ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಬಿಐನ 1,300 ಶಾಖೆಗಳ IFSC ಬದಲು, ಚೆಕ್ ಮಾಡಿ

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 10: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ತನ್ನ 1,300 ಶಾಖೆಗಳ ಹೆಸರು ಮತ್ತು ಐಎಫ್‌ಎಸ್‌ಸಿ ಕೋಡ್‌ಗಳನ್ನು ಬದಲಿಸಿದೆ.

ಗ್ರಾಹಕರಿಗೊಂದು ಒಳ್ಳೆ ಸುದ್ದಿ: ಎಸ್ಬಿಐ ಐಎಂಪಿಎಸ್ ದರ ಕಡಿತ!ಗ್ರಾಹಕರಿಗೊಂದು ಒಳ್ಳೆ ಸುದ್ದಿ: ಎಸ್ಬಿಐ ಐಎಂಪಿಎಸ್ ದರ ಕಡಿತ!

ಐದು ಸಹವರ್ತಿ ಬ್ಯಾಂಕ್‌ ಗಳ ವಿಲೀನದ ಬಳಿಕ ಬೆಂಗಳೂರು, ಮುಂಬೈ, ನವದೆಹಲಿ, ಚೆನ್ನೈ, ಹೈದರಾಬಾದ್‌, ಕೋಲ್ಕತಾ ಮತ್ತು ಲಕ್ನೋ ನಗರಗಳಲ್ಲಿ ಇರುವ ಶಾಖೆಗಳ ಹೆಸರು ಮತ್ತು ಐಎಫ್‌ಎಸ್‌ಇ ಕೋಡ್‌ಗಳನ್ನು ಬದಲಾಯಿಸಲಾಗಿದೆ ಎಂದು ಎಸ್ ಬಿಐ ಪ್ರಕಟಿಸಿದೆ.

SBI changes names, IFSC codes of around 1,300 branches

ಎಸ್ ಬಿಐ ಸರಿ ಸುಮಾರು 23,000 ಬ್ರ್ಯಾಂಚ್ ಗಳನ್ನು ಹೊಂದಿದ್ದು, ಶಾಖೆಗಳ ಬದಲಾದ ಹೆಸರು ಮತ್ತು ಐಎಫ್‌ಎಸ್‌ಸಿ ಕೋಡ್‌ ಸಂಪೂರ್ಣ ಪಟ್ಟಿಯನ್ನು ತನ್ನ ವೆಬ್ ಸೈಟಿನಲ್ಲಿ ನೀಡಿದೆ. 11 ಅಂಕಿಗಳ ಆಲ್ಫಾ ನ್ಯೂಮರಿಕಲ್ ಕೋಡ್ ಮೂಲಕ ಹಣ ವರ್ಗಾವಣೆ ಸಾಧ್ಯ.

ಎಸ್ ಬಿಐ ಖಾತೆದಾರರಿಗೆ ಒಂದೊಳ್ಳೆ ಸುದ್ದಿಎಸ್ ಬಿಐ ಖಾತೆದಾರರಿಗೆ ಒಂದೊಳ್ಳೆ ಸುದ್ದಿ

'ಹಳೆಯ ಐಎಫ್‌ಎಸ್‌ಸಿ ಕೋಡ್‌ ಬಳಸಿ ಹಣ ವರ್ಗಾವಣೆ ಮಾಡಿದರೂ ಹೊಸ ಕೋಡ್‌ಗೆ ಬದಲಾವಣೆ ಆಗಿ ನಿರ್ದಿಷ್ಟ ಖಾತೆಗೆ ಹಣ ಜಮೆ ಆಗುವಂತೆ ವ್ಯವಸ್ಥೆ ಮಾಡಲಾಗಿದೆ, ಐಎಫ್‌ಎಸ್‌ಸಿ ಕೋಡ್‌ ಬಳಸಿಕೊಂಡು ಹಣ ವರ್ಗಾವಣೆ ಮಾಡುವವರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ' ಎಂದು ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್‌ ಗುಪ್ತಾ ಭರವಸೆ ನೀಡಿದ್ದಾರೆ.

ಆನ್ ಲೈನ್ ಬ್ಯಾಂಕ್ ಮೂಲಕ ವ್ಯವಹರಿಸುವಾಗ ಐಎಫ್ಎಸ್‌ಸಿ ಕೋಡ್‌ ಬಳಸಿಕೊಂಡು ಆರ್‌ಟಿಜಿಎಸ್‌, ಎನ್‌ಇಎಫ್‌ಟಿ ಅಥವಾ ಐಎಂಪಿಎಸ್‌ ಮೂಲಕ ಹಣ ವರ್ಗಾವಣೆ ಮಾಡಬಹುದಾಗಿದೆ. (ಪಿಟಿಐ)

English summary
Post the merger of its five associates, State Bank of India (SBI) has changed names and Indian Financial System Code (IFSC) codes of nearly 1,300 of its branches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X