ಭಾರತದ ಅತಿದೊಡ್ಡ ಸೈಬರ್ ಭದ್ರತಾ ಸಮ್ಮೇಳನ - c0c0n 2025ಕ್ಕೆ ನೋಂದಣಿ ಪ್ರಾರಂಭ
Cybersecurity Conference - c0c0n 2025: ಭಾರತವು ಸೈಬರ್ ವಿಚಾರದಲ್ಲಿ ಭಾರೀ ಮುಂಚೂಣಿಯಲ್ಲಿದೆ. ಎಐ ಮಾದರಿಯಲ್ಲೇ ಸೈಬರ್ ಭದ್ರತೆ ಹಾಗೂ ಸೈಬರ್ ಮುಂಜಾಗ್ರತೆ ವಿಚಾರದಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ 2025ನೇ ಸಾಲಿನ ಅಕ್ಟೋಬರ್ 10 ಮತ್ತು 11ರಂದು ಕೇರಳದ ಕೊಚ್ಚಿಯ ಗ್ರ್ಯಾಂಡ್ ಹಯಾತ್‌ನಲ್ಲಿ ದೇಶದ ಅತಿದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ ಸೈಬರ್ ಭದ್ರತಾ ಸಮ್ಮೇಳನವಾದ "c0c0n 2025"ಕ್ಕೆ ಅಧಿಕೃತವಾಗಿ ರಿಜಿಸ್ಟ್ರೇಷನ್ ಪ್ರಾರಂಭವಾಗಿದೆ.
ಮುಖ್ಯ ಸಮ್ಮೇಳನಕ್ಕೂ ಮೊದಲು, ಜಾಗತಿಕ ಸೈಬರ್ ಭದ್ರತಾ ತಜ್ಞರಿಂದ ಅಕ್ಟೋಬರ್ 7, 8 ಮತ್ತು 9 ರಂದು ವಿಶೇಷ ಪ್ರಾಯೋಗಿಕ ತರಬೇತಿಗಳನ್ನು ನಡೆಸಲಾಗುವುದು. ಇದು ಮುಂದುವರಿದ ಸೈಬರ್ ರಕ್ಷಣಾ ತಂತ್ರಗಳಿಗೆ ಪ್ರಾಯೋಗಿಕ ಮನ್ನಣೆಯನ್ನು ನೀಡುತ್ತದೆ.

ಭಾರತದ ಅತಿದೊಡ್ಡ ಸೈಬರ್ ಭದ್ರತಾ ಸಮ್ಮೇಳನವಾದ c0c0n 2025, ಅಕ್ಟೋಬರ್ 10 ಮತ್ತು 11, 2025 ರಂದು ಕೊಚ್ಚಿಯ ಗ್ರ್ಯಾಂಡ್ ಹಯಾತ್‌ನಲ್ಲಿ ನಡೆಯಲಿದೆ. ಇದು AI-ಚಾಲಿತ ಸೈಬರ್ ದಾಳಿಗಳು, ರಾನ್ಸಮ್‌ವೇರ್, ಕ್ವಾಂಟಮ್ ಕಂಪ್ಯೂಟಿಂಗ್ ಅಪಾಯಗಳು ಸೇರಿದಂತೆ ವಿವಿಧ ಸೈಬರ್ ಭದ್ರತೆಗೆ ಅಪಾಯವನ್ನು ತರುವ ಸೈಬರ್ ಭದ್ರತಾ ಬೆದರಿಕೆಗಳಿಗೆ ಸವಾಲಾಗಲಿದೆ. ಅಕ್ಟೋಬರ್ 7 ರಿಂದ 9 ರವರೆಗೆ ಜಾಗತಿಕ ತಜ್ಞರನ್ನು ಒಳಗೊಂಡ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ.
