ರಿಲಯನ್ಸ್ ಮುಖೇಶ್ ಅಂಬಾನಿಯ ಒಂದು ದಿನದ ಆದಾಯ 300 ಕೋಟಿ ರೂ.!
Recommended Video

ನವದೆಹಲಿ, ಸೆಪ್ಟೆಂಬರ್ 26: ರಿಲಯನ್ಸ್ ಇಂಡಸ್ಟ್ರೀಸ್ ಚೇರ್ ಮನ್ ಮುಖೇಶ್ ಅಂಬಾನಿ ಅವರ ಒಂದು ದಿನದ ಆದಾಯ 300 ಕೋಟಿ ರೂಪಾಯಿ! ಬಾರ್ಕ್ಲೇಸ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2018 ಬಿಡುಗಡೆ ಮಾಡಿದ ವರದಿಯ ಪ್ರಕಾರ ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಎಂದಿನಂತೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
3,71,000 ಕೋಟಿ ರೂ. ಒಟ್ಟು ಆಸ್ತಿಯನ್ನು ಹೊಂದಿರುವ ಮುಖೇಶ್, ಸತತ ಏಳನೇ ವರ್ಷ ಶ್ರೀಮಂತರ ಪಟ್ಟಿಯ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ. ಅವರ ಕಂಪನಿಯ ಶೇರುಗಳ ಬೆಲೆ ಶೇ.45 ರಷ್ಟು ಹೆಚ್ಚಿದೆ.
ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅವರ ನಂತರದ ಮೂರು ಸ್ಥಾನಗಳನ್ನು ಕ್ರಮವಾಗಿ ಎಸ್ಪಿ ಹಿಂದುಜಾ ಅಂಡ್ ಫ್ಯಾಮಿಲಿ(ರೂ.1,59,000 ಕೋಟಿ), ಎಲ್ ಎನ್ ಮಿತ್ತಲ್ ಅಂಡ್ ಫ್ಯಾಮಿಲಿ (ರೂ. 1,14,500 ಕೋಟಿ), ಅಜಿಮ್ ಪ್ರೇಮ್ಜಿ(ರೂ. 96,100 ಕೋಟಿ) ಪಡೆದುಕೊಂಡಿದ್ದಾರೆ.

ಈ ಮೂವರೂ ಶ್ರೀಮಂತರ ಒಟ್ಟು ಆಸ್ತಿಯ ಮೌಲ್ಯವನ್ನು ಒಗ್ಗೂಡಿಸಿದರೂ ಮುಖೇಶ್ ಅಂಬಾನಿಯವರ ಆಸ್ತಿಯ ಮೌಲ್ಯಕ್ಕೆ ಸರಿಸಮವಾಗುವುದಕ್ಕೆ ಸಾಧ್ಯವಾಗುವುದಿಲ್ಲ!












Click it and Unblock the Notifications