ಮೈಸೂರು ಸೇರಿ 5 ನಗರಗಳಲ್ಲಿ 10 ರು ಪ್ಲಾಸ್ಟಿಕ್ ನೋಟು

ಕೊಚ್ಚಿ, ಮೈಸೂರು, ಜೈಪುರ, ಶಿಮ್ಲಾ ಹಾಗೂ ಭುವನೇಶ್ವರ ನಗರಗಳಲ್ಲಿ ಮೊದಲ ಬಾರಿಗೆ 10 ರು ಮುಖಬೆಲೆಯ 1 ಕೋಟಿಗೂ ಅಧಿಕ ಪ್ಲಾಸ್ಟಿಕ್ ನೋಟುಗಳು ಚಲಾವಣೆಯಾಗಲಿದೆ. ಇದು ಪ್ರಾಯೋಗಿಕ ಹಂತವಾಗಿ ಜಾರಿಗೆ ಬರಲಿದ್ದು, ಸಾರ್ವಜನಿಕರ ಪ್ರತಿಕ್ರಿಯೆ ನೋಡಿಕೊಂಡು ಇನ್ನುಳಿದ ನಗರಗಳಿಗೆ ವಿಸ್ತರಿಸಲಾಗುವುದು.
2014ರ ಎರಡನೇ ಅವಧಿಯಲ್ಲಿ ಈ ಪ್ಲಾಸ್ಟಿಕ್ ನೋಟುಗಳು ಜನರ ಕೈ ಸೇರಲಿದೆ.ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ನಕಲಿ ನೋಟುಗಳನ್ನು ತಡೆಯಲು ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಲಾಗಿತ್ತು. ಹಲವು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ಲಾಸ್ಟಿಕ್ ನೋಟುಗಳನ್ನು ಬಿಡುಗಡೆ ಮಾಡಲಾಗಿದೆ. ಎಂದು ಸಚಿವ ಮೀನಾ ಹೇಳಿದ್ದಾರೆ.
ಕಾರ್ಪೊರೇಟ್ ತೆರಿಗೆ ಬಾಕಿ : ಕಾರ್ಪೊರೇಟ್ ಸಂಸ್ಥೆಗಳ ತೆರಿಗೆ ಬಾಕಿ ವಸೂಲಿಗಾಗಿ ಆರು ಅಂಶಗಳ ಯೋಜನೆ ಹಾಕಿಕೊಳ್ಳಲಾಗಿದೆ. ಡಿಸೆಂಬರ್ 31, 2013ರ ಗಣತಿಯಂತೆ ಒಟ್ಟಾರೆ ಕಾರ್ಪೊರೇಟ್ ಸಂಸ್ಥೆಗಳು ಸುಮಾರು 2.46 ಲಕ್ಷ ಕೋಟಿ ರು ಬಾಕಿ ಉಳಿಸಿಕೊಂಡಿವೆ. ಸುಮಾರು 45 ಕಾರ್ಪೊರೇಟ್ ಸಂಸ್ಥೆಗಳ ಮೇಲೆ 500 ಕೋಟಿ ರು ಮೌಲ್ಯದ ನೇರ ತೆರಿಗೆ ಪ್ರಕರಣಗಳು ವಿಚಾರಣೆ ಹಂತದಲ್ಲಿದೆ ಎಂದು ಸಚಿವ ಜೆಡಿ ಸೀಲಂ ಹೇಳಿದರು.
ಕಪ್ಪು ಹಣ ಹಾಗೂ ನಕಲಿ ನೋಟ್ ಹಾವಳಿಗಳ ನಿಯಂತ್ರಣಕ್ಕೆ ಆರ್ ಬಿಐ ಮಹತ್ವದ ಹೆಜ್ಜೆಯಿಟ್ಟಿದೆ. 500 ಹಾಗೂ 1,000 ರೂಪಾಯಿಗಳ ಕರೆನ್ಸಿ ನೋಟ್ ಗಳು ಸೇರಿದಂತೆ 2005ಕ್ಕಿಂತ ಮೊದಲು ಮುದ್ರಣಗೊಂಡಿರುವ ಎಲ್ಲಾ ಕರೆನ್ಸಿನೋಟ್ ಗಳ ಚಲಾವಣೆಯನ್ನು ಹಿಂಪಡೆಯುವ ನಿರ್ಧಾರಕ್ಕೆ ಆರ್ ಬಿಐ ಬಂದಿತ್ತು. ಮಾರ್ಚ್ 31,2014ರ ಬಳಿಕ ಈ ಕಾರ್ಯವನ್ನು ಆರಂಭಿಸಲಾಗುತ್ತದೆ. [ಹೆಚ್ಚಿನ ಮಾಹಿತಿ ಇಲ್ಲಿ ಓದಿ]
2014ರ ಜನವರಿ 1 ರಿಂದ ಬ್ಯಾಂಕ್ ಗಳಲ್ಲಿ ಈ ರೀತಿ ಅಡ್ಜೆಸ್ಟ್ ಮೆಂಟ್ ನಡೆಯುವುದಿಲ್ಲ. ಪೆನ್ನು ಹಾಗೂ ಇತರೆ ಶಾಹಿಯಾ ಲೇಖನಿಗಳಿಂದ ಬರೆದ, ಗೀಚಿದ ನೋಟುಗಳನ್ನು ಸ್ವೀಕರಿಸದಂತೆ ಆರ್ ಬಿಐ ನಿರ್ದೇಶನ ನೀಡಿದೆ. ಇಂಥ ನೋಟುಗಳನ್ನು ತ್ಯಜಿಸುವಂತೆ ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಕಟ್ಟಾಜ್ಞೆ ಹೊರಡಿಸಿದೆ. [ಹೆಚ್ಚಿನ ಮಾಹಿತಿ ಓದಿ]
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications