ದೀರ್ಘ ಸಮಯ ಆಫೀಸ್‌ನಲ್ಲಿ ಕೆಲಸ ಮಾಡುವವರಿಗೆ ಸೂಕ್ತ 7 ಫೈಬರ್‌ ಸಮೃದ್ಧ ಆಹಾರಗಳು

ಇಂದಿನ ಬಿಡುವಿಲ್ಲದ ಜೀವನಶೈಲಿಯಲ್ಲಿ ಹಲವರು ಗಂಟೆಗಟ್ಟಲೆ ಕುಳಿತಲ್ಲೆ ಕುಳಿತು ಕೆಲಸ ಮಾಡುತ್ತಾರೆ. ಇದರಿಂದ ಜೀರ್ಣಕ್ರಿಯೆ ಸಮಸ್ಯೆ, ದೇಹದ ದೌರ್ಬಲ್ಯ ಹಾಗೂ ಮಧ್ಯಾಹ್ನದ ನಂತರ ದೇಹದಲ್ಲಿ ಆಯಾಸ ಹೆಚ್ಚಾಗುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಫೈಬರ್‌ ಸಮೃದ್ಧ ಇರುವ ಆಹಾರ ಸೇವನೆ ಮಾಡಿದರೆ ದೇಹಕ್ಕೆ ತುಂಬಾ ಸಹಕಾರಿಯಾಗಲಿದೆ. ಇಲ್ಲಿವೆ ನೋಡಿ ದೀರ್ಘ ಸಮಯದವರೆಗೆ ಆಫೀಸ್‌ ಕೆಲಸ ಮಾಡುವವರಿಗೆ ಸೂಕ್ತವಾದ 7 ಆರೋಗ್ಯಕರ ಲಂಚ್‌ಬಾಕ್ಸ್‌ ಆಹಾರಗಳು.

7 Fiber Rich Lunchbox Foods

1. ಜೋಳದ ರೊಟ್ಟಿ ಜೊತೆಗೆ ಬೆಂಡೆಕಾಯಿ ಪಲ್ಯ

ಜೋಳವು ಫೈಬರ್‌ ಹಾಗೂ ಖನಿಜಾಂಶಗಳಿಂದ ಸಮೃದ್ಧವಾಗಿರುವ ಸಿರಿಧಾನ್ಯವಾಗಿದೆ. ಜೋಳದ ರೊಟ್ಟಿಯೊಂದಿಗೆ ಬೆಂಡೆಕಾಯಿ ಪಲ್ಯ ಸೇವಿಸಿದರೆ ದೀರ್ಘಕಾಲದವರೆಗೂ ಹೊಟ್ಟೆ ಹಸಿವನ್ನ ತಡೆದುಕೊಳ್ಳಬಹುದು. ಇದರಿಂದ ಅನಾರೋಗ್ಯಕರ ತಿಂಡಿಗಳನ್ನು ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ.

ಭಾರತದ ಈ 5 ನಗರಗಳಲ್ಲಿ ಸಿಗುತ್ತೆ ಬೆಸ್ಟ್ ಸ್ಟ್ರೀಟ್ ಫುಡ್‌; ಆಹಾರ ಪ್ರಿಯರು ಮಿಸ್ ಮಾಡ್ಬೇಡಿ
ಭಾರತದ ಈ 5 ನಗರಗಳಲ್ಲಿ ಸಿಗುತ್ತೆ ಬೆಸ್ಟ್ ಸ್ಟ್ರೀಟ್ ಫುಡ್‌; ಆಹಾರ ಪ್ರಿಯರು ಮಿಸ್ ಮಾಡ್ಬೇಡಿ

2. ಕಡಲೆಕಾಳು, ಪಾಲಕ್ ಮತ್ತು ಕುಚ್ಚಲಕ್ಕಿ ಅನ್ನ

ಬಿಳಿ ಅಕ್ಕಿಯ ಅನ್ನದ ಬದಲು, ಕುಚ್ಚಲಕ್ಕಿ ಅನ್ನ ಸೇವನೆ ಮಾಡುವುದರಿಂದ ಫೈಬರ್‌ ಪ್ರಮಾಣ ಹೆಚ್ಚುತ್ತದೆ. ಇದರೊಂದಿಗೆ ಕಡಲೆಕಾಳು ಹಾಗೂ ಪಾಲಕ್‌ ಸೇರಿಸಿದರೆ ಪ್ರೋಟೀನ್‌, ಐರನ್‌ ಮತ್ತು ಫೈಬರ್‌ ಸಮೃದ್ಧ ಪೌಷ್ಟಿಕ ಆಹಾರ ಸಿಗುತ್ತದೆ. ಆಫೀಸ್‌ನಲ್ಲಿ ಬಿಸಿ ಮಾಡಿಕೊಂಡು ಸಹ ಇದನ್ನು ತಿನ್ನಬಹುದು.

