• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಳೆಯ ಬ್ಲ್ಯಾಕ್ ಆ್ಯಂಡ್ ವೈಟ್ ಟಿವಿಗಳಿಗೆ ಭಾರೀ ಬೇಡಿಕೆ: ತಜ್ಞರು ಹೇಳುವುದೇನು?

|
Google Oneindia Kannada News

ಬೆಂಗಳೂರು, ಜೂ. 27: ರಾಜ್ಯದ ಜನರು ಕೊರೊನಾ ವೈರಸ್ ಆತಂಕದಲ್ಲಿದಲ್ಲಿರೆ, ಮತ್ತೊಂದೆಡೆ ಹಳೆಯ ಬ್ಲ್ಯಾಕ್ ಆ್ಯಂಡ್ ವೈಟ್ ಟಿವಿಗಳಿಗೆ ಭಾರಿ ಬೇಡಿಕೆ ಬಂದಿದೆ. ದಿನಕ್ಕೆ ಹತ್ತಾರು ಮೆಸೇಜ್‌ಗಳು ಸೋಸಿಯಲ್ ಮಿಡಿಯಾ ಸೇರಿದಂತೆ ವಾಟ್ಸಪ್, ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿವೆ.

ಹೌದು, ಇಡೀ ಜಗತ್ತು ಕೊರೊನಾ ವೈರಸ್ ಆತಂಕದಲ್ಲಿದ್ದಾಗ ಹಳೆಯ ಕಪ್ಪು-ಬಿಳುಪು ಟಿವಿಗಳಿಗೆ ದಿಢೀರ್ ಬೇಡಿಕೆಯಿದೆ. ಸುಮಾರು ಎರಡು ದಶಕಗಳಿಂದ ಮನೆಯ ಮೂಲೆ ಸೇರಿದ್ದ ಟಿವಿಗಳಿಗೆ ಒಮ್ಮೇಲೆ ಭಾರಿ ಬೇಡಿಕೆ ಬಂದಿದೆ. ಮೊದಲು ಉತ್ತರ ಕರ್ನಾಟಕದಲ್ಲಿ ಶುರುವಾಗಿದ್ದ ಇದು, ಈಗ ದಕ್ಷಿಣ ಕರ್ನಾಟಕಕ್ಕೆ ಹರಡಿದೆ. ಅಷ್ಟಕ್ಕೂ ಕೋವಿಡ್-19ಗು ಈ ಹಳೆಯ ಕಪ್ಪು ಬಿಳುಪು ಟಿವಿಗಳಿಗೂ ಏನಾದರೂ ಸಂಬಂಧವಿದೆಯೇ ಎಂದು ವಿಚಾರಿಸಿದಾಗ ಅತ್ಯಂತ ಇಂಟರೆಸ್ಟಿಂಗ್ ವಿಷಯಗಳು ಬೆಳಕಿಗೆ ಬಂದಿವೆ. ಕಪ್ಪು ಬಿಳುಪು ಟಿವಿಗಳಿಗೆ ದಿಢೀರ್ ಭಾರಿ ಬೇಡಿಕೆ ಬಂದಿದ್ದರ ಹಿಂದಿನ ರಹಸ್ಯ ಇಲ್ಲಿದೆ. ಅದಕ್ಕೆ ತಜ್ಞರು ಹೇಳಿದ್ದೇನು ಗೊತ್ತಾ?

B&W ಟಿವಿಗಳಿಗೆ ದಿಢೀರ್ ಬೇಡಿಕೆ

B&W ಟಿವಿಗಳಿಗೆ ದಿಢೀರ್ ಬೇಡಿಕೆ

ಏಕಾಏಕಿ ಕಳೆದೆರಡು ತಿಂಗಳಿನಿಂದ ಮನೆಯ ಮೂಲೆಯಲ್ಲಿದ್ದ ಕಪ್ಪು ಬಿಳುಪು ಟಿವಿಗಳ ಧೂಳು ಕೊಡವಿ ಹೊರಗೆ ತೆಗೆಯಲಾಗುತ್ತಿದೆ. ರಹಸ್ಯ ನಿಧಿಯನ್ನು ತೆಗೆದಂತೆ ರಾತ್ರಿ ಅಥವಾ ಯಾರೂ ಇಲ್ಲದ ವೇಳೆಯಲ್ಲಿ ಟಿವಿಗಳನ್ನು ಹೊರಗೆ ತೆಗೆದು ಸ್ವಚ್ಛ ಮಾಡಲಾಗುತ್ತಿದೆ. ಅಷ್ಟೊಂದು ಬೇಡಿಕೆ ಬಂದಿದೆ ಹಳೆಯ ಬ್ಲ್ಯಾಕ್ ಆ್ಯಂಡ್ ವೈಟ್ ಟಿವಿಗಳಿಗೆ.

