ಹೊಸ ನೋಟು ಅಸಲಿಯೋ ನಕಲಿಯೋ? ಹೀಗೆ ಪರೀಕ್ಷಿಸಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 10: ಹಳೆ 500 ಹಾಗೂ 1000 ರು ನೋಟುಗಳ ಎಕ್ಸ್ ಚೇಂಜ್ ಮೇಳ ಒಂದು ಕಡೆಯಾದರೆ, ಹೊಸ 2000 ಹಾಗೂ 500 ರು ನೋಟುಗಳನ್ನು ಮೊದಲ ಬಾರಿಗೆ ಪಡೆದ ಅನುಭವ, ಸಂಭ್ರಮ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಆದರೆ, ಹೊಸ ನೋಟುಗಳನ್ನು ಬಳಸುವ ಮುನ್ನ ನೋಟುಗಳನ್ನು ಪರೀಕ್ಷೆ ಮಾಡುವುದು ಹೇಗೆ? ಇಲ್ಲಿದೆ ಉತ್ತರ.

ಗ್ಯಾಲರಿ : ನೋಟು ಬದಲಾವಣೆಗಾಗಿ ನೂಕು ನುಗ್ಗಲು

ಮೊದಲ ಬಾರಿಗೆ ರೂ.2 ಸಾವಿರ ಮುಖಬೆಲೆಯ ನೋಟು ದೇಶದಲ್ಲಿ ಚಲಾವಣೆಗೆ ಬರುತ್ತಿದ್ದು, ಈ ನೋಟಿನಲ್ಲಿ ಸುಧಾರಿತ ಭದ್ರತಾ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು ನಕಲಿ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ. [500, 1000 ನೋಟು ಬದಲಾವಣೆಗೆ ಹೊರಟ್ರಾ, ಈ ಅಂಶ ಗಮನಿಸಿ]

ಈ ಹೊಸ ಸುಧಾರಿತ ನೋಟುಗಳ ಮೂಲಕ ನಕಲಿ ನೋಟುಗಳ ನಿಯಂತ್ರಣ ಸಾಧಿಸಬಹುದು. 2000 ರು ನೋಟಿನ ನಕಲು ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ. ದೇಶದ ಹಲವೆಡೆ ಹೊಸ ನೋಟುಗಳು ಲಭ್ಯವಿದೆ. ಆದರೆ, ನೋಟುಗಳ ಸುರಕ್ಷಿತ ಅಂಶಗಳ ಬಗ್ಗೆ ಆರ್ ಬಿಐ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. [ಹೊಸ 500 ಹಾಗೂ 2,000 ನೋಟು ನೋಡಲು ಹೇಗಿದೆ?]

ಆದರೆ, 500 ಹಾಗೂ 2000 ರು ಮುಖಬೆಲೆಯ ಹೊಸ ನೋಟುಗಳ ಸುರಕ್ಷಿತ ಅಂಶಗಳನ್ನು ಗಮನಿಸಿದರೆ, 500 ರು ನೋಟಿನಲ್ಲಿ 12 ಅಂಶ ಹಾಗೂ 2000 ರು ನೋಟಿನಲ್ಲಿ 17 ಸುರಕ್ಷಿತ ಅಂಶಗಳನ್ನು ಗಮನಿಸಿ ನೋಟಿನ ಅಸಲಿಯತ್ತನ್ನು ಪರೀಕ್ಷಿಸಬಹುದು.[ಬ್ಯಾಂಕುಗಳಿಗೆ ವಾರಾಂತ್ಯ ರಜೆ ಇಲ್ಲ, ನ.10 ರಿಂದ ಹೊಸ ನೋಟು!]

