ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳವಣಿಗೆಯನ್ನು ಉತ್ತೇಜಿಸಲು RBI ಯುದ್ಧದ ರೀತಿಯಲ್ಲಿ ಸಿದ್ಧವಾಗಿದೆ: ಶಕ್ತಿಕಾಂತ ದಾಸ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 16: ದೇಶದಲ್ಲಿ ಹಣಕಾಸಿನ ಹರಿವನ್ನು ಹೆಚ್ಚಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಹೇಳಿದ್ದಾರೆ.

ಕೇಂದ್ರೀಯ ಬ್ಯಾಂಕುಗಳ ಸತತ ದೊಡ್ಡ ಹಣಕಾಸಿನ ಹರಿವು ಮತ್ತು ಕೇಂದ್ರ ಸರ್ಕಾರವು ಕಡಿಮೆ ದರದಲ್ಲಿ ಮತ್ತು ಅಡ್ಡಿಪಡಿಸದ ರೀತಿಯಲ್ಲಿ ದೊಡ್ಡ ಸಾಲವನ್ನು ಖಾತರಿಪಡಿಸಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 23.9ರಷ್ಟು ಇಳಿಕೆ ಕಂಡಿದೆ.

ಭಾರತದ ಜಿಡಿಪಿ ಕುಸಿತ ಬಹುದೊಡ್ಡ ಎಚ್ಚರಿಕೆ: ರಘುರಾಮ್ ರಾಜನ್ಭಾರತದ ಜಿಡಿಪಿ ಕುಸಿತ ಬಹುದೊಡ್ಡ ಎಚ್ಚರಿಕೆ: ರಘುರಾಮ್ ರಾಜನ್

ಕೈಗಾರಿಕಾ ಸಂಸ್ಥೆ ಎಫ್‌ಐಸಿಸಿಐ ಆಯೋಜಿಸಿದ್ದ ವರ್ಚುವಲ್ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಶಕ್ತಿಕಾಂತ ದಾಸ್ ಆರ್‌ಬಿಐ ವ್ಯವಸ್ಥೆಯಲ್ಲಿ ಹಣಕಾಸಿನ ದ್ರವ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಆರ್‌ಬಿಐ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. ಸದ್ಯಕ್ಕೆ, ಕೇಂದ್ರೀಯ ಬ್ಯಾಂಕ್ ಮುಖ್ಯಸ್ಥರು ಆರ್ಥಿಕತೆಯಲ್ಲಿ ಕ್ರಮೇಣ ಚೇತರಿಕೆ ನಿರೀಕ್ಷಿಸುತ್ತಾರೆ.

RBI Battle Ready: Willing To Take Necessary Steps To Promote Growth Says Shaktikanta Das

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಜಿಡಿಪಿ ದರವು ಕೋವಿಡ್-19 ಎಂಬ ವಿನಾಶದ ಪ್ರತಿಬಿಂಬವಾಗಿದೆ. ಆರ್ಥಿಕ ಪರಿಸ್ಥಿತಿಯು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ, ಆದರೂ ಜೂನ್, ಜುಲೈನ ಬೆಳವಣಿಗೆ ಸಮತೋಲದಲ್ಲಿದೆ. ಸೋಂಕುಗಳ ಸಂಖ್ಯೆಯು ಏರಿಕೆಯಾಗುತ್ತಿದ್ದರೂ ಆರ್ಥಿಕತೆ ಕ್ರಮೇಣ ಚೇತರಿಕೆ ಆಗುವ ಸಾಧ್ಯತೆ ಇದೆ ಎಂದಿದ್ದಾರೆ.

English summary
RBI Governer Shaktikanta das said wednesday said RBI will take all necessary measures to ensure liquidity in the system and promote economic growth
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X