ಡಾಲರ್ ಎದುರು ಮತ್ತೆ ಮುಗ್ಗರಿಸಿದ ರೂಪಾಯಿ, 73.33ಕ್ಕೆ ಏರಿಕೆ

ನವದೆಹಲಿ, ಅ.3: ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯವು ದಾಖಲೆ ಮಟ್ಟಕ್ಕೆ ಕುಸಿದಿದೆ. ಅದನ್ನು ನಿಯಂತ್ರಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ 73ರ ಗಡಿ ದಾಟಿದೆ, ಸೋಮವಾರ ಷೇರುಮಾರುಕಟ್ಟೆ ಆರಂಭದಲ್ಲಿ 73.33 ಆಗಿದೆ. ವಾಣಿಜ್ಯ ಸಮರ ಹಾಗು ಕಚ್ಚಾ ತೈಲ ಬೆಲೆ ಏರಿಕೆಯು ರೂಪಾಯಿ ಮೌಲ್ಯ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ರೂಪಾಯಿ ಮೌಲ್ಯ ಕುಸಿತದಿಂದ ತೈಲ ಬೆಲೆ ಮೇಲೆ ಇನ್ನಷ್ಟು ರುಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಹಿಂದಿನ ಸೋಮವಾರ ರೂಪಾಯಿ ಮೌಲ್ಯ 72.91 ಇತ್ತು .ಹಾಗಾಗಿ ಶೇ.0.60ರಷ್ಟು ಕುಸಿತ ಕಂಡಂತಾಗಿದೆ.

Rupees value down against US dollars ever lowest

ರೂಪಾಯಿ ಮೌಲ್ಯ ಕುಸಿತವು ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದು, ಮೋದಿ ಸರ್ಕಾರಕ್ಕೆ ತೀವ್ರ ಮುಜುಗರ ಹಾಗೂ ಸವಾಲಿನ ವಿಚಾರವಾಗಿದೆ.

ವಿದೇಶಿ ವಿನಿಮಯ ಡೀಲರ್‌ಗಳ ಪ್ರಕಾರ ಕಚ್ಚಾ ತೈಲದ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೈಲ ಆಮದುದಾರರು, ಮುಖ್ಯವಾಗಿ ಸಂಸ್ಕರಣಾಗಾರಗಳು ಅಮೆರಿಕದ ಡಾಲರ್‌ಗೆ ಹೆಚ್ಚು ಬೇಡಿಕೆ ಇರಿಸಿದ್ದಾರೆ. ಅಲ್ಲದೆ, ಬಂಡವಾಳ ಹೂಡಿಕೆ, ವಿದೇಶಿ ನಿಧಿ ಹೊರಹೋಗುವಿಕೆ ಕಾರಣದಿಂದ ದೇಶಿ ಕರೆನ್ಸಿ ಮೇಲೆ ಭಾರ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+