• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ರೋ ಕ್ಯಾಷ್ ಅಂಡ್ ಕ್ಯಾರಿ ಖರೀದಿಗೆ ಸ್ವಿಗ್ಗಿ, ರಿಲಾಯನ್ಸ್, ಟಾಟಾ ಆಸಕ್ತಿ

|
Google Oneindia Kannada News

ಮುಂಬೈ, ಜುಲೈ 12: ಜರ್ಮನಿ ಕಂಪನಿ ಮೆಟ್ರೋ ಎಜಿಯ ಭಾರತದ ವ್ಯವಹಾರವನ್ನು ವಹಿಸಿಕೊಳ್ಳಲು ಭರ್ಜರಿ ಪೈಪೋಟಿ ನಡೆದಿದೆ. ಮುಕೇಶ್ ಅಂಬಾನಿ, ಜೆಫ್ ಬೆಜೋಸ್, ಅಜೀಮ್ ಪ್ರೇಮ್‌ಜಿ ಮೊದಲಾದ ದೊಡ್ಡ ದೊಡ್ಡ ಉದ್ಯಮಿಗಳು ಮೆಟ್ರೋ ಖರೀದಿಗೆ ಆಸಕ್ತಿ ತೋರಿದ್ದಾರೆ.

ಟಾಟಾ ಗ್ರೂಪ್, ರಿಲಾಯನ್ಸ್ ರೀಟೇಲ್, ಚಾರೋನ್ ಪೋಕ್‌ಫಾಂದ್ (ಸಿಪಿ) ಗ್ರೂಪ್, ಪ್ರೇಮ್‌ಜೀ ಇನ್ವೆಸ್ಟ್, ಬೇನ್ ಕ್ಯಾಪಿಟಲ್ ಮೊದಲಾದ ಸಂಸ್ಥೆಗಳು ಮೆಟ್ರೋ ಖರೀದಿಗೆ ಮುಂದಾಗಿವೆ. ಫೂಡ್ ಡೆಲಿವರಿ ಕಂಪನಿ ಸ್ವಿಗ್ಗಿ ಕೂಡ ಈ ಪಟ್ಟಿಗೆ ಸೇರಿದೆ. ಸಿಪಿ ಗ್ರೂಪ್ ಥಾಯ್ಲೆಂಡ್ ದೇಶದ ಅತಿದೊಡ್ಡ ಉದ್ಯಮಸಂಸ್ಥೆಯಾಗಿದೆ.

ಅಚ್ಚರಿ ಎಂದರೆ ಆರಂಭದಲ್ಲಿ ಮೆಟ್ರೋ ಮೇಲೆ ಭಾರೀ ಆಸಕ್ತಿ ತೋರಿಸಿದ್ದ ಅಮೇಜಾನ್ ಸಂಸ್ಥೆ ಈಗ ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದೆ. ಫ್ಲಿಪ್‌ಕಾರ್ಟ್, ಡಿಮಾರ್ಟ್ ಕೂಡ ರೇಸ್‌ನಿಂದ ಬದಿಗೆ ಬಂದಿವೆ.

ರೂಪಾಯಿ ಕರೆನ್ಸಿಯಲ್ಲೇ ವಹಿವಾಟು ನಡೆಸಲು ಆರ್‌ಬಿಐ ಅನುಮತಿರೂಪಾಯಿ ಕರೆನ್ಸಿಯಲ್ಲೇ ವಹಿವಾಟು ನಡೆಸಲು ಆರ್‌ಬಿಐ ಅನುಮತಿ

ಇದೀಗ ಅನಿರ್ಬಂಧಿತ ಖರೀದಿ ಆಫರ್ (ನಾನ್ ಬೈಂಡಿಂಗ್ ಆಫರ್) ಸಲ್ಲಿಸಲು ಈ ವಾರ ಸಮಯ ನಿಗದಿ ಮಾಡಲಾಗಿದೆ. ಈ ಅರ್ಜಿಗಳು ಸಲ್ಲಿಕೆಯಾದ ಬಳಿಕ ಪರಿಶೀಲನೆ ಕಾರ್ಯ ಎರಡು ತಿಂಗಳವರೆಗೆ ನಡೆಯುವ ನಿರೀಕ್ಷೆ ಇದೆ.

