ಡಾಲರ್ ಎದುರು ಶಕ್ತಿ ಕಳೆದುಕೊಂಡ ರುಪಾಯಿ
ನವದೆಹಲಿ, ಮೇ. 8: ಷೇರು ಪೇಟೆ ತೀವ್ರ ಕುಸಿತದಿಂದ ಕಂಗಾಲಾಗಿದ್ದವರಿಗೆ ಮತ್ತೊಂದು ರೂಪಾಯಿ ಸಹ ಶಾಕ್ ನೀಡಿದೆ. ಕಳೆದ 20 ತಿಂಗಳಿನಲ್ಲಿಯೇ ರೂಪಾಯಿ ಅತ್ಯಂತ ಕನಿಷ್ಠ ದರ ದಾಖಲು ಮಾಡಿದೆ.
ವಿದೇಶಿ ಹೂಡಿಕೆದಾರರು ಏಕಾಏಕಿ ಭಾರತೀಯ ಮಾರುಕಟ್ಟೆಯಿಂದ ಬಂಡವಾಳ ಹಿಂಪಡೆದ ಪರಿಣಾಮ ಮುಂಬೈ ಷೇರುಪೇಟೆ ಕುಸಿತ ಕಂಡಿತ್ತು. ಇದರ ಪರಿಣಾಮ ಎಂಬಂತೆ ಗುರುವಾರದ ಅಂತ್ಯಕ್ಕೆ ರೂಪಾಯಿ ಮೌಲ್ಯ ಡಾಲರ್ ಎದುರು 64.20 ರೂ.ಗೆ ಕುಸಿದಿದೆ.[ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ಯಾವ್ಯಾವ ಕಂಪನಿಗಳಿವೆ?]

ಕಳೆದ 15 ದಿನಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 13,500 ಕೋಟಿ ರೂಪಾಯಿಯನ್ನು ಭಾರತೀಯ ಮಾರುಕಟ್ಟೆ ಯಿಂದ ಹಿಂಪಡೆದಿದ್ದಾರೆ. ಪರಿಣಾಮ ಬುಧವಾರ ಮುಂಬೈ ಷೇರು ಮಾರುಕಟ್ಟೆ 730 ಅಂಕಗಳ ಕುಸಿತ ಕಂಡಿತ್ತು. ಇದರ ಬೆನ್ನಲ್ಲೇ ರೂಪಾಯಿ ಸಹ ಕುಸಿತ ಅನುಭವಿಸಿದೆ.
ಮ್ಯಾಟ್ ತೆರಿಗೆ ಕುರಿತು ಹೂಡಿಕೆದಾರಲ್ಲಿ ಉಂಟಾಗಿರುವ ಭಯ. ಮತ್ತೆ ತೈಲ ಬೆಲೆ ಏರಿಕೆ ನಿರೀಕ್ಷೆ, ಡಾಲರ್ ಮೇಲೆ ಹೆಚ್ಚಿದ ಹೂಡಿಕೆ ಈ ಎಲ್ಲ ಕಾರಣಗಳು ರೂಪಾಯಿ ಕುಸಿಯಲು ಖಾರಣವಾಗಿದೆ.[ಷೇರು ಮಾರುಕಟ್ಟೆ ಭಾರೀ ಕುಸಿತ: ಹೂಡಿಕೆದಾರರು ಕಂಗಾಲು]
ಇತರ ದೇಶಗಳ ಕರೆನ್ಸಿಯೂ ಇಳಿಕೆ ಹಾದಿಯಲ್ಲಿ ಸಾಗಿರುವುದು ಕೊಂಚ ಸಮಾಧಾನ ತಂದಿದೆ. ಇದೇ ಬಗೆಯ ಕುಸಿತ ಮುಂದುವರಿದರೆ ರಿಸರ್ವ್ ಬ್ಯಾಂಕ್ ಯಾವ ಕ್ರಮ ಕೈಗೊಳ್ಳಿದೆ ಎಂಬುದನ್ನು ಕಾದು ನೋಡಬೇಕು.












Click it and Unblock the Notifications