RBI Repo Rate: ಬಡ್ಡಿದರ ಹೆಚ್ಚಳದಿಂದ ಬಡವರ ಮನೆ ಕಟ್ಟುವ ಕನಸಿಗೆ ತಣ್ಣೀರು; EMI ಮೇಲೆ ಏನು ಪರಿಣಾಮ ಬೀರಲಿದೆ ?
RBI Repo Rate: ಬೆಲೆ ಏರಿಕೆ ಹಾಗೂ ಹಣದುಬ್ಬರ ಹೆಚ್ಚಾಗುತ್ತಿರುವ ಸಂದರ್ಭದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ (RBI) ಜನ ಸಾಮಾನ್ಯರಿಗೆ ಮತ್ತೊಂದು ದೊಡ್ಡ ಶಾಕ್ ಕೊಟ್ಟಿದೆ. ಆರ್‌ಬಿಐ ರೆಪೊ ದರವನ್ನು ಹೆಚ್ಚಳ ಮಾಡುವ ಮೂಲಕ ಶಾಕ್ ಕೊಟ್ಟಿದೆ. ಆರ್‌ಬಿಐ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ 5.50% ಕ್ಕೆ ಹೆಚ್ಚಿಸಿದೆ. ಇದರಿಂದ ಗೃಹ ಸಾಲಗಳು ಸೇರಿದಂತೆ ವಿವಿಧ ಬೆಲೆಗಳು ದುಬಾರಿ ಆಗಲಿವೆ. ಆರ್‌ಬಿಐ ನಿರ್ಧಾರವು ಮನೆ ಕಟ್ಟುವ ಬಡವರ ಕನಸಿಗೆ ತಣ್ಣೀರು ಎರಚಿದಂತೆ ಆಗಿದೆ. ಆರ್‌ಬಿಐ ತೆಗೆದುಕೊಂಡ ನಿರ್ಧಾರವೇನು ಹಾಗೂ ಇದರಿಂದ ಭಾರತೀಯರ ಮೇಲೆ ಏನೆಲ್ಲ ಪರಿಣಾಮ ಬೀರಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು ಶೇ.5.25ರಿಂದ ಶೇ. 5.50ಕ್ಕೆ ಹೆಚ್ಚಳ ಮಾಡಿದೆ. ಅಂದರೆ, ಬಡ್ಡಿ ದರವನ್ನು 0.25% ಹೆಚ್ಚಿಸಲಾಗಿದೆ. ಫೆಬ್ರವರಿ 2023ರ ನಂತರ ರೆಪೊ ದರದಲ್ಲಿ ಆಗಿರುವ ಮೊದಲ ಹೆಚ್ಚಳ ಇದಾಗಿದೆ. ಕಳೆದ ನಾಲ್ಕು ಹಣಕಾಸು ನೀತಿ ಸಭೆಗಳಲ್ಲಿ ಆರ್‌ಬಿಐ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಇದೀಗ ಆರ್‌ಬಿಐ ನಾಲ್ಕು ತಿಂಗಳ ದರ ವಿರಾಮವನ್ನು ಕೊನೆಗೊಳಿಸಿದೆ; ರೆಪೊ ದರವನ್ನು 5.50% ಕ್ಕೆ ಹೆಚ್ಚಿಸಲಾಗಿದೆ.

2025ರಲ್ಲಿ ಆರ್‌ಬಿಐ ರೆಪೊ ದರವನ್ನು ಒಟ್ಟು 1.25% ಕಡಿಮೆ ಮಾಡಿತ್ತು. ಇದರ ನಂತರ ರೆಪೊ ದರವನ್ನು ಶೇ. 5.25ರಲ್ಲಿ ಮುಂದುವರಿಸಲಾಗಿತ್ತು. ಹಿಂದಿನ ನಾಲ್ಕು ಹಣಕಾಸು ನೀತಿ ಸಭೆಗಳಲ್ಲೂ RBI ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಇದೀಗ ಆರ್‌ಬಿಐ ಮತ್ತೆ ರೆಪೊ ದರವನ್ನು ಹೆಚ್ಚಳ ಮಾಡಿದೆ.
ಹಣದುಬ್ಬರದ ಪರಿಸ್ಥಿತಿ ಮತ್ತು ಜಾಗತಿಕ ಮಾರುಕಟ್ಟೆಯ ಬದಲಾವಣೆಗಳ ಹಿನ್ನೆಲೆಯಲ್ಲಿ ಆರ್‌ಬಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಭಾರತದ ಚಿಲ್ಲರೆ ಹಣದುಬ್ಬರವು ಜುಲೈನಲ್ಲಿ ಶೇ. 4.45ರಷ್ಟಿದ್ದು, ಆಗಸ್ಟ್‌ನಲ್ಲಿ ಶೇ. 4.82ಕ್ಕೆ ಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಉದ್ವಿಗ್ನತೆಯಿಂದಾಗಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಹೆಚ್ಚಾಗಿದೆ.