ಮೆಟ್ರೋ ಮಾರಾಟದ ಮೊದಲ ಸುದ್ದಿ

ಮೆಟ್ರೋ ಮಾರಾಟದ ಮೊದಲ ಸುದ್ದಿ

ಜರ್ಮನಿ ಮೂಲದ ಮೆಟ್ರೋ ಕ್ಯಾಷ್ ಅಂಡ್ ಕ್ಯಾರಿ ಸಂಸ್ಥೆ ಬೆಂಗಳೂರು ಸೇರಿ ಭಾರತದ ಹಲವು ನಗರಗಳಲ್ಲಿ ಮಳಿಗೆಗಳನ್ನು ಹೊಂದಿದೆ. ವ್ಯವಹಾರ ನಷ್ಟದಲ್ಲಿರುವುದರಿಂದ ಮೆಟ್ರೋ ತನ್ನ ಭಾರತದ ಕಾರ್ಯಾಚರಣೆಯನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು ಮೇ 20ರಂದು ಭಾರತೀಯ ಮಾಧ್ಯಮದಲ್ಲಿ ಮೊದಲು ವರದಿಯಾಗಿತ್ತು. ಆಗ ರಿಲಾಯನ್ಸ್, ಡಿ ಮಾರ್ಟ್, ಸ್ವಿಗ್ಗಿ ಸೇರಿದಂತೆ 10ಕ್ಕೂ ಹೆಚ್ಚು ಸಂಸ್ಥೆಗಳು ಖರೀದಿಗೆ ಆಸಕ್ತಿ ತೋರಿವೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಹಣದುಬ್ಬರ ಎಂದರೇನು? ಭಾರತ ಹಾಗು ಬೇರೆ ದೇಶಗಳ ಪರಿಸ್ಥಿತಿ ಹೇಗೆ?ಹಣದುಬ್ಬರ ಎಂದರೇನು? ಭಾರತ ಹಾಗು ಬೇರೆ ದೇಶಗಳ ಪರಿಸ್ಥಿತಿ ಹೇಗೆ?

ಹೂಡಿಕೆ ಸಂಸ್ಥೆಗಳ ಕಾದು ನೋಡುವ ತಂತ್ರ

ಹೂಡಿಕೆ ಸಂಸ್ಥೆಗಳ ಕಾದು ನೋಡುವ ತಂತ್ರ

ವಿಶ್ವದ ದೊಡ್ಡ ಹೂಡಿಕೆ ಸಲಹೆಗಾರ ಸಂಸ್ಥೆಗಳಾದ ಜೆಪಿ ಮಾರ್ಗನ್ ಮತ್ತು ಗೋಲ್ಡ್‌ಮನ್ ಸಾಚ್ಸ್ ಈ ಮೆಟ್ರೋದ ಸಲಹೆಗಾರರಾಗಿವೆ. ಮೆಟ್ರೋಗೆ ಒಳ್ಳೆಯ ಬೆಲೆ ಸಿಗುವ ಪ್ರಯತ್ನ ನಡೆದಿದೆ. ಮೆಟ್ರೋ ಖರೀದಿಗೆ ಯಾವ ಕಂಪನಿಗಳು ಬಿಡ್ಡಿಂಗ್ ಸಲ್ಲಿಸುತ್ತವೆ, ಯಾವ ಕಂಪನಿಗಳು ಶಾರ್ಟ್ ಲಿಸ್ಟ್ ಆಗುತ್ತವೆ ಎಂದು ವಿವಿಧ ಹೂಡಿಕೆ ಸಂಸ್ಥೆಗಳು ಕಾಯುತ್ತಿವೆ. ಮಾರಾಟಕ್ಕೆ ಶಾರ್ಟ್‌ಲಿಸ್ಟ್ ಆದ ಬಳಿಕ ಯಾವ ಸಂಸ್ಥೆ ಜೊತೆ ಪಾಲುದಾರಿಕೆ ಮಾಡಿಕೊಳ್ಳಬೇಕೆಂದು ಪ್ರೇಮ್‌ಜಿ ಇನ್ವೆಸ್ಟ್, ಟಾಟಾ ಅಂಡ್ ಬೇನ್ ಕ್ಯಾಪಿಟಲ್ ಮೊದಲಾದ ಹೂಡಿಕೆ ಸಂಸ್ಥೆಗಳು ನಿರ್ಧರಿಸಲಿವೆ.

ಅಮೇಜಾನ್ ಮತ್ತು ವಾಲ್ಮಾರ್ಟ್ ನೇರವಾಗಿ ಬಿಡ್ಡಿಂಗ್‌ಗೆ ಇಳಿಯದಿದ್ದರೂ ಮೆಟ್ರೋ ಖರೀದಿಸಲು ಬಿಡ್ ಮಾಡುವ ಒಂದು ಕಂಪನಿ ಜೊತೆ ಪಾಲುದಾರಿಕೆಗೆ ಮುಂದಾಗಲು ಯೋಜಿಸಿವೆ ಎಂದು ಹೇಳಲಾಗುತ್ತಿದೆ.

8000 ಕೋಟಿ ರೂಗೆ ಮೆಟ್ರೋ?

8000 ಕೋಟಿ ರೂಗೆ ಮೆಟ್ರೋ?

ಚಿಲ್ಲರೆ ಪ್ರಮಾಣದಲ್ಲಿ ಹೋಲ್‌ಸೇಲ್ ದರದಲ್ಲಿ ವಸ್ತುಗಳು ಮೆಟ್ರೋದಲ್ಲಿ ಮಾರಾಟವಾಗುತ್ತದೆ. 2003ರಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಮೆಟ್ರೋ ಘಟಕ ಆರಂಭವಾಯಿತು. ಈಗ ದೇಶಾದ್ಯಂತ 31 ಕಡೆ ಮೆಟ್ರೋ ಕ್ಯಾಷ್ ಅಂಡ್ ಕ್ಯಾರಿ ಸ್ಟೋರ್‌ಗಳಿವೆ. ಆದರೆ, ಇ ಕಾಮರ್ಸ್ ಮಾರುಕಟ್ಟೆಯಿಂದಾಗಿ ಮೆಟ್ರೋವನ್ನು ಲಾಭದಾಯಕವಾಗಿ ಮುನ್ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ, ಮೆಟ್ರೋ ಎಜಿಯ ಭಾರತದ ಭಾಗದ ವ್ಯವಹಾರವನ್ನು ಮಾರುವ ನಿರ್ಧಾರಕ್ಕೆ ಬರಲಾಗಿದೆ.

