ಲ್ಯಾಕ್ಮೆ ಫ್ಯಾಶನ್: ವಿಕಿ ಜೊತೆ ಹೆಜ್ಜೆ ಹಾಕಿದ ಜಾಹ್ನವಿ ಕಪೂರ್

ಮುಂಬೈ, ಫೆಬ್ರವರಿ 15: ಲ್ಯಾಕ್ಮೆ ಫ್ಯಾಶನ್ ವೀಕ್‌ನ ಇಪ್ಪತ್ತು ವರ್ಷಗಳನ್ನು ಆಚರಿಸಲು ದೇಶವಿದೇಶಗಳಲ್ಲಿ ಹೆಸರು ಮಾಡಿರುವ ಮೂವತ್ತು ಜೆನ್ ನೆಕ್ಸ್ಟ್ ಪ್ರತಿಭೆಗಳೊಡನೆ ಟ್ರೆಂಡ್ಸ್ ಪ್ರಸ್ತುತಪಡಿಸಿದ ಪ್ರಾರಂಭಿಕ ಪ್ರದರ್ಶನ, ಲ್ಯಾಕ್ಮೆ ಫ್ಯಾಶನ್ ವೀಕ್ ಸಮ್ಮರ್/ರೆಸಾರ್ಟ್ 2020 ಫ್ಯಾಶನ್ ಸಂಭ್ರಮವನ್ನು ಅನಾವರಣಗೊಳಿಸಿತು. ಈ ಕಾರ್ಯಕ್ರಮಕ್ಕೆ ತಾರಾಮೆರುಗು ತಂದುಕೊಟ್ಟ ಬಾಲಿವುಡ್ ತಾರೆಯರಾದ ವಿಕಿ ಕೌಶಲ್ ಹಾಗೂ ಜಾಹ್ನವಿ ಕಪೂರ್, ಹೆಸರಾಂತ ವಿನ್ಯಾಸಕರಾದ ಕುನಾಲ್ ರಾವಲ್ ಹಾಗೂ ರಾಹುಲ್ ಮಿಶ್ರಾ ಅವರ ವಿನ್ಯಾಸಗಳನ್ನು ಪ್ರದರ್ಶಿಸಿದರು.

ಜಿಯೋವರ್ಲ್ಡ್ ಗಾರ್ಡನ್, ಬಿಕೆಸಿ, ಮುಂಬಯಿಯ ಹೊಸ ಫ್ಯಾಶನ್ ಸ್ಥಳ 'ದಿ ಅಟೆಲಿಯರ್'ನಲ್ಲಿ ನಡೆದ ಈ ಪ್ರದರ್ಶನ, ಭಾರತದಲ್ಲಿ ಅತಿದೊಡ್ಡ ಪ್ರಧಾನ ಫ್ಯಾಶನ್ ವೇದಿಕೆಯಾದ ಲ್ಯಾಕ್ಮೆ ಫ್ಯಾಶನ್ ವೀಕ್‌ನ ಎರಡು ದಶಕಗಳನ್ನು ಆಚರಿಸಿತು.

ಜೆನ್ ನೆಕ್ಸ್ಟ್ ಕಾರ್ಯಕ್ರಮವು 2006ರಿಂದ ಲ್ಯಾಕ್ಮೆ ಫ್ಯಾಶನ್ ವೀಕ್‌ನ ಅನನ್ಯ ಉಪಕ್ರಮವಾಗಿದ್ದು, ಉತ್ತಮ ವಿನ್ಯಾಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಜೊತೆಗೆ ಸುಮಾರು 200 ವಿನ್ಯಾಸಕರಿಗೆ ವಿಶ್ವಮಟ್ಟದ ಬ್ರಾಂಡ್‌ಗಳಾಗಿ ಬೆಳೆಯಲು ಮಾರ್ಗದರ್ಶನ ನೀಡಿದೆ. ಈ ಪೈಕಿ ಮೂವತ್ತು ಜೆನ್ ನೆಕ್ಸ್ಟ್ ಪ್ರತಿಭೆಗಳು ಈ ಕಾರ್ಯಕ್ರಮದಲ್ಲಿ ತಮ್ಮ ವಿನ್ಯಾಸಗಳನ್ನು ಪ್ರದರ್ಶಿಸಿದರು.

