SBI ಗ್ರಾಹಕರಿಗೆ ಸೂಚನೆ: ನಿಶ್ಚಿತ ಠೇವಣಿ ದರದಲ್ಲಿ ಬದಲಾವಣೆ
ನವದೆಹಲಿ, ನವೆಂಬರ್ 08: ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ) ತನ್ನ ಗ್ರಾಹಕರಿಗೆ ದೀಪಾವಳಿ ಹಬ್ಬಕ್ಕೂ ಮುನ್ನ ಉಡುಗೊರೆಯನ್ನು ನೀಡಿತ್ತು. ಈಗ ನಿಶ್ಚಿತ ಠೇವಣಿ ದರದಲ್ಲಿ ಭಾರಿ ಬದಲಾವಣೆ ಮಾಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ರೆಪೋ ದರದ ಆಧಾರದಲ್ಲಿ ಗೃಹ ಸಾಲ ನೀಡಲು ಆರಂಭಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿತ್ತು. ಎಂಎಸ್ಎಂಇ, ಗೃಹ ಮತ್ತು ರಿಟೇಲ್ ಸಾಲ ಸೇರಿದಂತೆ ಎಲ್ಲ ಫ್ಲೋಟಿಂಗ್ ರೇಟ್ ಸಾಲಗಳ ರೆಪೋ ದರವನ್ನು ಬಾಹ್ಯ ಮಾನದಂಡವಾಗಿಸಲು ನಿರ್ಧರಿಸಲಾಗಿದ್ದು, ಅಕ್ಟೋಬರ್ 01ರಿಂದಲೇ ಹೊಸ ದರ ಜಾರಿಗೆ ಬಂದಿದೆ.
ಒಟ್ಟಾರೆ, ಈ ವರ್ಷದಲ್ಲಿ 110 bps ಕಡಿತಗೊಂಡಿದ್ದು, ಬ್ಯಾಂಕ್ ಗಳು ನೀಡುವ ಗೃಹ, ವಾಹನ ಸಾಲದ ಮೇಲಿನ ಬಡ್ಡಿದರ, ಇಎಂಐ ದರ ತಗ್ಗಿಸುವ ನಿರೀಕ್ಷೆಯಿದೆ.

ನಿಶ್ಚಿತ ಠೇವಣಿದರ: ಎಂಸಿ ಎಲ್ ಆರ್ ದರವನ್ನು 5 ಮೂಲಾಂಶದಂತೆ ಇಳೆಕ್ ಮಾಡಿದ್ದು, ನವೆಂಬರ್ 10ರಿಂದ ಜಾರಿಗೆ ಬರಲಿದೆ. ಇದು ಎಲ್ಲಾ ಅವಧಿಯ ಠೇವಣಿಗೆ ಅನ್ವಯವಾಗಲಿದೆ. ಈ ಆರ್ಥಿಕ ವರ್ಷದಲ್ಲಿ ಸುಮಾರು 7 ಬಾರಿ ದರ ಕಡಿತವಾಗಿದ್ದು, ಈಗ ಒಂದು ವರ್ಷದ ಎಂಸಿಎಲ್ ಆರ್ ಗೆ ಅನುಗುಣವಾಗಿ ಸಾಲ ಪಡೆದವರಿಗೆ 8%ರಷ್ಟು ಇಳಿಕೆಯಾಗಲಿದೆ.
SBI ಹೊಸ ನಿಶ್ಚಿತ ಠೇವಣಿ ದರ:
7 ದಿನದಿಂದ 45 ದಿನಗಳಿಗೆ 4.50%
46 ದಿನದಿಂದ 179 ದಿನಗಳಿಗೆ 5.50%
180 ದಿನದಿಂದ 210 ದಿನಗಳಿಗೆ 5.80%
211 ದಿನದಿಂದ 1 ವರ್ಷದೊಳಗೆ 5.80%
1 ವರ್ಷ ದಿಂದ 2 ವರ್ಷದೊಳಗೆ 6.25%
2 ವರ್ಷದಿಂದ 3 ವರ್ಷದೊಳಗೆ 6.25%
3 ವರ್ಷದಿಂದ 5 ವರ್ಷದೊಳಗೆ 6.25%
5 ವರ್ಷದಿಂದ 10 ವರ್ಷದೊಳಗೆ 6.25%
*****
SBI ಹೊಸ ನಿಶ್ಚಿತ ಠೇವಣಿ ದರ(ಹಿರಿಯ ನಾಗರಿಕರಿಗೆ):
7 ದಿನದಿಂದ 45 ದಿನಗಳಿಗೆ 5.00%
46 ದಿನದಿಂದ 179 ದಿನಗಳಿಗೆ 6.00%
180 ದಿನದಿಂದ 210 ದಿನಗಳಿಗೆ 6.30%
211 ದಿನದಿಂದ 1 ವರ್ಷದೊಳಗೆ 6.30%
1 ವರ್ಷ ದಿಂದ 2 ವರ್ಷದೊಳಗೆ 6.75%
2 ವರ್ಷದಿಂದ 3 ವರ್ಷದೊಳಗೆ 6.75%
3 ವರ್ಷದಿಂದ 5 ವರ್ಷದೊಳಗೆ 6.75%
5 ವರ್ಷದಿಂದ 10 ವರ್ಷದೊಳಗೆ 6.75%












Click it and Unblock the Notifications