ಹಸಿರು ನೀಲಿ ಬಣ್ಣದ ಭದ್ರತೆ ಎಳೆ

ಹಸಿರು ನೀಲಿ ಬಣ್ಣದ ಭದ್ರತೆ ಎಳೆ

ಭದ್ರತೆ ಎಳೆ(ಥ್ರೆಡ್) ನೋಟನ್ನು ಬೆಳಕಿಗೆ ಹಿಡಿಉ ಬಾಗಿಸಿ ನೋಡಿದಾಗ ಭದ್ರತೆ ಗೆರೆ (ಥ್ರೆಡ್) ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುವುದನ್ನು ಗಮನಿಸಬಹುದು. ಭಾರತ, ಗವರ್ನರ್ ಸಹಿ, ಆರ್ಬಿಐ ಲಾಂಛನ, ಗ್ರಾರಂಟಿ ಷರತ್ತು ನೋಟಿನಲ್ಲಿ ಬರೆಯಲಾಗಿದೆ. ನೋಟಿನ ಕೆಳಭಾಗದ ಬಲಗಡೆಗೆ ಇರುವ ₹2000 ಸಿಂಬಲ್ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ.

 500 ರು ನಲ್ಲಿ ಸುಮಾರು 17ಕ್ಕೂ ಅಧಿಕ ಸುರಕ್ಷಿತ ಅಂಶ

500 ರು ನಲ್ಲಿ ಸುಮಾರು 17ಕ್ಕೂ ಅಧಿಕ ಸುರಕ್ಷಿತ ಅಂಶ

ಈ ಹೊಸ ಸುಧಾರಿತ ನೋಟುಗಳ ಮೂಲಕ ನಕಲಿ ನೋಟುಗಳ ನಿಯಂತ್ರಣ ಸಾಧಿಸಬಹುದು. 500 ರು ನಲ್ಲಿ ಸರಿ ಸುಮಾರು 17ಕ್ಕೂ ಅಧಿಕ ಸುರಕ್ಷಿತ ಅಂಶಗಳನ್ನು ಅಳವಡಿಸಲಾಗಿದೆ. ಈ ಮುಂಚಿನ 500 ರು ನೋಟಿಗಿಂತ ಹೊಸ ನೋಟು ಹೆಚ್ಚು ಸುರಕ್ಷಿತವಾಗಿದ್ದು, ಗಾಂಧೀಜಿ ಚಿತ್ರದ ಮುಖ, ದೇವನಾಗರಿ ಲಿಪಿ ಚಿನ್ಹೆ, ಹಿಂಬದಿಯಲ್ಲಿ ಕೆಂಪು ಕೋಟೆ ಚಿತ್ರ,, ಸ್ವಚ್ಛ ಭಾರತ ಅಭಿಯಾನ ಮುಂತಾದ ಅಂಶಗಳನ್ನು ಗಮಿಸಬಹುದು.

ಅಶೋಕ ಸ್ತಂಭ ಎಲೆಕ್ರ್ಟೋಟೈಪ್ (2000)

ಅಶೋಕ ಸ್ತಂಭ ಎಲೆಕ್ರ್ಟೋಟೈಪ್ (2000)

ಅಶೋಕ ಸ್ತಂಭ ಎಲೆಕ್ರ್ಟೋಟೈಪ್ (2000) ನೀರು ಗುರುತು ಮತ್ತು ಗಾಂಧಿಜಿ ಭಾವಚಿತ್ರ ನೋಟಿನ ಬಲಭಾಗದಲ್ಲಿ ಇರುತ್ತದೆ. ರಾಷ್ಟ್ರ ಲಾಂಛನ ಬಲಭಾಗದಲ್ಲಿದ್ದು, ಹಸಿರು ಬಣ್ಣದಲ್ಲಿ ಅಂಕಿಗಳ ಉಲ್ಲೇಖವಿದ್ದು, ಬೆಳಕಿನಲ್ಲಿ ಇದು ನೀಲಿ ಬಣ್ಣಕ್ಕೆ ಬದಲಾಗುತ್ತದೆ.

