SEBI: ಸೆಬಿ ಮುಖ್ಯಸ್ಥೆ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ ಕಾಂಗ್ರೆಸ್

ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ವಿರುದ್ಧ ಕಾಂಗ್ರೆಸ್‌ ಆರೋಪಗಳು ಮುಂದುವರೆದಿದೆ. ಇದೀಗ ಕಾಂಗ್ರೆಸ್ ಮತ್ತಷ್ಟು ಗಂಭೀರ ಆರೋಪಗಳನ್ನು ಮಾಡಿದ್ದು, ಸೆಬಿ ಅಧ್ಯಕ್ಷೆಯನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ಮಾಧವಿ ಬುಚ್ ಅವರು ಮಹಿಂದ್ರಾ & ಮಹಿಂದ್ರಾ, ಐಸಿಐಸಿಐ, ಡಾ. ರೆಡ್ಡಿ ಮತ್ತು ಇನ್ನೂ ಮೂರು ಲಿಸ್ಟೆಡ್ ಕಂಪನಿಗಳಿಂದ ಕೋಟಿ ಕೋಟಿ ಗಳಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಮಾಧವಿ ಪುರಿ ಬುಚ್ ಅವರು ತಮ್ಮ ಒಡೆತನದ ಅಗೋರಾ ಅಡ್ವೈಸರಿ ಪ್ರೈವೇಟ್ ಲಿಮಿಟೆಡ್ ಮೂಲಕ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್, ಪಿಡಿಲೈಟ್ ಲಿಮಿಟೆಡ್ ಮತ್ತು ಡಾ ರೆಡ್ಡೀಸ್ ಲ್ಯಾಬೊರೇಟರೀಸ್ ಲಿಮಿಟೆಡ್ ಸೇರಿದಂತೆ ಪಟ್ಟಿ ಮಾಡಲಾದ ಕಂಪನಿಗಳಿಂದ ಸಲಹಾ ಶುಲ್ಕವನ್ನು ಗಳಿಸಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್‌ ಬೋರ್ಡ್ ಆಫ್ ಇಂಡಿಯಾ (SEBI) ನಿಯಮಗಳಿಗೆ ಇದು ವಿರುದ್ಧವಾಗಿದೆ ಎಂದು ಅದು ಹೇಳಿದೆ.

SEBI Chieg Madhabi Buch Faces Conflict-of-Interest Accusations

2016-17 ಮತ್ತು 2023-24ರ ನಡುವೆ ಅಗೋರಾ ಈ ಕಂಪನಿಗಳಿಂದ ₹ 2.95 ಕೋಟಿ ಆದಾಯ ಗಳಿಸಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಇದರಲ್ಲಿ 88% ಪ್ರತಿಶತ ಶುಲ್ಕವು ಮಹಿಂದ್ರಾ ಗ್ರೂಪ್‌ನಿಂದ ಬಂದಿದೆ ಎಂದು ಹೇಳಿದೆ. ಮಾಧವಿ ಪುರಿ ಬುಚ್ ಅವರ ಪತಿ ಧವಲ್ ಬುಚ್ ಕೂಡ ಈ ಸಮಯದಲ್ಲಿ ಮಹಿಂದ್ರಾ ಸಮೂಯಕ್ಕೆ ಸಲಹೆ ಕೊಡುತ್ತಿದ್ದರು ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಬುಚ್ ಅವರು ಅಗೋರಾ ಅಡ್ವೈಸರಿಯ 99% ಪಾಲನ್ನು ಹೊಂದಿದ್ದಾರೆ. ಸೆಬಿ ಉದ್ಯೋಗಿಗಳ ಸೇವೆ ನಿಯಮಗಳು 2001ರ ಪ್ರಕಾರ, ಸಂಸ್ಥೆಯ ಪೂರ್ಣ ಸಮಯದ ಉದ್ಯೋಗಿಗಳು ಹೊರಗಿನ ಸಂಸ್ಥೆಗಳಿಂದ ಪ್ರಯೋಜನ ಪಡೆಯುವುದನ್ನು ನಿಷೇಧಿಸಲಾಗಿದೆ.

ಕಾಂಗ್ರೆಸ್ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹೀಂದ್ರಾ ಸಮೂಹದ ವಕ್ತಾರರು, ತಮ್ಮ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಹೇಳಿದ್ದಾರೆ. ನಾವು ಯಾವುದೇ ಸಮಯದಲ್ಲಿ ಸೆಬಿಗೆ ಮನವಿ ಮಾಡಿಲ್ಲ. ಕಾರ್ಪೊರೇಟ್ ಆಡಳಿತದಲ್ಲಿ ಗುಣಮಟ್ಟವನ್ನು ಕಾಪಾಡುತ್ತೇವೆ, ಇದೆಲ್ಲಾ ತಪ್ಪುದಾರಿಗೆ ಎಳೆಯುವ ಆರೋಪಗಳಾಗಿದ್ದು, ಸತ್ಯಕ್ಕೆ ದೂರವಾದವು ಎಂದು ಹೇಳಿದೆ.

ಮಹೀಂದ್ರಾ ಸಮೂಹವು ಬುಚ್‌ನ ಸಂಸ್ಥೆ ಅಗೋರಾ ಮತ್ತು ಅವರ ಪತಿಗೆ ಪಾವತಿಸಿದ ಸಲಹಾ ಶುಲ್ಕದ ಹೊರತಾಗಿ, ಧವಲ್ ಬುಚ್ ಹೆಚ್ಚುವರಿಯಾಗಿ ₹4.78 ಕೋಟಿಯನ್ನು ಮಹೀಂದ್ರಾ ಗುಂಪಿನಿಂದ ಸಂಬಳದ ರೂಪದಲ್ಲಿ ಪಡೆದಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಈ ಮೊದಲು ಮಾಧವಿ ಪುರಿ ಅವರು ತಮ್ಮ ಹಿಂದಿನ ಸಂಸ್ಥೆಯಾಗಿದ್ದ ಐಸಿಐಸಿಐ ಸಮೂಹದಿಂದ ಹಣ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಸೆಬಿ ಅಧ್ಯಕ್ಷೆ ಮೇಲೆ ಪದೇ ಪದೇ ಆರೋಪ ಕೇಳಿ ಬರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+