• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಧಾನಿ ಮೋದಿ ನೆಚ್ಚಿನ ರುಪೇ ಕಾರ್ಡ್ ನೀಡಲು ಮುಂದಾದ ಎಸ್ಬಿಐ

|

ನವದೆಹಲಿ, ಸೆ. 02: ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್.ಬಿ.ಐ.) ತನ್ನ ಗ್ರಾಹಕರಿಗೆ ಮತ್ತೊಂದು ಶುಭ ಸುದ್ದಿ ನೀಡಿದೆ. ರೆಪೋ ದರ ಆಧಾರಿತ ಗೃಹ ಸಾಲದ ಬಡ್ಡಿದರ ಇಳಿಕೆ ಮಾಡಿದ ಬಳಿಕ ಈಗ ಮತ್ತೊಂದು ಗ್ರಾಹಕಸ್ನೇಹಿ ಪ್ರಕಟಣೆ ಹೊರಡಿಸಿದೆ.

ರುಪೇ ಕಾರ್ಡ್ ಬಳಕೆದಾರರಿಗೂ ಸಿಗಲಿದೆ ವಿಮೆ!

ಪ್ರಧಾನಿ ಮೋದಿ ಅವರ ನೆಚ್ಚಿನ ದೇಶಿ ಪೇಮೆಂಟ್ ನೆಟ್ವರ್ಕ್ ಆಧಾರಿತ ರುಪೇ ಕಾರ್ಡ್ ಗಳನ್ನು ತನ್ನ ಗ್ರಾಹಕರಿಗೆ ನೀಡಲು ಎಸ್ಬಿಐ ಮುಂದಾಗಿದೆ. ಕ್ರೆಡಿಟ್ ಕಾರ್ಡ್ ವಲಯದಲ್ಲಿ ಸದ್ಯ ಅಮೆರಿಕ ಮೂಲದ ಪೇಮೆಂಟ್ ಸೇವೆಗಳಾದ ವೀಸಾ ಮತ್ತು ಮಾಸ್ಟರ್ ಕಾರ್ಡ್ ಗಳು ಪ್ರಾಬಲ್ಯ ಸಾಧಿಸಿವೆ.

ಎಸ್ ಬಿಐನಿಂದ ಉಚಿತವಾಗಿ 'ಉನ್ನತಿ' ಕ್ರೆಡಿಟ್ ಕಾರ್ಡ್

National Payments Corporation of India (NPCI) ಅಭಿವೃದ್ಧಿಪಡಿಸಿರುವ ರುಪೇ ಕಾರ್ಡ್ ರೀಟೇಲ್ ಕ್ಷೇತ್ರದ ಪೇಮೆಂಟ್, ಕ್ರೆಡಿಟ್ ಕಾರ್ಡ್ ವಲಯದಲ್ಲಿ ಶೀಘ್ರವೇ ಚಾಲನೆಗೆ ಬರಲಿದೆ ಎಂದು ಸಿಬಿಐ ಕಾರ್ಡ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹರದಯಾಳ್ ಪ್ರಸಾದ್ ತಿಳಿಸಿದ್ದಾರೆ.

ವಿದೇಶಕ್ಕೆ ಪ್ರಯಾಣಿಸುವ ಗ್ರಾಹಕರಿಗೆ ವೀಸಾ/ ಮಾಸ್ಟರ್ ಕಾರ್ಡ್ ಜೊತೆಗೆ ರುಪೇ (RuPay) ಕಾರ್ಡ್ ನೀಡಲು ತೀರ್ಮಾನಿಸಲಾಗಿದೆ. ಮೋದಿ ಮನವಿಗೆ ಓಗೊಟ್ಟಿರುವ ಸಿಂಗಪುರ, ಭೂತಾನ್ ಹಾಗೂ ಯುಎಇ ಈಗ ರುಪೇ ಕಾರ್ಡ್ ಬಳಕೆಯನ್ನು ಮಾನ್ಯ ಮಾಡಿದೆ.

ಡೆಬಿಟ್-ಕ್ರೆಡಿಟ್ ಕಾರ್ಡ್ ಬದಲಾವಣೆ ಸೂಚನೆಯ ಹಿಂದಿನ ಗುಟ್ಟೇನು?

ಡಿಸ್ಕವರ್, ಜಪಾನ್ ಕ್ರೆಡಿಟ್ ಬ್ಯೂರೋ, ಚೀನಾ ಯೂನಿಯನ್ ಪೇ ಜಾಲಗಳಿಂದಲೂ ರುಪೇ ಕಾರ್ಡ್ ಗೆ ಮಾನ್ಯತೆ ಸಿಕ್ಕಿದೆ. ಎಸ್ಬಿಐ 90 ಲಕ್ಷಕ್ಕೂ ಅಧಿಕ ಕಾರ್ಡ್ ದಾರರನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ 17.9 ಪಾಲು ಹೊಂದಿದೆ.

English summary
SBI Card will soon launch RuPay credit cards, a development which will give a boost to the homegrown payment network in the fast growing segment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X