀಗ ಕರ್ಣಾಟಕ ಬ್ಯಾಂಕ್‌ನಲ್ಲಿ ಮಹತ್ವದ ಬದಲಾವಣೆ ಆಗಿದೆ. ಏನಿದು ಬದಲಾವಣೆ ಹಾಗೂ ಹೊಸ ಎಂಡಿ ಬ್ಯಾಂಕ್‌ನ ಆರ್ಥಿಕ ವಿಚಾರದ ಬಗ್ಗೆ ಹಾಗೂ ಗ್ರಾಹಕರಿಗೆ ಏನು ಸಂದೇಶ ಕೊಟ್ಟಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಕರ್ಣಾಟಕ ಬ್ಯಾಂಕ್‌ಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ಸ ಬಂದಿದೆ. ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಳ್ಳುವ ಹಾಗೂ ಆಂತರಿಕ ಬದಲಾವಣೆಗೆ ಬ್ಯಾಂಕ್‌ನ ಆಡಳಿತ ಮಂಡಳಿ ಮುಂದಾಗಿದೆ. ಕರ್ಣಾಟಕ ಬ್ಯಾಂಕ್‌ಗೆ ನೂತನ ವ್ಯವಸ್ಥಾಪ ನಿರ್ದೇಶಕ (ಎಂಡಿ) ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಓ) ರಾಘವೇಂದ್ರ ಶ್ರೀನಿವಾಸ್ ಭಟ್ ಅವರನ್ನು ನೇಮಕ ಮಾಡಲಾಗಿದೆ. ನಾಳೆಯಿಂದ ಜಾರಿಗೆ ಬರುವಂತೆ ಈ ಆದೇಶವನ್ನು ಮಾಡಲಾಗಿದೆ.

ನಾಳೆಯಿಂದ ಜಾರಿಗೆ ಬರುವಂತೆ ಮುಂದಿನ ಮೂರು ತಿಂಗಳ ಅವಧಿಗೆ ಮಧ್ಯಂತರ ಎಂಡಿ ಹಾಗೂ ಸಿಇಒ ಆಗಿ ರಾಘವೇಂದ್ರ ಶ್ರೀನಿವಾಸ್ ಭಟ್ ಅವರನ್ನು ನೇಮಕ ಮಾಡಲಾಗಿದೆ. ಹೊಸ ಎಂಡಿ ಹಾಗೂ ಸಿಇಒ ಅವರು ನೇಮಕವಾಗುವವರೆಗೆ ಇಲ್ಲವೇ ಮೂರು ತಿಂಗಳವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಅನ್ವಯವಾಗುವಂತೆ ಇವರು ಇರಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ರಾಘವೇಂದ್ರ ಅವರು, ಗುಮಾಸ್ತರಾಗಿದ್ದರು ಅಲ್ಲಿಂದ ಇದೀಗ ಸಿಇಒ ಹುದ್ದೆಗೇರಿದ್ದಾರೆ. ಅವರು 1981 ರಲ್ಲಿ ಬ್ಯಾಂಕ್‌ನ ಗುಮಾಸ್ತರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು. ಸುದೀರ್ಘ 44 ಅವರು ಕರ್ಣಾಟಕ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ.
ಗ್ರಾಹಕರ ನಂಬಿಕೆ ಉಳಿಸಿಕೊಳ್ಳಲಿದ್ದೇವೆ: ಇನ್ನು ರಾಘವೇಂದ್ರ ಶ್ರೀನಿವಾಸ್ ಭಟ್ ಅವರ ಮಾರ್ಗದರ್ಶನದಲ್ಲಿ ಬ್ಯಾಂಕ್ ಬೆಳವಣಿಗೆ ಆಗಲಿದೆ. ಅಲ್ಲದೇ ಯಶಸ್ಸು ಗಳಿಸಲಿದೆ ಎಂದು ಕರ್ನಾಟಕ ಬ್ಯಾಂಕ್ ಹೇಳಿದೆ. ಈ ಬಗ್ಗೆ ಮಾತನಾಡಿರುವ ರಾಘವೇಂದ್ರ ಅವರು, ಈ ಹುದ್ದೆಯ ಕುರಿತು ನನಗೆ ತುಂಬಾ ಹೆಮ್ಮೆ ಇದೆ. ಬ್ಯಾಂಕ್ ಶತಮಾನಗಳಿಂದಲೂ ಗ್ರಾಹಕರಿಂದ ಗಳಿಸಿರುವ ನಂಬಿಕೆ ಹಾಗೂ ವಿಶ್ವಾಸ ಉಳಿಸಿಕೊಳ್ಳಲಿದ್ದೇವೆ. ಎಲ್ಲಾ ಪಾಲುದಾರರೊಂದಿಗೆ ಕೆಲಸ ಮಾಡುವುದಕ್ಕೆ ನಾನು ಸಜ್ಜಾಗಿದ್ದೇನೆ ಎಂದಿದ್ದಾರೆ.
ಕರ್ಣಾಟಕ ಬ್ಯಾಂಕ್‌ನಲ್ಲಿ ಗೊಂದಲ ಸೃಷ್ಟಿಯಾಗಿತ್ತು: ಇನ್ನು ಶ್ರೀಕೃಷ್ಣನ್ ಹರಿ ಹರ ಶರ್ಮಾ ಅವರು ಏಕಾಏಕಿ ಜೂನ್ 29 ರಂದು ಎಂಡಿ ಹಾಗೂ ಸಿಇಒ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿರುವುದಾಗಿ ಹೇಳಿದ್ದರೂ ಆ ಸಂದರ್ಭದಲ್ಲಿ ಭಾರೀ ಗೊಂದಲಕ್ಕೆ ಕಾರಣವಾಗಿತ್ತು. ಇದರಿಂದ ಏಕಾಏಕಿ ಬ್ಯಾಂಕ್‌ನ ಷೇರುಗಳಲ್ಲಿ ಭಾರೀ ದೊಡ್ಡಮಟ್ಟದ ವ್ಯತ್ಯಾಸ ಆಗಿತ್ತು. ಅಲ್ಲದೇ ಹಲವರು ಬ್ಯಾಂಕ್ ನಿಂದ ಹಣ ತೆಗೆಯುವುದಕ್ಕೆ ಪ್ರಾರಂಭಿಸಿದ್ದರು. ಇದರ ಬೆನ್ನಲ್ಲೇ ಮಧ್ಯಂತರ ಅವಧಿಗೆ ಹೊಸಬರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇನ್ನು ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಅವರು ಸಹ ಮಂಗಳೂರಿಗೆ ಸ್ಥಳಾಂತರವಾಗಲು ಸಾಧ್ಯವಾಗದ ಕಾರಣ ರಾಜೀನಾಮೆ ನೀಡಿದ್ದರು.












Click it and Unblock the Notifications