ಷೇರುಪೇಟೆಯಲ್ಲಿ ಗೂಳಿ ಓಟ: ಸೆನ್ಸೆಕ್ಸ್ ಏರಿಕೆ, 13,500ರ ಗಡಿದಾಟಿದ ನಿಫ್ಟಿ

ನವದೆಹಲಿ, ಡಿಸೆಂಬರ್ 11: ಭಾರತೀಯ ಷೇರುಪೇಟೆಯ ನಾಗಾಲೋಟ ಶುಕ್ರವಾರವೂ ಮುಂದುವರಿದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 139 ಪಾಯಿಂಟ್ಸ್ ಜಿಗಿತ ಕಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 13,500 ಹಂತವನ್ನು ದಾಟಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 139.11 ಪಾಯಿಂಟ್ಸ್‌ ಅಥವಾ ಶೇಕಡಾ 0.30ರಷ್ಟು ಏರಿಕೆಗೊಂಡು 46,099.11 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 35.60 ಪಾಯಿಂಟ್ಸ್‌ ಅಥವಾ ಶೇಕಡಾ 0.26ರಷ್ಟು ಹೆಚ್ಚಳಗೊಂಡು 13,513.90 ಪಾಯಿಂಟ್ಸ್‌ ದಾಖಲಾಗಿದೆ.

ಇಂದು ಷೇರುಪೇಟೆಯಲ್ಲಿ 1,713 ಷೇರುಗಳು ಲಾಭಗಳಿಸಿದ್ದು, 1,188 ಷೇರುಗಳು ನಷ್ಟ ಅನುಭವಿಸಿದೆ. ಜೊತೆಗೆ 148 ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

 Sensex Rise 139 Points And Nifty Ends Below 13,500 Points: Metal Shine

ಎನ್‌ಟಿಪಿಸಿ, ಒಎನ್‌ಜಿಸಿ, ಗೇಲ್, ಕೋಲ್ ಇಂಡಿಯಾ ಮತ್ತು ಟಾಟಾ ಸ್ಟೀಲ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಕಂಪನಿಗಳಾಗಿದ್ದು, ಡಿವಿಸ್ ಲ್ಯಾಬ್ಸ್, ಆಕ್ಸಿಸ್ ಬ್ಯಾಂಕ್, ಎಂ & ಎಂ, ಸಿಪ್ಲಾ ಮತ್ತು ಅದಾನಿ ಪೋರ್ಟ್ಸ್‌ ನಷ್ಟ ಅನುಭವಿಸಿದ ಷೇರುಗಳಾಗಿವೆ.

ಷೇರುಪೇಟೆಯು ಮಿಶ್ರ ಪ್ರತಿಕ್ರಿಯೆ ಕಂಡಿದ್ದು, ಎನರ್ಜಿ, ಮೆಟಲ್ ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು ತಲಾ ಶೇಕಡಾ 1ರಷ್ಟು ಏರಿಕೆಯಾಗಿದ್ದು, ಫಾರ್ಮಾ, ಐಟಿ ಮತ್ತು ಆಟೋ ಷೇರುಗಳು ಹೆಚ್ಚು ಮಾರಾಟ ಕಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+