• search

ಆರ್‌ಬಿಐ ಮಂಡಳಿಗೆ ಆರೆಸ್ಸೆಸ್ ಸಿದ್ಧಾಂತವಾದಿ ಗುರುಮೂರ್ತಿ ನೇಮಕ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನವದೆಹಲಿ, ಆಗಸ್ಟ್ 8: ಆರೆಸ್ಸೆಸ್ ಪರ ಚಿಂತನೆಯುಳ್ಳ ಪತ್ರಕರ್ತ ಎಸ್. ಗುರುಮೂರ್ತಿ, ಸಹಕಾರ ಭಾರತಿ ಮುಖ್ಯಸ್ಥ ಸತೀಶ್ ಕಾಶಿನಾಥ್ ಮರಾಥೆ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ ಅರೆಕಾಲಿಕ ನಿರ್ದೇಶಕರನ್ನಾಗಿ ಕೇಂದ್ರ ಸರ್ಕಾರ ನೇಮಿಸಿದೆ.

  ಇದಕ್ಕೆ ಸಂಪುಟದ ನೇಮಕಾತಿ ಸಮಿತಿ ಅನುಮತಿ ನೀಡಿದ್ದು, ಇಬ್ಬರ ನೇಮಕಾತಿ ಅವಧಿ ನಾಲ್ಕು ವರ್ಷಗಳದ್ದಾಗಿರಲಿದೆ.

  ಹಣಕಾಸು ಸೇವೆಗಳ ಇಲಾಖೆಯು ಕಳುಹಿಸಿದ್ದ ನೇಮಕಾತಿಯ ಪ್ರಸ್ತಾವಗಳಿಗೆ ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. ಈ ಸಂಬಂಧ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಧಿಸೂಚನೆ ಹೊರಡಿಸಿದೆ.

  4 ವರ್ಷದಲ್ಲಿ 2ನೇ ಸಲ ಬಡ್ಡಿ ದರ ಏರಿಸಿದ ಆರ್ ಬಿಐ, ಕಾರಣ ಏನು?

  ಎಸ್, ಗುರುಮೂರ್ತಿ ತಮಿಳು ರಾಜಕೀಯ ವಾರಪತ್ರಿಕೆ 'ತುಗ್ಲಕ್'ದ ಸಂಪಾದಕರಾಗಿದ್ದು, ಆರೆಸ್ಸೆಸ್ ಸಹಭಾಗಿತ್ವದ ಸ್ವದೇಶಿ ಜಾಗರಣ್ ಮಂಚ್‌ದ ಸಹ ಸಂಚಾಲಕ ಸಹ ಆಗಿದ್ದಾರೆ.

  RSS ideologue S. Gurumurthy appointed to the board of RBI

  ಗುರುಮೂರ್ತಿ ಅರ್ಥಶಾಸ್ತ್ರಜ್ಞರು, ಸಿಎ ಕೂಡ ಆಗಿದ್ದು, ದೀರ್ಘಕಾಲದಿಂದ ಆರ್ಥಿಕ ಹಾಗೂ ರಾಜಕೀಯ ವಿಶ್ಲೇಷಣೆಗಳನ್ನು ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಪ್ರಮುಖ ಬೆಂಬಲಿಗರೂ ಹೌದು.

  ಆದರೆ, ಕಳೆದ ವರ್ಷ ಅವರು ಆರ್‌ಬಿಐ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಆರ್‌ಬಿಐ ಭಾರತದ ವ್ಯವಹಾರಗಳನ್ನು ನಾಶಪಡಿಸುತ್ತಿದೆ. ಅಲ್ಲದೆ, ಪಿಎಸ್‌ಯು ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಆರ್‌ಬಿಐ ಅಜೆಂಡಾದೊಂದಿಗೆ ಮುಂದುವರಿಯುತ್ತಿದೆ. ಇದು ತಪ್ಪು ಎಂದು ಅವರು ಟ್ವೀಟ್ ಮಾಡಿದ್ದರು.

  ಸತತವಾಗಿ ರೆಪೋ ದರ ಏರಿಕೆ, ಗೃಹ ಸಾಲ ಆಗಲಿದೆ ದುಬಾರಿ?

  ಸತೀಶ್ ಮರಾಥೆ ಭಾರತದಲ್ಲಿ ಸಹಕಾರಿ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ಸಹಕಾರ ಭಾರತಿ ಎನ್‌ಜಿಓದ ಮುಖ್ಯಸ್ಥರಾಗಿದ್ದಾರೆ.

  ಬ್ಯಾಂಕ್ ಆಫ್ ಇಂಡಿಯಾ, ಯುನೈಟೆಡ್ ವೆಸ್ಟರ್ನ್ ಬ್ಯಾಂಕ್, ಜನಕಲ್ಯಾಣ್ ಸಹಕಾರಿ ಬ್ಯಾಂಕುಗಳಲ್ಲಿ ಸುಮಾರು 20 ವರ್ಷ ದುಡಿದಿದ್ದಾರೆ. ಕಾಲೇಜು ದಿನಗಳಲ್ಲಿ ಅವರು ಆರೆಸ್ಸೆಸ್‌ನ ವಿದ್ಯಾರ್ಥಿ ಘಟಕ ಎಬಿವಿಪಿಯಲ್ಲಿ ತೊಡಗಿಸಿಕೊಂಡಿದ್ದರು. ಎಬಿವಿಪಿಯ ಖಜಾಂಚಿಯಾಗಿಯೂ ನಾಲ್ಕು ವರ್ಷ ಕೆಲಸ ಮಾಡಿದ್ದರು.

  RSS ideologue S. Gurumurthy appointed to the board of RBI

  ಇಬ್ಬರ ನೇಮಕದಿಂದ ಆರ್‌ಬಿಐ ಮಂಡಳಿಯ ನಿರ್ದೇಶಕರ ಸಂಖ್ಯೆ ಹತ್ತಕ್ಕೆ ಏರಿದ್ದು, ಇದು ಮಂಡಳಿಗೆ ಇರುವ ಗರಿಷ್ಠ ನಿರ್ದೇಶಕರ ಮಿತಿಯಾಗಿದೆ. ಇದಲ್ಲದೆ ಇಬ್ಬರು ಸರ್ಕಾರಿ ಅಧಿಕಾರಿಗಳು ಸಹ ಮಂಡಳಿಯಲ್ಲಿ ಇದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Central government on Tuesday appointed RSS Ideologue, economist, S. Gurumurthy and Sahakara Bharathi's patron Satish Marathe to the board of the Reserve Bank of India.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more