ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೂ ಪ್ರಪಾತಕ್ಕೆ ಕುಸಿದ ರುಪಾಯಿ, ಈಗ ಡಾಲರ್‌ಗೆ 77.69 ರೂ ಬೆಲೆ

|
Google Oneindia Kannada News

ನವದೆಹಲಿ, ಮೇ 17: ಮಾರುಕಟ್ಟೆಯಲ್ಲಿನ ಸಂಚಲನ ಸ್ಥಿತಿ ಹಿನ್ನೆಲೆಯಲ್ಲಿ ಡಾಲರ್ ಕರೆನ್ಸಿಗೆ ಬೇಡಿಕೆ ಮುಂದುವರಿದಿದೆ. ರೂಪಾಯಿ ಮೌಲ್ಯ ಇನ್ನಷ್ಟು ಕುಸಿದಿದೆ. ಇವತ್ತಿನ ಕರೆನ್ಸಿ ವಿನಿಯಮ ಕೇಂದ್ರದಲ್ಲಿ ಡೆದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 14 ಪೈಸೆಯಷ್ಟು ಇಳಿದಿದೆ. ಪ್ರತೀ ಡಾಲರ್‌ಗೆ 77.69 ರೂಪಾಯಿ ದರ ಇದೆ. ಇದು ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಕಂಡಿರುವ ಅತ್ಯಂತ ಕಡಿಮೆ ಮೌಲ್ಯ ಎನ್ನಲಾಗಿದೆ.

ಕಳೆದ ಗುರುವಾರದಂದು ಒಂದು ಡಾಲರ್‌ಗೆ 77.50 ರೂ ನಂತೆ ವಹಿವಾಟು ನಡೆದಿತ್ತು. ಅದು ರೂಪಾಯಿಯ ಕನಿಷ್ಠ ಮೌಲ್ಯ ಎನಿಸಿತ್ತು. ಈಗ ರೂಪಾಯಿ ಕರೆನ್ಸಿ ಮೌಲ್ಯ ಇನ್ನೂ ಕುಸಿತಕ್ಕೆ ಒಳಗಾಗಿದೆ. ಅಮೆರಿಕದ ಬಾಂಡ್‌ಗಳಿಗೆ ತುಸು ಬೇಡಿಕೆ ಬಂದಿರುವುದು ಡಾಲರ್ ಮೇಲುಗೈ ಓಟಕ್ಕೆ ಕಾರಣವೆನ್ನಲಾಗಿದೆ.

ರೂಪಾಯಿ ಮೌಲ್ಯ ಕುಸಿತದಿಂದ ಯಾರಿಗೆ ಲಾಭ, ಯಾರಿಗೆ ನಷ್ಟ?ರೂಪಾಯಿ ಮೌಲ್ಯ ಕುಸಿತದಿಂದ ಯಾರಿಗೆ ಲಾಭ, ಯಾರಿಗೆ ನಷ್ಟ?

ಕಳೆದ ಗುರುವಾರದಿಂದಲೇ ರುಪಾಯಿ ಇನ್ನಷ್ಟು ಕುಸಿಯುವ ಸೂಚನೆ ಇತ್ತಾದರೂ ಆರ್‌ಬಿಐ ತುರ್ತಾಗಿ ಸುದ್ದಿಗೋಷ್ಠಿ ನಡೆಸಿ ಕೆಲ ದರಗಳ ಪರಿಷ್ಕರಣೆ ಮಾಡಿದ ಬಳಿಕ ಕರೆನ್ಸಿ ಮೌಲ್ಯ ಇಳಿಯುವುದು ತಪ್ಪಿತು. ಭಾರತದ ಕರೆನ್ಸಿ ವಿನಿಮಯ (ಫೋರೆಕ್ಸ್) ಮಾರುಕಟ್ಟೆಯಲ್ಲಿ ಶುಕ್ರವಾರ ಒಂದು ಡಾಲರ್‌ಗೆ 77.31 ರೂ ನಂತೆ ವಹಿವಾಟು ನಡೆದಿತ್ತು. ಸೋಮವಾರ ಬುದ್ಧ ಪೂರ್ಣಿಮಾ ದಿನವಾದ್ದರಿಂದ ಫೋರೆಕ್ಸ್ ಮಾರ್ಕೆಟ್‌ಗೆ ರಜೆ ಇತ್ತು. ಇವತ್ತು ಮಂಗಳವಾರ ಶುರುವಾದ ವಹಿವಾಟಿನಲ್ಲಿ ಡಾಲರ್‌ಗೆ ಹೆಚ್ಚು ಬೇಡಿಕೆ ಸಿಕ್ಕಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಆರ್‌ಬಿಐ ಮತ್ತೊಮ್ಮೆ ಏನಾದರೂ ಕ್ರಮಗಳನ್ನು ಘೋಷಿಸಬೇಕಾಗಬಹುದು.

