ಉಳಿತಾಯ ಖಾತೆ ಬಡ್ಡಿದರ ಕಡಿತಗೊಳಿಸಿ ಗ್ರಾಹಕರಿಗೆ ಎಸ್.ಬಿ.ಐ ಶಾಕ್
ಮುಂಬೈ, ಜುಲೈ 31: ಭಾರತೀಯ ಸ್ಟೇಟ್ ಬ್ಯಾಂಕ್ ಉಳಿತಾಯ ಖಾತೆ ಮೇಲಿನ ಬಡ್ಡಿದರವನ್ನು ಶೇಕಡಾ 4ರಿಂದ ಶೇಕಡಾ 3.5ಕ್ಕೆ ಇಳಿಕೆ ಮಾಡಿದೆ. 1 ಕೋಟಿ ರೂಪಾಯಿಗಿಂತ ಕಡಿಮೆ ಠೇವಣಿ ಇಟ್ಟ ಗ್ರಾಹಕರು ತಮ್ಮ ಉಳಿತಾಯ ಖಾತೆ ಮೇಲಿನ ಬಡ್ಡಿದರದಲ್ಲಿ ಶೇಕಡಾ 0.5ರಷ್ಟನ್ನು ಕಳೆದುಕೊಳ್ಳಲಿದ್ದಾರೆ.
ವಾರ್ಷಿಕ ಸುಮಾರು 3700 ಕೋಟಿ ಉಳಿತಾಯದ ಗುರಿ ಹಾಕಿಕೊಂಡು ಸ್ಟೇಟ್ ಬ್ಯಾಂಕ್ ಬಡ್ಡಿದರದಲ್ಲಿ ಈ ಮಾರ್ಪಾಟು ಮಾಡಿದೆ. ಆದರೆ ಒಂದು ಕೋಟಿ ರೂಪಾಯಿಗೂ ಮೇಲಿನ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರ ಶೇಕಡಾ 4ರಲ್ಲೇ ಮುಂದುವರಿಯಲಿದೆ.

ಅಪನಗದೀಕರಣದ ನಂತರ ಎಸ್ಬಿಐ ನಲ್ಲಿ ಗ್ರಾಹಕರು ಭಾರೀ ಹಣವನ್ನು ಡೆಪಾಸಿಟ್ ಮಾಡಿದ್ದರು. ಇದರಿಂದ ಬ್ಯಾಂಕ್ ನಷ್ಟ ಅನುಭವಿಸು ಆತಂಕ ಎದುರಾಗಿತ್ತು. ಇದರ ಪರಿಣಾಮ ಎಂಬಂತೆ ಬಡ್ಡಿದರದಲ್ಲಿ ಕಡಿತ ಮಾಡಲಾಗಿದೆ.
ಮಾರ್ಚ್ 31, 2017ರಂತೆ ಎಸ್ಬಿಐನಲ್ಲಿ 7.43 ಲಕ್ಷ ಕೋಟಿ ರೂಪಾಯಿ ಉಳಿತಾಯ ಖಾತೆಗಳಲ್ಲಿ ಠೇವಣಿ ಇಡಲಾಗಿತ್ತು. ಒಟ್ಟಾರೆ ಬ್ಯಾಂಕ್ ನ ಠೇವಣಿಯಲ್ಲಿ ಇವುಗಳ ಪಾಲೇ ಶೇಕಡಾ 36.4ರಷ್ಟಾಗುತ್ತದೆ.












Click it and Unblock the Notifications