ಸಿದ್ದು ಬಜೆಟಿನಲ್ಲಿ ಐಟಿ-ಬಿಟಿ ಕ್ಷೇತ್ರಕ್ಕೆ ಮತ್ತೆ ನಿರಾಶೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 15: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 12ನೇ ಬಜೆಟ್ ನಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೇರವಾಗಿ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ಸತತ ಎರಡನೇ ವರ್ಷ ಐಟಿ-ಬಿಟಿ ಕ್ಷೇತ್ರವನ್ನು ಕಡೆಗಣಿಸಲಾಗಿದೆ.

ಐಟಿ-ಬಿಟಿ ಕಂಪನಿಗಳನ್ನು ರಾಜಧಾನಿ ಬೆಂಗಳೂರು ಬಿಟ್ಟು ರಾಜ್ಯದ ಇತರೆಡೆಗೂ ವಿಸ್ತರಿಸುವ ಪ್ರಯತ್ನ ಈ ಬಾರಿಯ ಬಜೆಟ್‌ನಲ್ಲಾಗುವ ನಿರೀಕ್ಷೆ ಸುಳ್ಳಾಗಿದೆ. ಎರಡು ಹಾಗೂ ಮೂರನೇ ಸ್ತರದ ನಗರಗಳಿಗೆ ಐಟಿ ಕಂಪನಿಗಳನ್ನು ಕರೆದೊಯ್ಯುವಲ್ಲಿ ಸರ್ಕಾರ ಸಂಪೂರ್ಣ ಮತ್ತೆ ವಿಫಲವಾಗಿದೆ. ಕಂಪನಿಗಳ ಬಹುವಾರ್ಷಿಕ ಬೇಡಿಯಾದ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.[2016: ಬಜೆಟ್ಟಿನಲ್ಲಿ ಐಟಿ-ಬಿಟಿಗೆ ಏನು ಗಿಟ್ಟಿಲ್ಲ]

ಮಾಹಿತಿ ತಂತ್ರಜ್ಞಾನ,ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಿಕ್ಕಿರುವ ಕೊಡುಗೆ ಇಲ್ಲಿದೆ:

ಸೂಕ್ತ ತಾಂತ್ರಿಕ ಸಂಪನ್ಮೂಲಗಳನ್ನು, ಕೌಶಲ್ಯ ಅಭಿವೃದ್ಧಿಯನ್ನು ಸೃಜಿಸಲು ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು
ದೃಷ್ಟಿಯಲ್ಲಿಟ್ಟುಕೊಂಡು ಸಾಮರ್ಥ್ಯ ನಿರ್ಮಾಣಕ್ಕೆ ಒತ್ತು ನೀಡಲು ಕೈಗಾರಿಕೋದ್ಯಮದ ಸಹಯೋಗದೊಂದಿಗೆ
'Center of Excellence in Data Sciencs and Artifical Intelligence' and 'Cyber Security' ಕೇಂದ್ರಗಳ
ಸ್ಥಾಪನೆ.[ಬಜೆಟ್ LIVE: ರೈತರ ಸಾಲ ಮನ್ನಾ ಇಲ್ಲ, ಎಣ್ಣೆ ಬೆಲೆ ಇಳಿದಿಲ್ಲ]

Siddaramaiah Karnataka Budget 2017-18 : IT BT Sector Share

* ಯುವ ಯುಗ ಕಾರ್ಯಕ್ರಮದಡಿ, ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಲು ಭಾರತ ಸರ್ಕಾರ, SCP/TSP, ಕೈಗಾರಿಕೆಗಳ
ವಂತಿಗೆಯಿಂದ ನಿಧಿಗಳನ್ನು ಸಂಗ್ರಹಿಸುವ ಮೂಲಕ ಐಟಿ, ಎಲೆಕ್ಟ್ರಾನಿಕ್ಸ್, ಅನಿಮೇ/ನ್ ಮತ್ತು ಇತರ ವಲಯಗಳಲ್ಲಿ
1,10,000 ವ್ಯಕ್ತಿಗಳಿಗೆ ತರಬೇತಿ.