ಹೊಸ ಭದ್ರತಾ ಬೆದರಿಕೆಗಳು ಹಾಗೂ ಹೊಸ ವಿಚಾರಗಳ ಬಗ್ಗೆ ವಿಚಾರ ವಿನಿಮಿಯ
AI-ಚಾಲಿತ ಸೈಬರ್ ದಾಳಿಗಳು, Ransomware-as-a-service (RaaS), ಪ್ರಾಯೋಜಿತ ಹ್ಯಾಕಿಂಗ್ ಮತ್ತು ಡೀಪ್‌ಫೇಕ್ - ಚಾಲಿತ ತಪ್ಪು ಮಾಹಿತಿಯ ವಿಷಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ c0c0n 2025 ಸೈಬರ್ ಭದ್ರತೆ ಮತ್ತು ಡಿಜಿಟಲ್ ಭವಿಷ್ಯವನ್ನು ಚರ್ಚಿಸಲು, ಜಾಗತಿಕ ನಾಯಕರನ್ನು ಈ ಸಮ್ಮೇಳನ ಒಟ್ಟುಗೂಡಿಸಲಿದೆ.
ಕೃತಕ ಬುದ್ಧಿಮತ್ತೆ ಮತ್ತು ಸೈಬರ್ ಭದ್ರತೆ: ಸ್ವಯಂಚಾಲಿತ ಫಿಶಿಂಗ್ (ನಿರ್ದಿಷ್ಟ ದಾಖಲೆಗಳ ಕಳ್ಳತನ) ಮತ್ತು ವಂಚನೆಗಾಗಿ ಸೈಬರ್ ವಂಚಕರು AI ಅನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಹಾಗೂ AI ನಿಂದ ಹೇಗೆ ರಕ್ಷಣೆ ಪಡೆದುಕೊಳ್ಳಬಹುದು ಎಂದು ಚರ್ಚೆ ಆಗಲಿದೆ.
ರಾನ್ಸಮ್‌ವೇರ್ ವಿಕಸನ: ಸರ್ಕಾರಗಳು, ಆಸ್ಪತ್ರೆಗಳು ಮತ್ತು ನಿಗಮಗಳನ್ನು ಗುರಿಯಾಗಿಸಿಕೊಂಡು ವೈಯಕ್ತಿಕ ದಾಳಿಗಳಿಂದ ದೊಡ್ಡ ಪ್ರಮಾಣದ ರಾನ್ಸಮ್‌ವೇರ್-ಆಸ್-ಎ-ಸರ್ವಿಸ್ ಸಿಂಡಿಕೇಟ್‌ಗಳಿಗೆ ಬದಲಾವಣೆ.
ಕ್ವಾಂಟಮ್ ಕಂಪ್ಯೂಟಿಂಗ್ ಅಪಾಯಗಳು: ಕ್ವಾಂಟಮ್ ಡೀಕ್ರಿಪ್ಶನ್ ಇಂದಿನ ಎನ್‌ಕ್ರಿಪ್ಶನ್ ಮಾನದಂಡಗಳನ್ನು ಬದಲಾಯಿಸುವ ಭವಿಷ್ಯಕ್ಕಾಗಿ ಸಿದ್ಧತೆ.
ಡೀಪ್‌ಫೇಕ್‌ಗಳು ಮತ್ತು ಮಾಹಿತಿ ಯುದ್ಧ: ರಾಜಕೀಯ, ಹಣಕಾಸು ಮತ್ತು ಸಾಮಾಜಿಕ ಸ್ಥಿರತೆಯಲ್ಲಿ AI-ನಿಂದ ಸೃಷ್ಟಿಸಿದ ತಪ್ಪು ಮಾಹಿತಿಯ ಹೆಚ್ಚುತ್ತಿರುವ ಬೆದರಿಕೆಗಳನ್ನು ತಪ್ಪಿಸಬಹುದು.
