Dyavol Spirits: ರಾಡಿಕೊ ಖೈತಾನ್ ಜೊತೆ ಶಾರುಖ್ ಖಾನ್: SLAB ವೆಂಚರ್ಸ್ ‘ಡಿ’ಯಾವೋಲ್ ಸ್ಪಿರಿಟ್ಸ್’ ನಲ್ಲಿ 40 ಕೋಟಿ ಹೂಡಿಕೆ!

Dyavol Spirits: ಬಾಲಿವುಡ್ ಸೂಪರ್ ಸ್ಟಾರ್ ನಟ ಶಾರುಖ್ ಖಾನ್ ಅವರು ಹೊಸ ಸಾಹಸವೊಂದಕ್ಕೆ ಕೈಹಾಕಿದ್ದಾರೆ. ಭಾರತದಲ್ಲಿ ಪ್ರಸಿದ್ಧಿ ಗಳಿಸಿರುವ ಮದ್ಯಪಾನ ಸಂಸ್ಥೆ ರಾಡಿಕೊ ಖೈತಾನ್ ಆಲ್ಕೋಬೆವ್ ಕಂಪನಿ 'ಡಿ'ಯಾವೋಲ್ ಸ್ಪಿರಿಟ್ಸ್'ದಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿ ಹೂಡಿಕೆ ಮಾಡುವುದಕ್ಕೆ ಮುಂದಾಗಿದ್ದಾರೆ. ಇದರಲ್ಲಿ ನಟ ಶಾರುಖ್ ಖಾನ್, ಅವರ ಮಗ ಆರ್ಯನ್ ಹಾಗೂ ಜೆರೋಧಾ ಬ್ರೋಕರೇಜ್‌ನ ನಿಖಿಲ್ ಕಾಮತ್ ಅವರು ಕೈ ಜೋಡಿಸಿದ್ದು. ಹೊಸ ಉದ್ಯಮ ಪ್ರಾರಂಭಿಸಿದ್ದಾರೆ.

ಡಿ'ಯಾವೋಲ್ ಬಿವಿ ಮತ್ತು ಡಿ'ಯಾವೋಲ್ ಇಂಡಿಯಾದಲ್ಲಿ ಶೇ. 47.5 ರಷ್ಟು ಷೇರು ಪಾಲನ್ನು ಪಡೆಯುವ ಉದ್ದೇಶದಿಂದ ರಾಡಿಕೊ ಖೈತಾನ್ ಬರೋಬ್ಬರಿ 40 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದೆ. ಅಲ್ಲದೇ ಇದು ಅತಿದೊಡ್ಡ ಷೇರು ಪ್ರಮಾಣವಾಗಿದೆ ಎಂದು ಹೇಳಲಾಗಿದೆ.

Radico Khaitan Invests 40 crore to Launch D YAVOL Spirits with Shah Rukh Khan amp amp Nikhil Kamath

ರಾಡಿಕೊ ಖೈತಾನ್ ಶಾರುಖ್ ಖಾನ್, ಅವರ ಮಗ ಆರ್ಯನ್ ಹಾಗೂ ನಿಖಿಲ್ ಕಾಮತ್ ಅವರು ಶೇ. 47.5 ರಷ್ಟು ಪಾಲನ್ನು ಪಡೆಯುವುದಕ್ಕೆ 40 ಕೋಟಿ ಹೂಡಿಕೆ ಮಾಡುವುದರೊಂದಿಗೆ ಡಿ'ಯಾವೋಲ್ ಸ್ಪಿರಿಟ್ಸ್ ಎಂಬ ಹೊಸ ಉದ್ಯಮವನ್ನು ಘೋಷಿಸಿದ್ದಾರೆ. ಐಷಾರಾಮಿ ಬ್ರ್ಯಾಂಡ್ ಶೀಘ್ರದಲ್ಲೇ ರಾಡಿಕೊದ ವಿತರಣೆ ಹಾಗೂ ಡಿ'ಯಾವೋಲ್ ತಂಡದ ಹೊಸ ಸ್ಟೈಲ್ ಬಳಸಿಕೊಂಡು ಟಕಿಲಾವನ್ನು ಬಿಡುಗಡೆ ಮಾಡಲಿದೆ. ಈ ಸಂಸ್ಥೆಯು ಮದ್ಯ ಪ್ರಿಯರಿಗೆ ಖುಷಿ ಸುದ್ದಿ ಕೊಟ್ಟಿದ್ದು ಟಕಿಲಾ, ಸ್ಕಾಚ್ ಸೇರಿದಂತೆ ಪ್ರೀಮಿಯಂ ಸ್ಪಿರಿಟ್‌ಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದನ್ನು ಗುರಿ ಹಾಕಿಕೊಂಡಿರುವುದಾಗಿ ಹೇಳಿದೆ.