ಅಷ್ಟೇ ಅಲ್ಲ ಹಳೆಯ ಟಿವಿ ಇದೆಯಾ ಎಂದು ಕೇಳಿಕೊಂಡು ಬರುವ ಜನರನ್ನು ಮಾಂತ್ರಿಕರಂತೆ ಗ್ರಾಮೀಣ ಭಾಗದ ಜನರು ನೋಡುತ್ತಿದ್ದಾರೆ. ಲಾಕ್‌ಡೌನ್ ನಿಂದ ಜನರು ಮನೆಯಿಂದ ಹೊರಗೆ ಬರದ ಪರಿಸ್ಥಿತಿ ಇದ್ದಾಗಲೂ, ಆ ಆತಂಕದ ಸ್ಥಿತಿಯಲ್ಲಿಯೂ ಕಪ್ಪು ಬಿಳುಪು ಟಿವಿಗಳನ್ನು ಹುಡುಕಿಕೊಂಡು ನೂರಾರು ಕಿಮೀ ಸುತ್ತಿದವರಿಗೆ ಕಡಿಮೆ ಇಲ್ಲ. ಅಷ್ಟಕ್ಕು ಈ ಟಿವಿಗಳಲ್ಲಿ ಇರುವ ಅಷ್ಟೊಂದು ಬೆಲೆ ಬಾಳುವ ವಸ್ತು ಯಾವುದು? ಅದರ ಉಪಯೋಗ ಏನು?. ಅದರ ರಹಸ್ಯ ಮುಂದಿದೆ.

ನಿಮ್ಮ ಟಿವಿಯಲ್ಲಿ ಅದಿಲ್ಲ

ನಿಮ್ಮ ಟಿವಿಯಲ್ಲಿ ಅದಿಲ್ಲ

ಹೀಗೆ ಅಪರೂಪಕ್ಕೆ ಮನೆಯಲ್ಲಿ ಸಿಗುವ ಎಲ್ಲ ಕಪ್ಪು-ಬಿಳುಪು ಟಿವಿಗಳಿಗೆ ಬೇಡಿಕೆ ಇಲ್ಲ. ನಿಮ್ಮಲ್ಲಿ ಹಳೆಯ ಟಿವಿ ಇದೆಯಾ ಎಂಬುದು ಖಾತರಿ ಆದ್ಮೇಲೆ ಮನೆಗೆ ಬಂದು ಟಿವಿ ಬಿಚ್ಚಿ ನೋಡುತ್ತಾರೆ.

ಟಿವಿಯಲ್ಲಿ ಆ ಒಂದು ಕಂಡನ್ಸರ್, ಕೆಪ್ಯಾಸಿಟರ್ ಇದ್ರೆ ನಿಮಗೆ ಕನಿಷ್ಠ 20 ಲಕ್ಷ ರೂ. ಗ್ಯಾರಂಟಿ ಎಂದು ಮಾತು ಶುರುವಾಗುತ್ತದೆ. ಅಂಥ ಕ್ಯಾಪ್ಯಾಸಿಟರ್ ಏನದು ಅಂತಾ ಯಾರಿಗೂ ಗೊತ್ತಿಲ್ಲ. ಆದರೆ ಟಿವಿ ಬಿಚ್ಚಿ ನೋಡಿದ ನಂತರ ವರಸೆ ಬದಲಾಗುತ್ತದೆ. ಅಲ್ಲಿಯೇ ಇರೋದು ಮತ್ತೊಂದು ರಹಸ್ಯ.

ಕೆಂಪು ದ್ರವದ ಹುಡುಕಾಡ

ಕೆಂಪು ದ್ರವದ ಹುಡುಕಾಡ

ಕಪ್ಪು ಬಿಳು ಹಳೆದ ಟಿವಿ ಸಿಕ್ಕ ಕೂಡಲೇ ಅದನ್ನು ಬಿಚ್ಚಿ ನೋಡುವವರು ಈ ಟಿವಿಯಲ್ಲಿ ಅದಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ಅವರು ಹುಡುಕುತ್ತಿರುವುದು ಯಾವುದೋ ಕ್ಯಾಪಾಸಿಟರ್ ಅಲ್ಲ ಎಂದಾಯ್ತು.