* 2/3 ನೇ ಹಂತದ ನಗರಗಳಲ್ಲಿ ಚೈತನ್ಯಪೂರ್ಣ ತಂತ್ರಜ್ಞಾನ (Vibrant Technology) ಮತ್ತು ಹೊಸ ಪರಿಕಲ್ಪನೆಯ
ನವೀನ ಪರಿಸರ ವ್ಯವಸ್ಥೆ ಸೃಜಿಸಲು ಕೈಗಾರಿಕೋದ್ಯಮದ ಸಹಯೋಗದೊಂದಿಗೆ ಹುಬ್ಬಳ್ಳಿಯಲ್ಲಿ VLSI Incubator
ಮತ್ತು Brown field ESDM Cluster ಸ್ಥಾಪನೆ.

* ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಉಚಿತ ವೈ-ಫೈ ಸೌಲಭ್ಯ; ಕಿಯೋನಿಕ್ಸ್ ಸಾರಥ್ಯದಲ್ಲಿ ಖಾಸಗಿ-ಸಹಭಾಗಿತ್ವದಮೂಲಕ Viability Gap Funding ನೀಡಿ ಮೊದಲ ಹಂತದಲ್ಲಿ ರಾಜ್ಯದ 2500 ಗ್ರಾಮ ಪಂಚಾಯತಿಗಳಲ್ಲಿ 50 ಕೋಟಿ ರೂ.

* ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ 35.69 ಕೋಟಿ ರೂ. ಅಂದಾಜು ವೆಚ್ಚದ ಅತ್ಯಾಧುನಿಕ
ತಾರಾಲಯ ಡಿಸೆಂಬರ್ 2017 ರೊಳಗೆ ಕಾರ್ಯಾರಂಭ.

* ಮಡಿಕೇರಿ ಮತ್ತು ಗದಗನಲ್ಲಿ ತಲಾ 5.75 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 10 ಮೀ ಗೋಳಾಕೃತಿಯ 3ಡಿ ಕಿರು
ತಾರಾಲಯ ಸ್ಥಾಪನೆ.
* 30 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನ ಗ್ಯಾಲರಿ ಕಟ್ಟಡ
ಕಾಮಗಾರಿಗೆ ಚಾಲನೆ.

* ಐದು ಜಿಲ್ಲೆಗಳಿಗೆ ಒಂದರಂತೆ ಸಂಚಾರಿ ತಾರಾಲಯ ವಾಹನಗಳ ನಿಯೋಜನೆ ಮೂಲಕ ಸಂಚಾರಿ ತಾರಾಲಯ
ಕಾರ್ಯಕ್ರಮ ಅನುಷ್ಠಾನ.
* ಬೆಂಗಳೂರಿನ ಐಐಐಟಿ ಸಂಸ್ಥೆಯಲ್ಲಿ ಯಾಂತ್ರಿಕ ಬುದ್ಧಿಶಕ್ತಿ ಮತ್ತು ರೋಬೋಟಿಕ್ಸ್ ಕೇಂದ್ರ ಸ್ಥಾಪನೆಗೆ ಕ್ರಮ. - 5 ಕೋಟಿ
ರೂ.
* ಕೃಷಿ, ನಗರಾಭಿವೃದ್ಧಿ ಹಾಗೂ ಪಾರಂಪರಿಕ ಸ್ಥಳಗಳಲ್ಲಿ ಮಾನವರಹಿತ ವೈಮಾನಿಕ ವ್ಯವಸ್ಥೆ (ಯು.ಎ.ಎಸ್)ಯನ್ನು
ಪ್ರಾಯೋಗಿಕ ಸಹಯೋಜನೆ ಮೂಲಕ ಕೈಗೆತ್ತಿಕೊಳ್ಳಲು 2 ಕೋಟಿ ರೂ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Budget 2017-18: Information Technology, Bio Technology sector not satisfied with the share they got.
Please Wait while comments are loading...