ಕ್ಲೌಡ್ ಮತ್ತು IoT ಭದ್ರತೆ: 5G, ಸಂಪರ್ಕಿತ ಸಾಧನಗಳು, ಕೈಗಾರಿಕಾ IoT ಮತ್ತು ಸ್ಮಾರ್ಟ್ ನಗರಗಳಲ್ಲಿ ದುರ್ಬಲತೆಗಳನ್ನು ಪರಿಹರಿಸುವುದು.
ಪೂರೈಕೆ ಸರಪಳಿ ದಾಳಿಗಳು: ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ನಡೆದ ಸೈಬರ್ ದಾಳಿಗಳು ಹಾಗೂ ಸೈಬರ್ ದಾಳಿ ಮಾಡುವವರು ಬಳಸಿಕೊಂಡ ವಿಷಯಗಳು. ಈ ಸೈಬರ್ ವಂಚಕರು ಒಳನುಸುಳಲು ಮಾರಾಟಗಾರರೊಂದಿಗೆ ರಾಜಿ ಮಾಡಿಕೊಂಡಿದ್ದರು.
ಡಿಜಿಟಲ್ ಫೋರೆನ್ಸಿಕ್ಸ್ ಮತ್ತು ಘಟನೆ ಪ್ರತಿಕ್ರಿಯೆ: ತ್ವರಿತವಾಗಿ ಕಾನೂನು ನಿಯಮ ಉಲ್ಲಂಘನೆ ಪತ್ತೆ, ಅದರ ಸ್ವಭಾವ ಮತ್ತು ಸಂಘಟಿತ ಕಾನೂನು ಜಾರಿ ಪ್ರತಿಕ್ರಿಯೆಗಳ ಅಗತ್ಯ ಹೆಚ್ಚುತ್ತಿದೆ.
ಬಹು-ವಲಯ ನಿರ್ಣಯ
ಸಮ್ಮೇಳನವು ನಿರ್ಣಾಯಕ ವಲಯಗಳಿಗೆ ತಡೆಗಟ್ಟುವ ತಂತ್ರಗಳನ್ನು ರೂಪಿಸುತ್ತದೆ, ಅವುಗಳೆಂದರೆ:
ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು (BFSI) ಮತ್ತು ಫಿನ್‌ಟೆಕ್ - ಆನ್‌ಲೈನ್ ವಂಚನೆಗಳು ಮತ್ತು ಡಿಜಿಟಲ್ ಪಾವತಿ ದಾಳಿಗಳನ್ನು ಎದುರಿಸುವುದು.
ಆರೋಗ್ಯ ಮತ್ತು ಔಷಧ - ಸೂಕ್ಷ್ಮ ರೋಗಿಗಳ ಡೇಟಾ ಮತ್ತು ಕ್ಲಿನಿಕಲ್ ಸಂಶೋಧನೆಯನ್ನು ರಕ್ಷಿಸುವುದು.
ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು - ಬೌದ್ಧಿಕ ಆಸ್ತಿಯನ್ನು ರಕ್ಷಿಸುವುದು.
ಉತ್ಪಾದನೆ, ಆಟೋಮೊಬೈಲ್‌ಗಳು, ತೈಲ ಮತ್ತು ಅನಿಲ - ಸೈಬರ್ ದಾಳಿಗಳ ವಿರುದ್ಧ ಕೈಗಾರಿಕಾ ನಿಯಂತ್ರಣ ವ್ಯವಸ್ಥೆಗಳನ್ನು ಸುರಕ್ಷಿತವಾಗಿಸುವುದು.
ಚಿಲ್ಲರೆ ವ್ಯಾಪಾರ, ಇ-ವಾಣಿಜ್ಯ ಮತ್ತು ಮಾಧ್ಯಮ - ಗುರುತಿನ ಕಳ್ಳತನ ಮತ್ತು ಬ್ರ್ಯಾಂಡ್ ಹೆಸರಿನಲ್ಲಿ ವಂಚನೆ ಮಾಡುವುದನ್ನು ತಪ್ಪಿಸುವುದು.