ಮತ್ತೇನು? ಅಂತಾ ಕೇಳಿದರೆ ಟಿವಿಯ ಟ್ಯೂಬ್ ಹಿಂದೆ ಕೆಂಪು ದ್ರವ ಇರುತ್ತೆ. ಅದು ನಮಗೆ ಬೇಕು. ನಿಮ್ಮ ಟಿವಿಯಲ್ಲಿ ಅದಿಲ್ಲ. ಹೀಗಾಗಿ ಬೇಡ ಅಂತಾರೆ. ಕೆಲ ಕ್ಷಣಗಳ ಹಿಂದೆ ಕೋಟ್ಯಂತರ ರೂ. ಸಿಕ್ಕಿತು ಎಂದುಕೊಂಡಿದ್ದ ಹಳೆಯ ಟಿವಿ ಮಾಲೀಕನಿಗೆ ಭ್ರಮನಿರಸವಾಗುತ್ತದೆ.

ಆಮೇಲೆ ಅದೇ ಹಳೆಯ ಟಿವಿ ಮಾಲೀಕನೇ ಕೆಂಪು ದ್ರವ ಇರುವ ಮತ್ತೊಂದು ಟಿವಿ ಹುಡುಕಾಟಕ್ಕೆ ಮುಂದಾಗ್ತಾನೆ. ನಿಮ್ಮಲ್ಲಿ ಹಳೆ ಟಿವಿ ಇದೆಯಾ ಎಂದು ಕೇಳುತ್ತ ಕರೆ ಮಾಡುತ್ತಾನೆ. ಫೇಸ್ ಬುಕ್, ವಾಟ್ಸಪ್, ಟೆಲಿಗ್ರಾಂ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಲ್ಲೆಲ್ಲ ಮೆಸೇಜು ಹರಿ ಬಿಡುತ್ತಾನೆ.ನಿಗೂಢ ಜಾಲ ಹೀಗೆ ಬೆಳೆಯುತ್ತದೆ.

ಬಾಂಬ್ ತಯಾರಿಕೆಗೆ?

ಬಾಂಬ್ ತಯಾರಿಕೆಗೆ?

1970-80ರ ದಶಕದ ಟಿವಿಗಳ ತಯಾರಿಕೆಯಲ್ಲಿ ಆ ಕೆಂಪು ದ್ರವ (ಕೆಂಪು ಪಾದರಸ ಅಂದು ಕೊಂಡಿದ್ದಾರೆ) ಬಳಸಲಾಗಿದೆ ಎಂಬ ವದಂತಿ ಜೋರಾಗಿದೆ. ಆದರೆ ಇದೀಗ ಕೋಟಿ ಕೊಟ್ಟರೂ ಟಿವಿ ಮಾರಾಟ ಮಾಡುವುದಿಲ್ಲ ಎಂದೂ ಕೆಲವು ಕಡೆ ಜನರು ಹೇಳುತ್ತಿದ್ದಾರೆ. ಅದಕ್ಕೆ ಕಾರಣ ಬಾಂಬ್ ತಯಾರಿಕೆ.

ಹೀಗೆ ಹಳೆಯ ಟಿವಿಗಳಲ್ಲಿ ಇದೆ ಎಂಬ ವದಂತಿಯ ಹಿಂದೆ ಮತ್ತೊಂದು ದೊಡ್ಡ ರೂಮರ್ ಹುಟ್ಟಿಕೊಂಡಿದೆ. ಟವಿಗಳಲ್ಲಿ ಇರುವ ದ್ರವರೂಪದ ವಸ್ತು, ನಿಷೇಧಿತ ವಸ್ತು. ಅದನ್ನು ಬಾಂಬ್ ತಯಾರಿಕೆಯಲ್ಲಿ ಬಳಸುತ್ತಾರೆ. ಹೀಗಾಗಿ ಹಣದ ಆಸೆಗೆ ಬಿದ್ದು ಮಾರಾಟ ಮಾಡಿದರೆ ಮುಂದೆ ಸಂಕಷ್ಟ ಕಾಯ್ದಿದೆ ಎಂಬ ಮತ್ತೊಂದು ಸುಳ್ಳು ಸುದ್ದಿ ಕೂಡ ಅಷ್ಟೇ ವೇಗವಾಗಿ ಹರಿದಾಡುತ್ತಿದೆ. ವಿಪರ್ಯಾಸ ಎಂದರೆ ಎರಡೂ ಸುದ್ದಿಗಳು ಎಲ್ಲಿ ಹುಟ್ಟಿಕೊಂಡಿವೆ ಎಂಬುದು ಯಾರಿಗೂ ಗೊತ್ತಿಲ್ಲ.

