ವಾಟ್ಸಾಪ್ ಬದಲಿ 'ಸಿಗ್ನಲ್ ಆ್ಯಪ್‌'ಗೆ ಹೆಚ್ಚಿದ ಡಿಮ್ಯಾಂಡ್: ಅತಿ ಹೆಚ್ಚು ಡೌನ್‌ಲೋಡ್‌

ನವದೆಹಲಿ, ಜನವರಿ 11: ವಾಟ್ಸಾಪ್‌ ಬದಲಿಗೆ ಸಿಗ್ನಲ್‌ ಆ್ಯಪ್ ಬಳಸಿ ಎಂಬ ಎಲೋನ್‌ ಮಸ್ಕ್‌ ಟ್ವೀಟ್‌ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಇದರ ಜೊತೆಗೆ ವಾಟ್ಸಾಪ್ ಕೂಡ ತನ್ನ ಗೌಪ್ಯತೆ ನೀತಿಗಳನ್ನು ನವೀಕರಿಸಿದ ಮೇಲಂತೂ, ಜನರು ಸಿಗ್ನಲ್ ಆ್ಯಪ್‌ ಕಡೆಗೆ ಹೆಚ್ಚು ಮುಖ ಮಾಡುತ್ತಿದ್ದಾರೆ.

ಸದ್ಯ ವಾಟ್ಸಾಪ್‌ ನ ಸೇವಾ ನಿಯಮವನ್ನು ವಿರೋಧಿಸುತ್ತಿರುವ ಹೆಚ್ಚಿನ ಮಂದಿ ಹಾಗೂ ಮುಂದಿನ ದಿನಗಳಲ್ಲಿ ಹಣ ಪಾವತಿ ಮಾಡಬೇಕೆಂದಿರುವ ಟೆಲಿಗ್ರಾಮ್‌ ಆ್ಯಪ್‌ಗೂ ಗುಡ್‌ಬೈ ಹೇಳಲು ಜನರು ಮನಸ್ಸು ಮಾಡುತ್ತಿದ್ದಾರೆ. ಹೀಗಾಗಿ ಸಿಗ್ನಲ್ ಆ್ಯಪ್‌ಗೆ ಬೇಡಿಕೆ ಹೆಚ್ಚಿದೆ.

ಆ್ಪ್ ಸ್ಟೋರ್‌ನಲ್ಲಿ ಉಚಿತ ಅಪ್ಲಿಕೇಶನ್‌ಗಳ ವಿಭಾಗದಲ್ಲಿ ಡೌನ್‌ಲೋಡ್ ಮಾಡಲಾದ ನಂಬರ್ 1 ಆಗಿ ಮಾರ್ಪಟ್ಟಿದೆ ಎಂದು ಟ್ವೀಟ್‌ನಲ್ಲಿ ಕಂಪನಿಯು ತಿಳಿಸಿದೆ. ಭಾರತ ಮಾತ್ರವಲ್ಲ, ಜರ್ಮನಿ, ಫ್ರಾನ್ಸ್, ಆಸ್ಟ್ರಿಯಾ, ಫಿನ್‌ಲ್ಯಾಂಡ್, ಹಾಂಗ್ ಕಾಂಗ್ ಮತ್ತು ಸ್ವಿಟ್ಜರ್ಲೆಂಡ್‌ಗಳಲ್ಲಿ ಇದು ಡೌನ್‌ಲೋಡ್ ಮಾಡಲಾದ ಟಾಪ್ ಆ್ಯಪ್ ಆಗಿ ಮಾರ್ಪಟ್ಟಿದೆ.

 Signal Climbs To Top Of Free Apps Category On App Store

ಸಿಗ್ನಲ್ ಆ್ಯಪ್ ಗೌಪ್ಯತೆಯ ಮೇಲೆ ಹೆಚ್ಚಿನ ಗಮನವನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಇದು ಕೂಡ ವಾಟ್ಸಾಪ್‌ನಂತೆಯೇ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸೇವೆಯಾಗಿದೆ.

ಈ ಅಪ್ಲಿಕೇಶನ್ ಆ್ಯಂಡ್ರಾಯ್ಡ್ ಮತ್ತು ಐಒಎಸ್ ಮತ್ತು ಐಪ್ಯಾಡ್‌ನಲ್ಲಿ ಲಭ್ಯವಿದೆ. ವಿಂಡೋಸ್, ಲಿನಕ್ಸ್ ಮತ್ತು ಮ್ಯಾಕ್ ಬಳಕೆದಾರರು ಸಹ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಇದನ್ನು ಈಗ ಮೊಬೈಲ್ ಮೆಸೇಜಿಂಗ್ ಅಪ್ಲಿಕೇಶನ್‌ನಂತೆ ಮತ್ತು ಫೇಸ್‌ಬುಕ್ ಪರ್ಯಾಯವಾಗಿ ನೋಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+