ರೆಡ್‌ಮಿ 9 ಪವರ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ: ಬೆಲೆ, ಫೀಚರ್ಸ್ ಇಲ್ಲಿದೆ

ನವದೆಹಲಿ, ಡಿಸೆಂಬರ್ 17: ಬಹುನಿರೀಕ್ಷಿತ ಶಿಯೋಮಿ ಕಂಪನಿಯ ರೆಡ್‌ಮಿ 9 ಪವರ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಪ್ರಮುಖವಾಗಿ ಇದು ಬಜೆಟ್ ಆಧಾರಿತ ಫೋನ್ ಆಗಿದ್ದು, ಆರಂಭಿಕ ಬೆಲೆ 10,999 ರೂಪಾಯಿನಷ್ಟಿದೆ.

ದೊಡ್ಡ ಸಾಮಾರ್ಥ್ಯದ ಬ್ಯಾಟರಿ, 6.53 ಇಂಚಿನ ಎಫ್‌ಹೆಚ್‌ಡಿ + ಡಿಸ್ಪ್ಲೇ, 48 ಎಂಪಿ ಪ್ರೈಮರಿ ಕ್ವಾಡ್ ರಿಯರ್ ಕ್ಯಾಮೆರಾ ಮತ್ತು ಸ್ಟಿರಿಯೊ ಸ್ಪೀಕರ್‌ಗಳು ಈ ಮೊಬೈಲ್‌ ವಿಶೇಷತೆಯಾಗಿದೆ. ಇನ್ನು 6,000mAh ಬ್ಯಾಟರಿಯನ್ನು ಹೊಂದಿರುವ ಶಿಯೋಮಿ ರೆಡ್‌ಮಿಯ ಮೊದಲ ಸ್ಮಾರ್ಟ್‌ಫೋನ್ ಆಗಿದೆ.

ಭಾರತದಲ್ಲಿ ರೆಡ್‌ಮಿ 9 ಪವರ್ ಬೆಲೆ ಎಷ್ಟು?

ಭಾರತದಲ್ಲಿ ರೆಡ್‌ಮಿ 9 ಪವರ್ ಬೆಲೆ ಎಷ್ಟು?

ಭಾರತದಲ್ಲಿ ರೆಡ್‌ಮಿ 9 ಪವರ್‌ ಸ್ಮಾರ್ಟ್‌ಫೋನ್‌ ಬೆಲೆ 4GB RAM + 64GB ಸ್ಟೋರೇಜ್ ರೂಪಾಂತರಕ್ಕೆ 10,999 ರೂ ಹಾಗೂ 4GB RAM + 128GB ಸ್ಟೋರೇಜ್ ಆಯ್ಕೆಯು 11,999 ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಬ್ಲೇಜಿಂಗ್ ಬ್ಲೂ, ಎಲೆಕ್ಟ್ರಿಕ್ ಗ್ರೀನ್, ಫೈರಿ ರೆಡ್ ಮತ್ತು ಮೈಟಿ ಬ್ಲ್ಯಾಕ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು ಆನ್‌ಲೈನ್‌ನಲ್ಲಿ ಅಮೆಜಾನ್ ಮತ್ತು ಮಿ.ಕಾಮ್ ಮತ್ತು ಮಿ ಹೋಮ್ಸ್, ಮಿ ಸ್ಟುಡಿಯೋಸ್ ಮತ್ತು ಮಿ ಸ್ಟೋರ್‌ಗಳ ಮೂಲಕ ಲಭ್ಯವಿರುತ್ತದೆ. ಡಿಸೆಂಬರ್ 22 ರಂದು ಮಧ್ಯಾಹ್ನ 12 ಗಂಟೆಗೆ ರೆಡ್‌ಮಿ 9 ಪವರ್‌ ಬಿಡುಗಡೆಗೊಳ್ಳುತ್ತದೆ.

6,000mAh ಬ್ಯಾಟರಿ

6,000mAh ಬ್ಯಾಟರಿ

6,000mAh ಬ್ಯಾಟರಿಯನ್ನು ಹೊಂದಿರುವ ಮೊದಲ ಶಿಯೋಮಿ ರೆಡ್‌ಮಿ ಫೋನ್ ಇದಾಗಿದೆ. ಇದು ಡಿಸೆಂಬರ್ 22 ರಂದು ಮಿ.ಕಾಮ್ ಮತ್ತು ಮಿ ಹೋಮ್ ಮಳಿಗೆಗಳ ಮೂಲಕ ಮಾರಾಟವಾಗಲಿದೆ. ರೆಡ್ಮಿ 9 ಪವರ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ.

48 ಮೆಗಾಪಿಕ್ಸೆಲ್ ಕ್ಯಾಮೆರಾ

48 ಮೆಗಾಪಿಕ್ಸೆಲ್ ಕ್ಯಾಮೆರಾ

ರೆಡ್‌ಮಿ 9 ಪವರ್ 48 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾ ವೈಡ್‌ ಆಂಗಲ್‌ ಲೆನ್ಸ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ.


ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ವನ್ನು ಸಹ ಈ ಮೊಬೈಲ್ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಸೆನ್ಸಾರ್‌ ಎಐ ಫೇಸ್ ಅನ್ಲಾಕ್ ಅನ್ನು ಸಹ ಒಳಗೊಂಡಿದೆ.

ರೆಡ್‌ಮಿ ಪವರ್ 9 ವಿಶೇಷತೆ

ರೆಡ್‌ಮಿ ಪವರ್ 9 ವಿಶೇಷತೆ

ಹೊಸದಾಗಿ ಬಿಡುಗಡೆಯಾದ ರೆಡ್‌ಮಿ 9 ಪವರ್ ಸ್ಮಾರ್ಟ್‌ಫೋನ್ 6.53 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಪೂರ್ಣ ಎಚ್‌ಡಿ + ರೆಸಲ್ಯೂಶನ್ ಅನ್ನು ಹೊಂದಿದೆ. ಬಜೆಟ್ ಫೋನ್ ಔರಾ ಪವರ್ ವಿನ್ಯಾಸ ಮತ್ತು ವಾಟರ್ ಡ್ರಾಪ್ ಶೈಲಿಯ ನೋಚ್ಡ್ ಡಿಸ್ಪ್ಲೇ ಹೊಂದಿದೆ. ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ನಿಂದ ರಕ್ಷಿಸಲಾಗಿದೆ. ರೆಡ್ಮಿ 9 ಪವರ್ ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ 662 ಪ್ರೊಸೆಸರ್ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+