Reliance Trends Lakmé Fashion Week Summer Resort 2020: Vickey Kaushal and Janhvi

ಈ ಪ್ರದರ್ಶನದ ಮುಂದುವರಿಕೆಯಾಗಿ, ಲ್ಯಾಕ್ಮೆ ಫ್ಯಾಶನ್ ವೀಕ್ 20 ವರ್ಷದ ಆಚರಣೆಯ ವಿಶೇಷ ಸಂಗ್ರಹವು ದೇಶಾದ್ಯಂತದ ಟ್ರೆಂಡ್ಸ್ ಮಳಿಗೆಗಳಲ್ಲಿ ಮತ್ತು ಆನ್‌ಲೈನ್‌ ಮೂಲಕ ಅಜಿಯೋ ವೆಬ್ ತಾಣದಲ್ಲಿ ಲಭ್ಯವಾಗಲಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಿಲಯನ್ಸ್ ಟ್ರೆಂಡ್ಸ್‌ನ ಸಿಓಓ ವಿಪಿನ್ ತ್ಯಾಗಿ ಮಾತನಾಡಿ, "ಜೆನ್ ನೆಕ್ಸ್ಟ್ ವಿನ್ಯಾಸಕರ ಜೊತೆಗೆ ಲ್ಯಾಕ್ಮೆ ಫ್ಯಾಶನ್ ವೀಕ್ ಅತ್ಯಂತ ಸಂಭ್ರಮದ ಪರಿಕಲ್ಪನೆ. ಪ್ರತಿದಿನದ ಫ್ಯಾಶನ್ ಸ್ಟೇಟ್‌ಮೆಂಟ್‌ಗಳನ್ನು ಜೀವಂತಗೊಳಿಸುವುದು ಟ್ರೆಂಡ್ಸ್‌ನ ಜೀನ್‌ನಲ್ಲೇ ಇದೆ. ಈ ಪ್ರದರ್ಶನದಲ್ಲಿ ಭಾಗವಹಿಸಿ ನಮ್ಮ ಬ್ರಾಂಡ್‌ಗೆ ನೆರವಾದದ್ದಕ್ಕೆ ಎಲ್ಲ ಜೆನ್ ನೆಕ್ಸ್ಟ್ ವಿನ್ಯಾಸಕರಿಗೂ ನಾನು ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಭಾರತದ ಪ್ರಮುಖ ವಿನ್ಯಾಸಕರಲ್ಲಿ ಹಲವರು ಜಾಗತಿಕ ಫ್ಯಾಶನ್ ಟ್ರೆಂಡ್‌ಗಳಲ್ಲಿ ಇತ್ತೀಚಿನದನ್ನು ಎಷ್ಟು ಜೀವಂತಿಕೆಯೊಡನೆ ಪ್ರಸ್ತುತಪಡಿಸಿದರು ಎನ್ನುವುದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಫ್ಯಾಶನ್ ಕ್ಷೇತ್ರದ ಪ್ರಮುಖರೊಡನೆ ಜೊತೆಗೂಡಲು, ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಹೊಚ್ಚಹೊಸ ಫ್ಯಾಶನ್ ಟ್ರೆಂಡ್‌ಗಳ ಅನುಭವ ಪಡೆದುಕೊಳ್ಳಲು ನಮ್ಮಂತಹ ಫ್ಯಾಶನ್ ಬ್ರಾಂಡ್‌ಗಳಿಗೆ ಅದ್ಭುತವಾದ ಹೊಸ ಅವಕಾಶ ನೀಡಿದ ಐಎಂಜಿ ರಿಲಯನ್ಸ್‌ಗೆ ನಾನು ಧನ್ಯವಾದ ಸಲ್ಲಿಸುತ್ತೇನೆ," ಎಂದು ಹೇಳಿದರು.

Reliance Trends Lakmé Fashion Week Summer Resort 2020: Vickey Kaushal and Janhvi

ಲ್ಯಾಕ್ಮೆಯ ಇನ್ನೋವೇಶನ್ಸ್ ಮುಖ್ಯಸ್ಥ ಅಶ್ವತ್ಥ್ ಸ್ವಾಮಿನಾಥನ್ ಹಾಗೂ ಐಎಂಜಿ ರಿಲಯನ್ಸ್ ಲಿಮಿಟೆಡ್‌ನ ಲೈಫ್‌ಸ್ಟೈಲ್ ಬಿಸಿನೆಸಸ್ ಮುಖ್ಯಸ್ಥ ಜಸ್‌ಪ್ರೀತ್ ಚಂದೋಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+