4ನೇ ತ್ರೈಮಾಸಿಕದಲ್ಲಿ ಎಸ್.ಬಿ.ಐಗೆ ಬರೋಬ್ಬರಿ 7,718 ಕೋಟಿ ನಷ್ಟ!
ಮುಂಬೈ, ಮೇ 22: ದೇಶದ ಅತೀ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2017-18ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಬರೋಬ್ಬರಿ 7,718 ಕೋಟಿ ರೂಪಾಯಿ ನಷ್ಟ ತೋರಿಸಿದೆ.
ಈ ಹಿಂದಿನ ವರ್ಷಕ್ಕೆ ಈ ನಷ್ಟವನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಕಾರಣ ಹಿಂದಿನ ಮಾರ್ಚ್ ಅವಧಿಯಲ್ಲಿ ಎಸ್ ಬಿಐನಲ್ಲಿ 5 ಬ್ಯಾಂಕುಗಳು ವಿಲೀನವಾಗಿರಲಿಲ್ಲ.
ಹೆಚ್ಚಿನ ಎಲ್ಲಾ ಸಾರ್ವಜನಿಕ ರಂಗದ ಬ್ಯಾಂಕುಗಳು ಮಾರ್ಚ್ ತ್ರೈಮಾಸಿಕದಲ್ಲಿ ನಷ್ಟವನ್ನೇ ತೋರಿಸಿವೆ. ಇಂಡಿಯನ್ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಮಾತ್ರ ಈ ಅವಧಿಯಲ್ಲಿ ಲಾಭ ದಾಖಲಾಗಿರುವುದಾಗಿ ಹೇಳಿವೆ.

ಕಳೆದ ವಾರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬರೋಬ್ಬರಿ 13,417 ಕೋಟಿ ರೂಪಾಯಿ ನಷ್ಟ ತೋರಿಸಿತ್ತು. ಇದಾದ ನಂತರ ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತೀ ಹೆಚ್ಚಿನ ನಷ್ಟವನ್ನು ತೋರಿಸಿದೆ.
ಮರುಪಾವತಿಯಾಗದ (ಕೆಟ್ಟ ಸಾಲ) ಸಾಲಗಳ ಪ್ರಮಾಣವನ್ನು ಲಾಭದಿಂದ ಸರಿದೂಗಿಸಿಕೊಳ್ಳಲು ಬ್ಯಾಂಕ್ ಗಳು ನಿರ್ಧರಿಸಿದ ಪರಿಣಾಮ ಈ ನಷ್ಟ ಉಂಟಾಗಿದೆ.












Click it and Unblock the Notifications