ಸರ್ಕಾರಿ ಇಲಾಖೆಗಳು - ಸೈಬರ್ ಯುದ್ಧವನ್ನು ತಡೆಯುವುದು. ಸರ್ಕಾರದ ಪ್ರಮುಖ ದಾಖಲೆಗಳನ್ನು ಸೈಬರ್ ವಂಚಕರು ಕಳ್ಳತನ ಮಾಡದಂತೆ ಎಚ್ಚರಿಕೆ ವಹಿಸುವುದು.
ಜಾಗತಿಕ ಭಾಗವಹಿಸುವಿಕೆ
ಅಂತಾರರಾಷ್ಟ್ರೀಯವಾಗಿ ಪ್ರಸಿದ್ಧವಾದ ಸೈಬರ್ ಭದ್ರತಾ ತಜ್ಞರು, ವೈಟ್-ಹ್ಯಾಟ್ ಹ್ಯಾಕರ್‌ಗಳು ಮತ್ತು ವಿಶ್ವಾದ್ಯಂತ ತನಿಖಾ ಸಂಸ್ಥೆಗಳ ಉನ್ನತ ಅಧಿಕಾರಿಗಳು ಇತ್ತೀಚಿನ ತಂತ್ರಜ್ಞಾನಗಳು, ವಿವಿಧ ಹಾಗೂ ಹೊಸ ಮಾದರಿಯ ಸೈಬರ್ ದಾಳಿ ಪ್ರಕರಣ ಅಧ್ಯಯನಗಳು ಮತ್ತು ಪರಸ್ಪರ ಸಹಕಾರದ ರಕ್ಷಣಾ ಕಾರ್ಯವಿಧಾನಗಳ ಬಗ್ಗೆ ಮಹತ್ವದ ವಿಚಾರಗಳನ್ನು ಈ ಸಮ್ಮೇಳನದಲ್ಲಿ ಹಂಚಿಕೊಳ್ಳಲಿದ್ದಾರೆ.
ಇದು ಯಾವ ರೀತಿ ಪರಿಣಾಮ ಬೀರಲಿದೆ ?
2008ರಲ್ಲಿ ಅಂದಿನ ಕೊಚ್ಚಿ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಈ ಸಮ್ಮೇಳನ ಪ್ರಾರಂಭವಾದಾಗಿತ್ತು. c0c0n ಜಾಗತಿಕವಾಗಿ ಗುರುತಿಸಲ್ಪಟ್ಟ ಸೈಬರ್ ರಕ್ಷಣಾ ವೇದಿಕೆಯಾಗಿ ಬೆಳೆದಿದೆ. 18 ವರ್ಷಗಳಲ್ಲಿ ಇದು ಸೈಬರ್‌ಡೋಮ್, ಡ್ರೋನ್ ಫೋರೆನ್ಸಿಕ್ ಲ್ಯಾಬ್ ಮತ್ತು ಮಕ್ಕಳ ಲೈಂಗಿಕ ಶೋಷಣೆ ತಡೆಗಟ್ಟುವಿಕೆ ಕೇಂದ್ರದಂತಹ ಹೊಸ ಬದಲಾವಣೆಗೆ ಕಾರಣವಾಗಿದೆ. ಇದು ಭಾರತದಲ್ಲಿ ಕಾನೂನು ಜಾರಿ-ಉದ್ಯಮ ಸಹಯೋಗಕ್ಕೆ ಮಾನದಂಡಗಳನ್ನು ನಿಗದಿಪಡಿಸಿದೆ.
c0c0n 2025 ಅನ್ನು ಮಾಹಿತಿ ಭದ್ರತಾ ಸಂಶೋಧನಾ ಸಂಘ (ISRA) ಮತ್ತು ಕೇರಳ ಪೊಲೀಸರು ಜಂಟಿಯಾಗಿ ಪ್ರಮುಖ ಜಾಗತಿಕ ಸೈಬರ್ ಭದ್ರತಾ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ್ದಾರೆ.












Click it and Unblock the Notifications