RBI MPC ಅಕ್ಟೋಬರ್ 2026: ರೆಪೊ ದರ ಹೆಚ್ಚಳ ಮಾಡುವುದಕ್ಕೆ ಕಾರಣವೇನು ?
ಮಧ್ಯಪ್ರಾಚ್ಯದಲ್ಲಿ ಎದುರಾಗಿರುವ ಸಂಕಷ್ಟದಿಂದ ಇಂಧನ ಬೆಲೆ ಭಾರೀ ದುಬಾರಿಯಾಗುತ್ತಿದೆ. ಇಂಧನದ ಬೆಲೆ ಏರಿಕೆಯಿಂದ ಆರ್ಥಿಕತೆಗೆ ಹೊಸ ಸವಾಲು ಎದುರಾಗಿರುವ ಬೆನ್ನಲ್ಲೇ RBI ಬೆಲೆ ಏರಿಕೆಯ ಪರಿಣಾಮವನ್ನು ಹೇಗೆ ಎದುರಿಸಲಿದೆ ಎಂಬುದರ ಬಗ್ಗೆ ಅಕ್ಟೋಬರ್‌ನ ಹಣಕಾಸು ನೀತಿ ಸಭೆಯ ಮೇಲೆ ಎಲ್ಲರ ಗಮನವಿತ್ತು.
ಹೆಚ್ಚಿನ ಕಚ್ಚಾ ತೈಲ ಬೆಲೆಗಳು ಭಾರತದ ಆಮದು ಬಿಲ್ ಅನ್ನು ಹೆಚ್ಚಿಸಬಹುದು ಮತ್ತು ಆರ್ಥಿಕತೆಯ ಹಲವಾರು ಭಾಗಗಳಲ್ಲಿ ವೆಚ್ಚಗಳನ್ನು ಹೆಚ್ಚಿಸಬಹುದು. ಮುಂದುವರಿದ ಮಧ್ಯಪ್ರಾಚ್ಯ ಸಂಘರ್ಷವು ಜಾಗತಿಕ ಇಂಧನ ಪೂರೈಕೆ ಮತ್ತು ಬೆಲೆಗಳ ಸುತ್ತಲಿನ ಅನಿಶ್ಚಿತತೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, RBI ಸತತ ನಾಲ್ಕು ಸಭೆಗಳಿಗೆ ವಿರಾಮವನ್ನು ಕಾಯ್ದುಕೊಂಡ ನಂತರ ನೀತಿ ದರವನ್ನು ಹೆಚ್ಚಳ ಮಾಡಿದೆ.
RBI ದರ ಏರಿಕೆ ಬಳಿಕ ದೀಪಾವಳಿ ಶಾಪಿಂಗ್, EMI ವೆಚ್ಚದ ಮೇಲೆ ಗಮನ
ಹಬ್ಬದ ಶಾಪಿಂಗ್ ಆರಂಭವಾಗಿರುವ ಸಮಯದಲ್ಲಿ RBI ತೆಗೆದುಕೊಂಡಿರುವ ಈ ನಿರ್ಧಾರ ಮಹತ್ವವನ್ನು ಪಡೆದುಕೊಂಡಿದೆ. ದೀಪಾವಳಿ ಹಬ್ಬಗಳು ಸಮೀಪಿಸುತ್ತಿದ್ದಂತೆಯೇ ಕಾರು, ದ್ವಿಚಕ್ರ ವಾಹನ, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು ಮತ್ತು ಮನೆ ಖರೀದಿ ಹೆಚ್ಚಾಗುವ ಸಾಧ್ಯತೆ ಇದೆ. ಇವುಗಳಲ್ಲಿ ಹಲವು ಖರೀದಿಗಳಿಗೆ ಸಾಲ ಅಥವಾ EMI ಮೂಲಕ ಹಣ ಪಾವತಿ ಮಾಡಲಾಗುತ್ತದೆ.
25 ಆಧಾರಿತ-ಪಾಯಿಂಟ್ ಹೆಚ್ಚಳವು ಕೆಲವು ಹೊಸ ಸಾಲಗಾರರಿಗೆ ಸಾಲ ವೆಚ್ಚವನ್ನು ಹೆಚ್ಚಿಸಬಹುದು. ಅದೇ ರೀತಿ ಬ್ಯಾಂಕುಗಳು, ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳು ಹಬ್ಬದ ಹಣಕಾಸು ಕೊಡುಗೆಗಳನ್ನು ಕೊಡುತ್ತಾರೆ. ಬೆಲೆ ಹೆಚ್ಚಳವು ಕೆಲವು ನಿದಿರ್ಷ್ಟ ಗ್ರಾಹಕರಿಗೆ ಖರೀದಿ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದೂ ಹೇಳಲಾಗಿದೆ.


Click it and Unblock the Notifications
