ಡಿಸೆಂಬರ್ 30ರ ನಂತರವೂ ವಿಥ್ ಡ್ರಾ ಮಿತಿ ಮುಂದುವರಿಕೆ?!

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 25: ಎಟಿಎಂ ಹಾಗೂ ಬ್ಯಾಂಕ್ ಗಳಲ್ಲಿ ಹಣ ತೆಗೆದುಕೊಳ್ಳುವುದಕ್ಕೆ ಇರುವ ಮಿತಿ ಡಿಸೆಂಬರ್ 30ರ ನಂತರವೂ ಮುಂದುವರಿಯುವ ಸಾಧ್ಯತೆ ಇದೆ. ನೋಟು ಮುದ್ರಣ ಪ್ರಕ್ರಿಯೆಯು ಹೊಸ ನೋಟಿಗೆ ಇರುವಷ್ಟು ಬೇಡಿಕೆಗೆ ತಕ್ಕಂತೆ ಸಾಗುತ್ತಿಲ್ಲ. ಆದ್ದರಿಂದ ಮಿತಿಯು ಮುಂದುವರಿಯುವ ಸಾಧ್ಯತೆ ಇದೆ.

ಪ್ರಧಾನಿ ಮೋದಿ ಹೇಳಿದ್ದ ಐವತ್ತು ದಿನಗಳ ಕಾಲ ಮಿತಿ ಇನ್ನೇನು ಮುಗಿಯುತ್ತಿದೆ. ಬ್ಯಾಂಕ್ ಗಳ ಸಮೂಹದಲ್ಲಿ ಚಾಲ್ತಿಯಲ್ಲಿರುವ ಮಾತಿನ ಬಗ್ಗೆಯೇ ಹೇಳುವುದಾದರೆ ಹೊಸ ವರ್ಷದಲ್ಲೂ ಹಣ ಜಮೆ ಹಾಗೂ ತೆಗೆದುಕೊಳ್ಳುವುದಕ್ಕೆ ಮಿತಿ ಮುಂದುವರಿಯುತ್ತದೆ. ಹಲವೆಡೆ ಬ್ಯಾಂಕ್ ಗಳ ಸ್ಥಿತಿ ಹೇಗಿದೆಯೆಂದರೆ ಸದ್ಯಕ್ಕೆ ವಿಧಿಸಿರುವ ವಾರದ ಮಿತಿ 24 ಸಾವಿರವನ್ನೂ ಪೂರೈಸುವುದಕ್ಕೆ ಆಗುತ್ತಿಲ್ಲ.[ಚೆಕ್ ಬೌನ್ಸ್ ಆದರೆ ಜೈಲೂಟ ಗ್ಯಾರಂಟಿ, ಬರಲಿದೆ ಹೊಸ ನಿಯಮ]

ಈಗಿರುವ ಮಿತಿಯನ್ನು ಸಂಪೂರ್ಣವಾಗಿ ವಾಪಸ್ ಪಡೆಯುತ್ತಾರೆ ಎಂಬ ನಂಬಿಕೆ ಇಲ್ಲ. ಒಂದು ವೇಳೆ ಮುದ್ರಣದ ಪ್ರಮಾಣವೇನಾದರೂ ಹೆಚ್ಚಾದರೆ ಸ್ವಲ್ಪ ಮಟ್ಟಿಗೆ ಮಿತಿಯಲ್ಲಿ ಹೆಚ್ಚಳ ಮಾಡಬಹುದು ಎಂದು ಬ್ಯಾಂಕ್ ವೊಂದರ ಹಿರಿಯ ಅಧಿಕಾರಿಗಳೊಬ್ಬರು ಅಭಿಪ್ರಾಯ ಪಡುತ್ತಾರೆ.

Restrictions on cash withdrawals likely to continue

ಎಸ್ ಬಿಐನ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಅವರು ಹೇಳಿರುವಂತೆ, ಹೆಚ್ಚಿನ ಹಣ ಬ್ಯಾಂಕ್ ಗಳಿಗೆ ದೊರೆಯುವವರೆಗೆ ಮಿತಿಯನ್ನು ಸಂಪೂರ್ಣ ವಾಪಸ್ ಪಡೆಯುವುದು ಸಾಧ್ಯವಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಈ ಬಗ್ಗೆ ಯಾವುದೇ ವಿಚಾರ ತಿಳಿಸಿಲ್ಲ. ಆದರೆ ಆರ್ಥಿಕ ಇಲಾಖೆ ಕಾರ್ಯದರ್ಶಿ ಅಶೋಕ್ ಲವಾಸ ಹೇಳಿರುವ ಹಾಗೆ, ಡಿಸೆಂಬರ್ 30ರ ನಂತರ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಮಾಡಲಾಗುವುದು.[ರಾಜಕೀಯ ಲಾಭಕ್ಕಾಗಿ ಏನೋ ಮಾಡಿಬಿಡುವ ಹಪಹಪಿ ಇಲ್ಲ: ಪ್ರಧಾನಿ]

ಚಲಾವಣೆಯಲ್ಲಿದ್ದ 15.4 ಲಕ್ಷ ಕೋಟಿ ನಿಷೇಧಿಸಿದ ನಂತರ ನವೆಂಬರ್ 9ರಿಂದ ಡಿಸೆಂಬರ್ 19ರ ಮಧ್ಯೆ ಬ್ಯಾಂಕ್ ಗಳಿಗೆ 5.92 ಲಕ್ಷ ಕೋಟಿ ರುಪಾಯಿ ಸರಬರಾಜು ಮಾಡಲಾಗಿದೆ. ಆರ್ ಬಿಐ ಮಾಹಿತಿ ಪ್ರಕಾರ ಡಿಸೆಂಬರ್ 10ರವರೆಗೆ ಬ್ಯಾಂಕ್ ಗಳಿಗೆ 12.4 ಲಕ್ಷ ಕೋಟಿ ರುಪಾಯಿ ಹಣ ಜಮೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Restrictions on withdrawal of cash from banks and ATMs are likely to continue beyond December 30 as currency printing presses and RBI have not been able to keep pace with the demand of new currency notes.
Please Wait while comments are loading...