 ಬ್ರೈಲ್ ಲಿಪಿ ತಂತ್ರಜ್ಞಾನ ಬಳಕೆ

ಬ್ರೈಲ್ ಲಿಪಿ ತಂತ್ರಜ್ಞಾನ ಬಳಕೆ

ಬ್ರೈಲ್ ಲಿಪಿ ಬಳಸಿ ಕೂಡಾ ನೋಟುಗಳು ಮುದ್ರಿತವಾಗಿವೆ ಹೀಗಾಗಿ ಅಂಧರು ಕೂಡಾ ನೋಟಿನ ಮೌಲ್ಯ ಓದಬಹುದು. ಗಾಂಧಿ ಭಾವಚಿತ್ರ, ರಾಷ್ಟ್ರಲಾಂಛನ, ರೇಖೆಗಳ ಮೂಲಕ ಇದನ್ನು ಗುರುತಿಸಬಹುದಾಗಿದೆ.

ಸ್ವಚ್ಛಭಾರತ ಲಾಂಛನ, ಮಂಗಳಯಾನ

ಸ್ವಚ್ಛಭಾರತ ಲಾಂಛನ, ಮಂಗಳಯಾನ

ನೋಟಿನ ಹಿಂಬದಿ ನೋಟಿನ ಹಿಂಬದಿಯಲ್ಲಿ ಮಂಗಳ ಗ್ರಹಕ್ಕೆ ರವಾನಿಲಾದ ಭಾರತ್ದ ಉಪಗ್ರಹದ ಲಾಂಛನವಿದೆ. ಕನ್ನಡ ಸೇರಿದಂತೆ 15 ಭಾಷೆಗಳಲ್ಲಿ ರೂಪಾಯಿಯ ಬರಹವಿರುತ್ತದೆ. ಸ್ವಚ್ಛಭಾರತ ಲಾಂಛನ, ನೋಟು ಮುದ್ರಿಸಲ್ಪಟ್ಟ ವರ್ಷ ಉಲ್ಲೇಖಿಸಲಾಗಿರುತ್ತದೆ.

ನೋಟಿನ ಅಗಲ, ಎತ್ತರ ಎಷ್ಟಿದೆ

ನೋಟಿನ ಅಗಲ, ಎತ್ತರ ಎಷ್ಟಿದೆ

ನೋಟಿನ ಗಾತ್ರ 2000 ಮುಖಬೆಲೆಯ ಹೊಸ ನೋಟಿನ ಅಗಲ 166 ಮಿಲಿಮೀಟರ್, ಎತ್ತರ 66 ಮಿಲಿಮೀಟರ್ ಇದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಹಿಂದಿ ಭಾಷೆಯಲ್ಲೂ ಎರಡು ಸಾವಿರ ಎಂದು ದೊಡ್ಡದಾಗಿ ಬರೆಯಲಾಗಿದೆ. ನವೆಂಬರ್ 10ರಂದು ರು.500 ಹಾಗೂ 2,000 ನೋಟುಗಳು ಬಿಡುಗಡೆಯಾಗಲಿದೆ.

45 ಡಿಗ್ರಿಗೆ ಹಿಡಿದು ನೋಡಿ

45 ಡಿಗ್ರಿಗೆ ಹಿಡಿದು ನೋಡಿ

ಮೆಜೆಂಟಾ ಬಣ್ಣದಲ್ಲಿರುವ ನೋಟನ್ನು ಬೆಳಕಿಗೆ 45 ಡಿಗ್ರಿಗೆ ಹಿಡಿದು ನೋಡಿದರೆ 2000 ಸಂಖ್ಯೆ ಸ್ಪಷ್ಟವಾಗಿ ಕಾಣುತ್ತದೆ. ಎಡಬದಿಗೆ ದೇನಾಗರಿ ಲಿಪಿಯಲ್ಲಿ २००० ಸಂಖ್ಯಾವಾಚಕ ಇರುತ್ತದೆ. ಮಧ್ಯಭಾಗದಲ್ಲಿ ಮಹಾತ್ಮ ಗಾಂಧಿಯವರ ಚಿತ್ರವಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
While all the security features in the note have not been revealed due to security reasons, here are some of the features of the Rs 2,000 note which will make it hard to replicate or fake.
Please Wait while comments are loading...