ಬಿತ್ತು ಬಿತ್ತು ಬಿತ್ತು...ಒಂದು ಡಾಲರ್ ಗೆ 71.21 ರುಪಾಯಿ
ಮುಂಬೈ, ಸೆಪ್ಟೆಂಬರ್ 3: ಅಮೆರಿಕ ಡಾಲರ್ ವಿರುದ್ಧ ಭಾರತದ ರುಪಾಯಿ ಮೌಲ್ಯ ಸೋಮವಾರದಂದು ಇನ್ನೂ ಕುಸಿದಿದೆ. 21 ಪೈಸೆಯಷ್ಟು ಕುಸಿತ ಕಂಡು, ಸಾರ್ವಕಾಲಿಕ ಕಡಿಮೆ ಮೊತ್ತವಾದ 71.21ಕ್ಕೆ ರುಪಾಯಿ ತಲುಪಿದೆ. ಹೆಚ್ಚುತ್ತಿರುವ ತೈಲ ಬೆಲೆ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದಂತೆ ಕಲಹವು ವಿದೇಶಿ ವಿನಿಮಯ ಮಾರುಕಟ್ಟೆಗೆ ಹೊಡೆತ ನೀಡುತ್ತಿದೆ..
ಕರೆನ್ಸಿ ಮಾರುಕಟ್ಟೆ ಹೂಡಿಕೆದಾರರಲ್ಲಿ ಧೈರ್ಯ ತುಂಬಲು ಸರಕಾರ ಪ್ರಯತ್ನ ನಡೆಸಿತಾದರೂ ಅದರಿಂದ ಏನೂ ಪ್ರಯೋಜನ ಆಗಲಿಲ್ಲ. ಇದರ ಜತೆಗೆ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಇನ್ನಷ್ಟು ಏರಿಕೆ ಕಂಡಿದ್ದರಿಂದ ವ್ಯವಹಾರದ ವಾತಾವರಣವೇ ಬದಲಾಯಿತು. ಸದ್ಯಕ್ಕೆ ಕಚ್ಚಾ ತೈಲ ಬೆಲೆ ಬ್ಯಾರೆಲ್ ಗೆ 78 ಅಮೆರಿಕನ್ ಡಾಲರ್ ಇದೆ.
ಆರಂಭದಲ್ಲೇ ರುಪಾಯಿ ಪ್ರಬಲವಾಗಿ ವ್ಯವಹಾರ ಶುರು ಮಾಡಿತು. ವಾರಾಂತ್ಯದಲ್ಲಿ ಭಾರೀ ಕುಸಿತ ಕಂಡಿದ್ದ ರುಪಾಯಿ ಮೌಲ್ಯ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿತ್ತು. ಆದರೆ ಸೋಮವಾರ ಮತ್ತೆ ಕುಸಿಯಿತು. ಈ ಕುಸಿತವನ್ನು ತಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲ ಪ್ರಯತ್ನವನ್ನು ಮಾಡುತ್ತಿದೆ.

ಇನ್ನು ದೇಶದ ಜಿಡಿಪಿ ಮೊದಲ ತ್ರೈಮಾಸಿಕದಲ್ಲಿ ಉತ್ತಮ ಜಿಗಿತ ಕಂಡು 8.2% ತಲುಪಿದೆ.












Click it and Unblock the Notifications