ಧನಲಕ್ಷ್ಮಿ ಬ್ಯಾಂಕ್‌ಗೆ ಹೆಚ್ಚುವರಿ ನಿರ್ದೇಶಕರನ್ನು ನೇಮಿಸಿದ ಆರ್‌ಬಿಐ
ನವದೆಹಲಿ, ಸೆಪ್ಟೆಂಬರ್ 30: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಖಾಸಗಿ ವಲಯದ ಧನಲಕ್ಷ್ಮಿ ಬ್ಯಾಂಕ್‌ಗೆ ಹೆಚ್ಚುವರಿ ನಿರ್ದೇಶಕರನ್ನು ನೇಮಕ ಮಾಡಿದ್ದು, ಆದರೆ ಯಾವ ಕಾರಣಕ್ಕೆ ನೇಮಿಸಲಾಗಿದೆ ಎಂಬುದನ್ನು ತಿಳಿಸಿಲ್ಲ.
ಆರ್‌ಬಿಐ ಬ್ಯಾಂಕ್ ಮಂಡಳಿಯಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಬೆಂಗಳೂರು ಪ್ರಾದೇಶಿಕ ಕಚೇರಿಯ ರಿಸರ್ವ್ ಬ್ಯಾಂಕ್ ಜನರಲ್ ಮ್ಯಾನೇಜರ್ ಡಿ.ಕೆ ಕಶ್ಯಪ್ ಅವರನ್ನು ಎರಡು ವರ್ಷಗಳ ಅವಧಿಗೆ ನೇಮಕ ಮಾಡಿದೆ ಎಂದು ಬ್ಯಾಂಕ್ ತಿಳಿಸಿದೆ.
ಆರ್‌ಬಿಐ ತನ್ನ ನಾಮಿನಿಗಳನ್ನು ಖಾಸಗಿ ಬ್ಯಾಂಕುಗಳ ಮಂಡಳಿಗಳಲ್ಲಿ ಇಡುವುದು ಸಾಮಾನ್ಯವಾಗಿದೆ. ಈ ಹಿಂದೆ ಧನಲಕ್ಷ್ಮಿ ಮಂಡಳಿಯಲ್ಲಿ ಮೂವರು ಆರ್‌ಬಿಐ ನಾಮಿನಿಗಳು ಇದ್ದರು. ಆದಾಗ್ಯೂ, ವ್ಯವಹಾರದಲ್ಲಿ ಸುಧಾರಣೆಯೊಂದಿಗೆ, ಸೆಂಟ್ರಲ್ ಬ್ಯಾಂಕ್ ಕಳೆದ ವರ್ಷ ಒಬ್ಬರನ್ನು ಹಿಂತೆಗೆದುಕೊಂಡಿತ್ತು. ಪ್ರಸ್ತುತ ಸನ್ನಿವೇಶದಲ್ಲಿ, ಹೊಸ ನಿರ್ದೇಶಕರ ನೇಮಕ ಗಮನಾರ್ಹವಾಗಿದೆ.

ಧನಲಕ್ಷ್ಮಿ ಬ್ಯಾಂಕ್‌ನಲ್ಲಿನ ಕೆಲವು ವ್ಯವಹಾರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಬ್ಯಾಂಕ್ ನೌಕರರ ಒಕ್ಕೂಟಗಳು ಆರ್‌ಬಿಐ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದವು.












Click it and Unblock the Notifications