7 Fiber Rich Lunchbox Foods

3. ರಾಗಿ ಮುದ್ದೆ ಅಥವಾ ರಾಗಿ ರೊಟ್ಟಿ

ರಾಗಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿರುತ್ತದೆ. ಇದು ಹೇರಳವಾಗಿ ದೊರೆಯುವ ಒಂದು ಉತ್ತಮವಾದ ಸಿರಿಧಾನ್ಯವಾಗಿದೆ. ರಾಗಿ ಮುದ್ದೆ ಅಥವಾ ರೊಟ್ಟಿಯನ್ನು ತರಕಾರಿ ಸಾರು ಜೊತೆಗೆ ಸೇವಿಸಿದರೆ ಹೊಟ್ಟೆ ಹಸಿವನ್ನು ದೀರ್ಘಕಾಲದವರೆಗೂ ತಡೆದುಕೊಳ್ಳಬಹುದು. ದೀರ್ಘ ಸಮಯ ಡೆಸ್ಕ್‌ ಕೆಲಸ ಮಾಡುವವರಿಗೆ ಇದು ಶಕ್ತಿದಾಯಕ ಆಹಾರ.

4. ಸಜ್ಜೆ ಖಿಚ್ಡಿ ಮತ್ತು ಹಸಿರು ಹೆಸರುಕಾಳು

ಸಜ್ಜೆ ಅತ್ಯಧಿಕ ನಾರಿನಂಶ (Fiber) ಹೊಂದಿರುವ ಧಾನ್ಯಗಳಲ್ಲಿ ಒಂದು. ಹಸಿರು ಹೆಸರು ಕಾಳಿನೊಂದಿಗೆ ಸಜ್ಜೆಯನ್ನು ಬೆರೆಸಿ ಖಿಚ್ಡಿ ತಯಾರಿಸಿ ಸೇವನೆ ಮಾಡಿದರೆ ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿಯಾಗಲಿದೆ. ದೈಹಿಕ ಶ್ರಮ ಕಡಿಮೆ ಇರುವ ಅಥವಾ ಕುಳಿತು ಕೆಲಸ ಮಾಡುವವರಿಗೆ ಇದು ಅತ್ಯುತ್ತಮ ಆಹಾರವಾಗಿದೆ.

ಬೇಸಿಗೆಯಲ್ಲಿ ಬೇಗ ಹಾಳಾಗದ ಉಪಹಾರಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ
ಬೇಸಿಗೆಯಲ್ಲಿ ಬೇಗ ಹಾಳಾಗದ ಉಪಹಾರಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ

5. ಮೊಳಕೆ ಹೆಸರುಕಾಳು ಮತ್ತು ದಾಳಿಂಬೆ ಸಲಾಡ್

ಹಗುರವಾದ ಮತ್ತು ಪೌಷ್ಟಿಕ ಆಹಾರವನ್ನು ಬಯಸುವವರಿಗೆ ಮೊಳಕೆ ಬಂದ ಹೆಸರುಕಾಳಿನ ಸಲಾಡ್ ಉತ್ತಮ ಆಯ್ಕೆ. ಇದಕ್ಕೆ ದಾಳಿಂಬೆ ಬೀಜ ಮತ್ತು ಚಾಟ್ ಮಸಾಲಾ ಸೇರಿಸಿದರೆ ರುಚಿ ಹೆಚ್ಚುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ, ದೇಹವು ಚುರುಕಾಗಿರಲು ಸಹಾಯ ಮಾಡುತ್ತದೆ.

6. ಓಟ್ಸ್ ಮತ್ತು ತರಕಾರಿ ಉಪ್ಪಿಟ್ಟು

ಓಟ್ಸ್‌ ಫೈಬರ್‌ ಸಮೃದ್ಧ ಆಹಾರವಾಗಿದ್ದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿ. ಕ್ಯಾರೆಟ್‌, ಕ್ಯಾಪ್ಸಿಕಂ, ಬಟಾಣಿ ಹಾಗೂ ಈರುಳ್ಳಿ ಸೇರಿಸಿ ತಯಾರಿಸಿದ ಓಟ್ಸ್‌ ಉಪ್ಪಿಟ್ಟು ದೀರ್ಘ ಸಮಯದವರೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದು ತೂಕ ನಿಯಂತ್ರಣಕ್ಕೂ ತುಂಬಾ ಸಹಾಯ ಮಾಡುತ್ತದೆ.

7. ರಾಜ್ಮಾ ಮತ್ತು ಕ್ವಿನೋವಾ ಪುಲಾವ್‌

ರಾಜ್ಮಾ ಪ್ರೋಟೀನ್‌ ಹಾಗೂ ಫೈಬರ್‌ನ ಉತ್ತಮ ಮೂಲ. ಕ್ವಿನೋವಾ ಜೊತೆಗೆ ಇದನ್ನು ಪುಲಾವ್‌ ರೂಪದಲ್ಲಿ ತಯಾರಿಸಿದರೆ ಪೌಷ್ಟಿಕಾಂಶಗಳಿಂದ ಸಮೃದ್ಧವಾದ ಆಹಾರ ಸಿಗುತ್ತದೆ. ಇದು ಹೊಟ್ಟೆ ತುಂಬಿದ ಅನುಭವವನ್ನು ಹೆಚ್ಚಿಸಿ ಮಧ್ಯಾಹ್ನದ ಹಸಿವನ್ನು ಕಡಿಮೆ ಮಾಡುತ್ತದೆ.

ಸೂಚನೆ: ಈ ಮಾಹಿತಿ ಸಾಮಾನ್ಯ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ಅಥವಾ ಯಾವುದಾದರೂ ಪೌಷ್ಟಿಕಾಂಶದ ಕೊರತೆಯಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+