ರೆಡ್ ಮರ್ಕ್ಯೂರಿ ಇಲ್ಲ

ರೆಡ್ ಮರ್ಕ್ಯೂರಿ ಇಲ್ಲ

ಈ ರೆಡ್ ಮರ್ಕ್ಯೂರಿ ಹುಡುಕಾಟ ಶುರುವಾಗಿದ್ದು 1990ರ ದಶಕದಲ್ಲಿ ಅಂತಾರೆ ವಿಜ್ಞಾನ ಲೇಖಕರಾದ ಡಾ. ಉದಯ ಶಂಕರ್ ಪುರಾಣಿಕ್. ಆಗ ಇದಕ್ಕಿಂತ ದೊಡ್ಡ ಮಟ್ಟದ ರೂಮರ್ ಅರಬ್ ದೇಶಗಳಲ್ಲಿ ಹುಟ್ಟಿಕೊಂಡಿತ್ತು. ಆದರೆ ವಾಸ್ತವದಲ್ಲಿ ಕೆಂಪು ಪಾದರಸ ಎಂಬ ರಾಸಾಯನಿಕ ವಸ್ತು ಇಲ್ಲ ಎಂದು ವಿಜ್ಞಾನಿಗಳೇ ಸ್ಪಷ್ಟಪಡಿಸಿದ್ದಾರೆ. ಹಿಂದೆ ಕಪ್ಪು ಬಿಳುಪು ಟಿವಿಗಳಲ್ಲಿ ಬಳಕೆ ಮಾಡಿರುವುದು ಮರ್ಕ್ಯೂರಿಯಿಂದ ತಯಾರಿಸಿದ ಅತ್ಯಂತ ವಿಷಕಾರಿ ದ್ರವ. ಅದು ನೋಡಲು ಕೆಂಪು ಬಣ್ಣದ್ದಾಗಿದೆ. ಅದರಿಂದ ಜೀವಕ್ಕೆ ಅಪಾಯವಿದೆ ಎನ್ನುತ್ತಾರೆ ಡಾ. ಉದಯ ಶಂಕರ್ ಪುರಾಣಿಕ್.

ಇನ್ನು ಸಾಲಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯಲ್ಲಿ ಇರುವಂತೆ ಮರ್ಕ್ಯೂರಿಯನ್ನು ಟಿವಿಗಳಲ್ಲಿ ಹುಡುಕುವುದು ಹುಚ್ಚತನ. ಹಿಂದೆ ಇದೇ ರೀತಿಯ ಹುಟುಕಾಟ ಅಂದಿನ ಹಳೆಯ ಫಿಲಿಪ್ಸ್, ಮರ್ಫಿ ರೇಡಿಯೊಗಳಲ್ಲಿಯೂ ಹುಡುಕಾಟ ನಡೆದಿತ್ತು ಎಂದು ಎಂದು ವಿವರಿಸಿದರು ಡಾ. ಉದಯ ಶಂಕರ್ ಪುರಾಣಿಕ್.

ಬಾಂಬ್ ತಯಾರಿಕೆ ಸುಲಭವಲ್ಲ

ಬಾಂಬ್ ತಯಾರಿಕೆ ಸುಲಭವಲ್ಲ

ರಸಾಯನಶಾಸ್ತ್ರದ ಪಿರಿಯಾಡಿಕ್ ಟೇಬಲ್(ಆವರ್ತಕ ಕೋಷ್ಟಕ)ನಲ್ಲಿ 109ಕ್ಕೂ ಹೆಚ್ಚು ಮೂಲಭೂತ ವಸ್ತುಗಳಿವೆ. ಅವುಗಳಲ್ಲೊಂದು ಮರ್ಕ್ಯೂರಿ (ಪಾದರಸ). ಪಾದರಸ ದ್ರವರೂಪದ ಲೋಹ. ಜಗತ್ತಿನಲ್ಲಿ ದ್ರವರೂಪದ ಲೋಹದ ವಸ್ತು ಮರ್ಕ್ಯೂರಿ ಮಾತ್ರ. ಅದು ಅತ್ಯುತ್ತಮ ಉಷ್ಣವಾಹಕ. ಹೀಗಾಗಿ ಥರ್ಮಾ ಮೀಟರ್ ಸೇರಿದಂತೆ ಹಲವು ವೈಜ್ಞಾನಿಕ ಉಪಕರಣಗಳಲ್ಲಿ ಅದನ್ನು ಉಪಯೋಗಿಸಲಾಗುತ್ತದೆ ಎನ್ನುತ್ತಾರೆ ಬೆಂಗಳೂರಿನ ಜೈನ್ ಯುನಿವರ್ಸಿಟಿಯ ಸೆಂಟರ್ ಫಾರ್ ನ್ಯಾನೋ ಆ್ಯಂಡ್ ಮಟೆರಿಯಲ್ ಸೈನ್ಸ್‌ ವಿಭಾಗದ ಪ್ರೊ. ಮಹಾವೀರ್ ಕುರಕುರಿ.

