ಡಾಲರ್ ಎದುರು ರೂಪಾಯಿ ಮೌಲ್ಯ ಇನ್ನಷ್ಟು ಕುಸಿತ
ಮುಂಬೈ, ಆಗಸ್ಟ್ 16: ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತಷ್ಟು ಕುಸಿದಿದ್ದು, ಆರ್ಥಿಕ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುವ ಭೀತಿ ಎದುರಾಗಿದೆ.
ಆರಂಭಿಕ ವಹಿವಾಟಿನಲ್ಲಿಯೇ ಅಮೆರಿಕನ್ ಡಾಲರ್ ಎದುರು 70.32 ರೂ.ಗೆ ಸಾರ್ವಕಾಲಿಕ ಕುಸಿತ ಅನುಭವಿಸಿತು.
ಅಂತರ್‌ಬ್ಯಾಂಕ್ ವಿದೇಶ ವಿನಿಮಯವು ಡಾಲರ್‌ಗೆ ಸ್ಥಳೀಯ ಕರೆನ್ಸಿ 70.25 ರೂ.ನಂತೆ ಆರಂಭವಾಗಿದ್ದು, ಬುಧವಾರದ ಅಂತ್ಯದ ವೇಳೆಗಿಂತ 43 ಪೈಸೆಯಷ್ಟು ಏರಿಕೆ ಕಂಡಿದೆ.

ಡಾಲರ್ ಮೌಲ್ಯದ ಹೆಚ್ಚಳದ ಕಾರಣ ಗುರುವಾರ ಬೆಳಿಗ್ಗೆ ಷೇರುಪೇಟೆ ವ್ಯವಹಾರಕ್ಕೆ ಭಾರಿ ಹೊಡೆತ ಬಿದ್ದಿದೆ. ತೈಲ ಆಮದು ಹೆಚ್ಚಳದ ಕಾರಣ ವಹಿವಾಟು ಕೊರತೆಯಲ್ಲಿ ಏರಿಕೆ ಉಂಟಾಗಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.
ಟರ್ಕಿಯ ಕರೆನ್ಸಿ ಲಿರಾ ಮೌಲ್ಯ ಕುಸಿತದ ಪರಿಣಾಮ ಭಾರತದ ರೂಪಾಯಿ ಸಹ ಮೌಲ್ಯ ಕಳೆದುಕೊಳ್ಳಲು ಕಾರಣವಾಗಿದೆ. ಮಂಗಳವಾರ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 70ರ ಗಡಿ ದಾಟಿತ್ತು.
ಭಾರತ, ರಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಚೀನಾ ದೇಶಗಳ ಮಾರುಕಟ್ಟೆಗಳಿಗೆ ಇಕಳೆದ 4 ಆರ್ಥಿಕ ವರ್ಷದಲ್ಲಿ ಭಾರತದ ಸರಾಸರಿ ತಲಾದಾಯ 79,982ದರಿಂದ ಹೊಡೆತ ಬಿದ್ದಿದ್ದು, ಹೂಡಿಕೆದಾರರು ಕಂಗಾಲಾಗಿದ್ದಾರೆ.












Click it and Unblock the Notifications