Rupee Rate Against Dollar Downs Further To New Low

ಕರೆನ್ಸಿ ಮೌಲ್ಯ ನಿರ್ಧಾರ ಹೇಗೆ?
ವಿದೇಶಿ ಕರೆನ್ಸಿ ವಿನಿಮಯ ಕೇಂದ್ರದಲ್ಲಿ ವಿವಿಧ ಕರೆನ್ಸಿಗಳಿಗೆ ಇರುವ ಬೇಡಿಕೆಗೆ ತಕ್ಕಂತೆ ಬೆಲೆಗಳು ವ್ಯತ್ಯಾಸ ಆಗುತ್ತವೆ. ಡಾಲರ್ ಕರೆನ್ಸಿ ವಿನಿಯಮದ ವಹಿವಾಟು ಹೆಚ್ಚಿದರೆ ಅದರ ಮೌಲ್ಯ ಹೆಚ್ಚಾಗಬಹುದು. ಅಂದರೆ, ಫೋರೆಕ್ಸ್ ಮಾರುಕಟ್ಟೆಯಲ್ಲಿ ರೂಪಾಯಿ ಕೊಟ್ಟು ಹೆಚ್ಚೆಚ್ಚು ಡಾಲರ್ ಖರೀದಿಸಿದಾಗ ಡಾಲರ್ ಮೌಲ್ಯ ಹೆಚ್ಚುತ್ತದೆ.

Rupee Rate Against Dollar Downs Further To New Low

ಡಾಲರ್ ಮೌಲ್ಯ ಹೆಚ್ಚಾದರೆ ಪರಿಣಾಮ ಏನು?
ರೂಪಾಯಿ ಎದುರು ಡಾಲರ್ ಮೌಲ್ಯ ಹೆಚ್ಚಾದರೆ ಭಾರತದ ಆರ್ಥಿಕತೆ ಮೇಲೆ ವಿವಿಧ ರೀತಿಯಲ್ಲಿ ನೇರ ಮತ್ತು ಪರೋಕ್ಷ ಪರಿಣಾಮಗಳು ಬೀರುತ್ತವೆ. ಭಾರತ ಸಾಕಷ್ಟು ಆಮದು ಮಾಡಿಕೊಳ್ಳುವುದರಿಂದ ಡಾಲರ್ ರೂಪದಲ್ಲಿ ವಹಿವಾಟು ನಡೆಸಬೇಕಾಗುತ್ತದೆ. ಇದರಿಂದ ಬೆಲೆ ಏರಿಕೆ ಬಿಸಿ ತಾಗುತ್ತದೆ. ಆದರೆ, ರಫ್ತು ಕೇಂದ್ರಿತ ಉದ್ಯಮಗಳಾದ ಐಟಿ, ಜವಳಿ ಇತ್ಯಾದಿ ವಲಯಗಳಿಗೆ ಡಾಲರ್ ಬೆಲೆ ಹೆಚ್ಚಳ ವರದಾನ ಹೌದು. ಡಾಲರ್ ರೂಪದಲ್ಲಿ ಅವರಿಗೆ ಆದಾಯ ಸಿಗುವುದರಿಂದ ಇದು ಲಾಭಕಾರಿ.

(ಒನ್ಇಂಡಿಯಾ ಸುದ್ದಿ)

English summary
The rupee weakened to a new all-time low of 77.69 against the dollar early on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X