• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯ ಷೇರುಪೇಟೆ ಚೇತರಿಕೆ: ಸೆನ್ಸೆಕ್ಸ್ 524 ಪಾಯಿಂಟ್ಸ್ ಏರಿಕೆ

|

ಮುಂಬೈ, ಜೂನ್ 19: ಇಂದು ಭಾರತೀಯ ಷೇರು ಮಾರುಕಟ್ಟೆ ಚೇತರಿಕೆ ಸಾಧಿಸಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಸುಮಾರು 523.68 ಅಂಕಗಳನ್ನು ಗಳಿಸಿ 34731.73 ಮಟ್ಟದಲ್ಲಿ ಮುಚ್ಚಿದೆ. 152.75 ಪಾಯಿಂಟ್‌ಗಳ ಲಾಭದೊಂದಿಗೆ ನಿಫ್ಟಿ 10244.40 ಮಟ್ಟದಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ.

      ಸರ್ವಪಕ್ಷಗಳ ಸಭೆ, ಎರಡು ಪ್ರಮುಖ ಪಕ್ಷಗಳಿಗೆ ಅವಮಾನ ಮಾಡಿದ ಮೋದಿ | Oneindia Kannada

      ಇಂದು ಬಿಎಸ್‌ಇಯಲ್ಲಿ ಒಟ್ಟು 2778 ಕಂಪನಿಗಳು ವಹಿವಾಟು ನಡೆಸಿದ್ದು, ಈ ಪೈಕಿ ಸುಮಾರು 1774 ಷೇರುಗಳು ತೀವ್ರವಾಗಿ ಏರಿ 856 ಷೇರುಗಳು ಮುಚ್ಚಲ್ಪಟ್ಟವು. ಅದೇ ಸಮಯದಲ್ಲಿ, 148 ಕಂಪನಿಗಳ ಷೇರು ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಅದೇ ಸಮಯದಲ್ಲಿ, ಡಾಲರ್ ಎದುರು ರೂಪಾಯಿ ಮೌಲ್ಯ 76.18 ರೂ.ಗೆ ಕೊನೆಗೊಂಡಿತು, ಡಾಲರ್ ವಿರುದ್ಧ 5 ಪೈಸೆ ಕಳೆದುಕೊಂಡಿತು.

      ಮುಖೇಶ್ ಅಂಬಾನಿ RIL ಈಗ ಸಂಪೂರ್ಣ ಸಾಲ ಮುಕ್ತ ಸಂಸ್ಥೆ!

      ಅಗ್ರಗಳಿಕೆ ಸಾಧಿಸಿದ ಷೇರುಗಳು (ನಿಫ್ಟಿ)

      ನಿಫ್ಟಿಯಲ್ಲಿ ಅಗ್ರ ಲಾಭ ಗಳಿಸಿದ ಬಜಾಜ್ ಫಿನ್‌ಸರ್ವ್ ಪಾಲು ಸುಮಾರು 472 ರುಪಾಯಿಗಳ ಏರಿಕೆ ಕಂಡು 5,899.80 ರು.ಗೆ ತಲುಪಿದೆ.

      ಬಜಾಜ್ ಫೈನಾನ್ಸ್ ಷೇರುಗಳು ಸುಮಾರು 173 ರುಪಾಯಿಗಳ ಏರಿಕೆ ಕಂಡು 2,698.60 ರುಪಾಯಿ, ಟಾಟಾ ಮೋಟಾರ್ಸ್ ಷೇರುಗಳು ಸುಮಾರು 6 ರುಪಾಯಿಗಳ ಏರಿಕೆ ಕಂಡು 102.50 ರುಪಾಯಿ ಹಾಗೂ ರಿಲಯನ್ಸ್ ಷೇರುಗಳು ತಲಾ 104 ರುಪಾಯಿಗಳ ಏರಿಕೆ ಕಂಡು 1,759.40 ರುಪಾಯಿಗೆ ತಲುಪಿದೆ. ಭಾರ್ತಿ ಇನ್ಫ್ರಾಟೆಲ್ ಷೇರುಗಳು ಸುಮಾರು 10 ರುಪಾಯಿಗಳ ಏರಿಕೆ ಕಂಡು 218.85 ರುಪಾಯಿ ಮುಟ್ಟಿದೆ.

      ಷೇರು ಹೂಡಿಕೆದಾರ ರಾಕೇಶ್ ಝುಂಝುನ್ ವಾಲಾ ಮೇಲೆ 'ಸೆಬಿ' ಕಣ್ಣು

      ಕುಸಿತ ಕಂಡ ಷೇರುಗಳು

      ಇಂಡಸ್ಇಂಡ್ ಬ್ಯಾಂಕಿನ ಷೇರುಗಳು ಸುಮಾರು 16 ರು.ಗಳ ಇಳಿಕೆ ಕಂಡು 483.65 ರುಪಾಯಿಗೆ ತಲುಪಿದೆ. ವೇದಾಂತದ ಷೇರುಗಳು ಸುಮಾರು 2 ರುಪಾಯಿ ಕಳೆದುಕೊಂಡು 105.25 ರು.ಗೆ ತಲುಪಿದೆ. ಎಚ್‌ಸಿಎಲ್ ಟೆಕ್ ಷೇರು ಸುಮಾರು 9 ರು.ಗಳನ್ನು ಇಳಿಕೆಯಾಗಿ 569.60 ರು.ಗೆ ಮುಚ್ಚಿದೆ. ಐಟಿಸಿ ಷೇರುಗಳು ಸುಮಾರು 3 ರು.ಗಳ ಇಳಿಕೆ ಕಂಡು 184.05 ರುಪಾಯಿ ಹಾಗೂ ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು ಸುಮಾರು 7 ರುಪಾಯಿಗಳ ಕುಸಿತದೊಂದಿಗೆ 500.05 ರುಪಾಯಿ ದಾಖಲಾಗಿದೆ.

      English summary
      On Friday India's share market good recovered. Sensex Jumps Over 500 Points, Nifty Ends Above 10,200
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X