• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಟಾ ಕಂಪನಿಯ ಜಾಗತಿಕ ಸಿಇಒ ಆಗಿ ಸಂದೀಪ್ ಕಠಾರಿಯಾ ನೇಮಕ: ಮೊದಲ ಭಾರತೀಯ ಎಂಬ ಹೆಗ್ಗಳಿಕೆ

|

ನವದೆಹಲಿ, ಡಿಸೆಂಬರ್ 01: ಬೃಹತ್ ಪಾದರಕ್ಷೆಗಳ ಉತ್ಪಾದಕ ಬಾಟಾ ಶೂ ಸಂಸ್ಥೆಯು ನವೆಂಬರ್ 30ರಂದು ಸಂದೀಪ್ ಕಠಾರಿಯಾ ಅವರನ್ನು ತನ್ನ ಜಾಗತಿಕ ಸಂಸ್ಥೆಯ ಸಿಇಒ ಆಗಿ ಆಯ್ಕೆ ಮಾಡಿದೆ.

ಜಾಗತಿಕ ಮಟ್ಟದಲ್ಲಿ ಬಾಟಾ ಸಂಸ್ಥೆಯ ಸಿಇಒ ಆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಸಂದೀಪ್ ಕಠಾರಿಯಾ ಪಾತ್ರರಾಗಿದ್ದಾರೆ. ಸುಮಾರು ಐದು ವರ್ಷಗಳ ಕಾಲ ಸಿಇಒ ಆಗಿದ್ದ ಅಲೆಕ್ಸಿಸ್ ನಾಸಾರ್ಡ್‌ ಸ್ಥಾನಕ್ಕೆ ಸಂದೀಪ್ ತಕ್ಷಣವೇ ಜಾರಿಗೆ ಬರುವಂತೆ ಅಧಿಕಾರ ವಹಿಸಿಕೊಂಡಿದ್ದಾರೆ.

ರುಚಿ ಸೋಯಾ ಇಂಡಸ್ಟ್ರೀಸ್ MDಯಾಗಲಿರುವ ಬಾ

2017 ರಲ್ಲಿ ಬಾಟಾ ಇಂಡಿಯಾದ ಸಿಇಒ ಆಗಿ ಸೇರುವ ಮೊದಲು ಸಂದೀಪ್ ಅವರು ಜಾಗತಿಕ ಉದ್ಯಮ ಸಂಸ್ಥೆಗಳಾದ ಯೂನಿಲಿವರ್, ಯಮ್ ಬ್ರಾಂಡ್ಸ್, ವೊಡಾಫೋನ್ ನಲ್ಲಿ 24 ವರ್ಷಗಳ ಅನುಭವ ಹೊಂದಿದ್ದರು.

ಕಠಾರಿಯಾ ಅವರು ಸಿಇಒ ಆಗಿ ನೇಮಕಾತಿ ಕುರಿತು ಮಾತನಾಡಿದ ಬಾಟಾ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಅಶ್ವನಿ ವಿಂಡ್‌ಲಾಸ್ '' ಸಂದೀಪ್ ಅವರ ಅರ್ಹವಾದ ಬಡ್ತಿಗೆ ನಾನು ಅವರನ್ನು ಅಭಿನಂದಿಸುತ್ತೇನೆ. ಬಾಟಾ ಇಂಡಿಯಾ ತಂಡವು ಪಾದರಕ್ಷೆಗಳ ಪ್ರಮಾಣ, ಆದಾಯ ಮತ್ತು ಲಾಭಗಳಲ್ಲಿ ಅಸಾಧಾರಣ ಬೆಳವಣಿಗೆಯನ್ನು ಕಂಡಿದೆ ಮತ್ತು ಹೆಚ್ಚು ಸ್ಪರ್ಧಾತ್ಮಕ ಪಾದರಕ್ಷೆಗಳ ಮಾರುಕಟ್ಟೆಯಲ್ಲಿ ಬಾಟಾ ಗ್ರಾಹಕರ ಆಕರ್ಷಣೆಯನ್ನು ಹೆಚ್ಚಿಸಿದೆ. ಸಂದೀಪ್ ಅವರ ವ್ಯಾಪಕ ಅನುಭವದಿಂದ ಬಾಟಾ ಗ್ರೂಪ್ ಮತ್ತು ಬಾಟಾ ಇಂಡಿಯಾ ಎರಡೂ ಹೆಚ್ಚಿನ ಲಾಭವನ್ನು ಪಡೆದಿವೆ'' ಎಂದು ಹೇಳಿದ್ದಾರೆ.

ಸಿಇಒ ಆಗಿ ಆಯ್ಕೆಯಾಗಿರುವ ಸಂದೀಪ್ ಕಠಾರಿಯಾ ತನ್ನ ಮುಂದಿನ ಪಯಣದ ಕುರಿತು ಸಾಕಷ್ಟು ಉತ್ಸುಕರಾಗಿದ್ದು, 125 ವರ್ಷಗಳ ಇತಿಹಾಸ ಹೊಂದಿರುವ ಕಂಪನಿಯ ಮತ್ತಷ್ಟು ಏಳಿಗೆಗೆ ಶ್ರಮಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

English summary
Footwear giant Bata Shoe Organization on November 30 announced the appointment of Sandeep Kataria as CEO, effective immediately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X