ಪಾದರಸ ಅಥವಾ ಅದರ ಉಪ ಉತ್ಪನ್ನಗಳನ್ನು ನಿಜವಾಗಿಯೂ ಬಾಂಬ್‌ ತಯಾರಿಕೆಯಲ್ಲಿ ಬಳಸಲಾಗಿದೆ ಎಂದು ಹೇಳಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ, ಹಾಗಾಗಿ ಅದೊಂದು ವದಂತಿ ಮಾತ್ರ. ಆದರಿಂದ ಅನಗತ್ಯವಾಗಿ ಹಳೆಯ ಟಿವಿಗಳಲ್ಲಿನ ರಾಸಾಯನಿಕ ವಸ್ತುಗಳನ್ನು ಮುಟ್ಟಿ ಅಪಾಯವನ್ನು ಮೈಮೇಲೆ ತಂದುಕೊಳ್ಳಬಾರದು ಎಂದು ಪ್ರೊ. ಮಹಾವೀರ ಕುರಕುರಿ ಎಚ್ಚರಿಸಿದ್ದಾರೆ.

ಹಿಂದೆಯೂ ಹುಟುಕಾಟ

ಹಿಂದೆಯೂ ಹುಟುಕಾಟ

ಹಿಂದೆ ಇಸ್ರೇಲ್-ಪ್ಯಾಲೆಸ್ಟೈನ್ ಸಮರ ತೀವ್ರಗಾಗಿದ್ದ ಸಂದರ್ಭದಲ್ಲಿ ರೆಡಿಯೊಗಳಲ್ಲಿ ರೆಡ್ ಮರ್ಕ್ಯೂರಿ ಇದೆ ಎಂಬ ದೊಡ್ಡ ರೂಮರ್ ಎದ್ದಿತ್ತು. ಆಗ ಅರಬ್ ದೇಶಗಳಲ್ಲಿ ಅದರ ಹುಡುಕಾಟ ಜೋರಾಗಿತ್ತು. ಪಾಕಿಸ್ತಾನ್ ಸೇರಿದಂತೆಅನೇಕ ದೇಶಗಳಲ್ಲಿ ರೆಡ್ ಮರ್ಕ್ಯೂರಿಗಾಗಿ ತೀವ್ರ ಹುಡುಕಾಟ ನಡೆದಿತ್ತು. ಸ್ವಲ್ಪ ಪ್ರಮಾಣದ ರೆಡ್ ಕರ್ಮ್ಯೂರಿ ಸಿಕ್ಕರೆ ಒಂದಿಡೀ ನಗರವನ್ನು ಸುಡುವಂಥ ಬಾಂಬ್ ತಯಾರಿಸಬಹುದು ಎಂಬ ಸುಳ್ಳು ಸುದ್ದಿ ಜಗತ್ತಿನಾದ್ಯಂತ ಹರಡಿತ್ತು.

ಆಗ ಜನರಲ್ಲಿ ಅರಿವು ಮೂಡಿಸಲು ಬಿಬಿಸಿ 1990ರಲ್ಲಿ ಸಮಗ್ರವಾದ ವರದಿಯನ್ನು ಮಾಡಿತ್ತು. ಈಗಲೂ ಸಹ ಜನರು ಇಲ್ಲದ ರೆಡ್ ಮರ್ಕ್ಯೂರಿ ಹುಡುಕುವ ಭರದಲ್ಲಿ ಮರ್ಕ್ಯೂರಿಯಿಂದ ತಯಾರಿಸಲಾದ ವಸ್ತುವನ್ನು ಟಿವಿಗಳಲ್ಲಿ ಹುಡುಕಾಡುತ್ತಿದ್ದಾರೆ ಎನ್ನುತ್ತಾರೆ ಡಾ. ಉದಯ ಶಂಕರ್ ಪುರಾಣಿಕ್.

English summary
Black-and-white TVs have been in demand during the Corona Virus Lockdown. Rumor has it that there is a huge price tag for red mercury on TVs in the past. Experts have clarifid it as a lie. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X