ಮೆಟ್ರೋ ಸುಮಾರು 1-1.2 ಬಿಲಿಯನ್ ಡಾಲರ್, ಅಂದರೆ ಸುಮಾರು 8 ಸಾವಿರ ಕೋಟಿ ರೂಪಾಯಿಗೆ ಮಾರಾಟವಾಗುವ ನಿರೀಕ್ಷೆ ಇದೆ. ಗರಿಷ್ಠ ಮೊತ್ತಕ್ಕೆ ಬಿಡ್ ಸಲ್ಲಿಸುವ ಕಂಪನಿಗೆ ಮೆಟ್ರೋ ಪಾಲಾಗುವ ನಿರೀಕ್ಷೆ ಇದೆ.

ಲಾಸ್‌ನಲ್ಲಿರುವ ಮೆಟ್ರೋದಿಂದ ಏನು ಲಾಭ?

ಲಾಸ್‌ನಲ್ಲಿರುವ ಮೆಟ್ರೋದಿಂದ ಏನು ಲಾಭ?

ಹೋಲ್‌ಸೇಲ್ ರೀಟೇಲ್ ವ್ಯವಹಾರ, ಭಾರತದಲ್ಲಿ ವ್ಯವಹಾರ ಆರಂಭಿಸುವ ಉದ್ದೇಶ ಇರುವ ಕಂಪನಿಗಳಿಗೆ ಮೆಟ್ರೋ ಮಾರಾಟ ಆಫರ್ ಒಳ್ಳೆಯ ಅವಕಾಶ ಒದಗಿಸಲಿದೆ. ಥಾಯ್ಲೆಂಡ್‌ನ ಸಿಪಿ ಗ್ರೂಪ್‌ಗೆ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡಲು ಮೆಟ್ರೋ ಪ್ರಶಸ್ತವಾಗಿದೆ.

ಆರಂಭದಲ್ಲಿ ತರಕಾರಿ, ಹಂದಿ, ಕೋಳಿಗಳ ಮಾರಾಟ ಮಾಡುತ್ತಿದ್ದ ಥಾಯ್ಲೆಂಡ್‌ನ ಸಿಪಿ ಗ್ರೂಪ್ ನಂತರ ಮೊಬೈಲ್ ಟೆಲಿಕಮ್ಯೂನಿಕೇಶನ್ಸ್, ಪ್ರಾಪರ್ಟಿ ಡೆವಲಪ್ಮೆಂಟ್ ಇತ್ಯಾದಿ ಕ್ಷೇತ್ರಗಳಿಗೆ ವ್ಯವಹಾರ ವಿಸ್ತರಿಸಿತು. ನಂತರ ಆಹಾರ ಸರಬರಾಜು ಕ್ಷೇತ್ರದಲ್ಲಿ ಸಿಪಿ ಗ್ರೂಪ್ ಮುಂಚೂಣಿಗೆ ಬಂದಿತು. ಈಗ ಮೆಟ್ರೋ ಕ್ಯಾಷ್ ಅಂಡ್ ಕ್ಯಾರಿ ಮೂಲಕ ಭಾರತದಲ್ಲಿ ತನ್ನ ವ್ಯವಹಾರ ಬೇರುಬಿಡಲು ಸಿಪಿ ಗ್ರೂಪ್‌ಗೆ ಅವಕಾಶ ಇದೆ.

ರಿಲಾಯನ್ಸ್ ಕೂಡ ಈಗಾಗಲೇ ಬಿಗ್ ಬಜಾರ್ ಇತ್ಯಾದಿ ಕಂಪನಿಗಳನ್ನು ಖರೀದಿಸಿದ್ದು, ಮೆಟ್ರೋ ಸಿಕ್ಕರೆ ಅದರ ಮಾರುಕಟ್ಟೆ ಇನ್ನಷ್ಟು ಬಲಗೊಂಡಂತಾಗುತ್ತದೆ.

(ಒನ್ಇಂಡಿಯಾ ಸುದ್ದಿ)

Recommended Video

   Petromax ಚಿತ್ರ ನೋಡೋ ಡೆಲಿವರಿ ಬಾಯ್ ಗಳಿಗೆ ನೀನಾಸಂ ಸತೀಶ್ ಕಡೆಯಿಂದ ಫ್ರೀ ಟಿಕೆಟ್ | *Entertainment | OneIndia
   English summary
   Thailand's CP Group and Reliance Industries are among interested parties for German retailer Metro AG’s wholesale operations in India.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X