ಶಾರುಖ್ ಖಾನ್ ತಮ್ಮ ಮಗ ಆರ್ಯನ್ ಅವರೊಂದಿಗೆ ಡಿ'ಯಾವೋಲ್ ಅನ್ನು ಐಷಾರಾಮಿ ಬ್ರಾಂಡ್ ಆಗಿ ಪ್ರಾರಂಭಿಸಿದ್ದರು. ಇನ್ನು ಶಾರುಖ್ ಖಾನ್ ಅವರ ಮಗ ಆರ್ಯನ್ ಈಗಾಗಲೇ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಅವರ ತಂದೆಯೊಂದಿಗೆ ಸೇರಿ ಮತ್ತೊಂದು ಹೊಸ ಉದ್ಯಮವನ್ನು ಶುರು ಮಾಡಿದ್ದಾರೆ. ಈ ಹೊಸ ಉದ್ಯಮವು ರಾಡಿಕೊದ ವಿತರಣೆ ಹಾಗೂ ಮಾರುಕಟ್ಟೆ ಮತ್ತು ಡಿ'ಯಾವೋಲ್ ತಂಡದ ಸ್ಕಿಲ್‌ ಒಳಗೊಂಡಿರಲಿದೆ. ಶೀಘ್ರದಲ್ಲೇ ಐಷಾರಾಮಿ ಟಕಿಲಾವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ. ರಾಡಿಕೊ ಖೈತಾನ್‌ನ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಖೈತಾನ್, ಐಷಾರಾಮಿ ಸ್ಪಿರಿಟ್ಸ್ ವಿಭಾಗದಲ್ಲಿ ಕಂಪನಿಗೆ ಇದು ದೀರ್ಘಾವಧಿಯ ಹೂಡಿಕೆಯಾಗಿದೆ ಎಂದಿದ್ದಾರೆ.

ಈ ಪಾಲುದಾರಿಕೆಯು ದೈನಂದಿನ, ಪ್ರಸ್ತುತ ಹಾಗೂ ಭವಿಷ್ಯದ ಸವಾಲನ್ನು ಎದುರಿಸುವ ಹಾಗೂ ಏನನ್ನಾದರೂ ಹೊಸದನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು ಬಾಲಿವುಡ್ ನಟ ಹಾಗೂ ಉದ್ಯಮಿ ಶಾರುಖ್ ಖಾನ್ ಅವರು ಹೇಳಿದ್ದಾರೆ. ಆದರೆ, ಅವರ ಮಗ ಆರ್ಯನ್ ಹೊಸ ಬ್ರ್ಯಾಂಡ್ ಅನ್ನು ನಿರ್ಮಿಸುವುದು ಮಹತ್ವಾಕಾಂಕ್ಷೆಯನ್ನು ಹಾಕಿಕೊಂಡಿರುವುದಾಗಿ ಹೇಳಿದ್ದಾರೆ.

ಬ್ರ್ಯಾಂಡ್ ಜಗತ್ತಿನ ಪ್ರಮುಖ ಎಲ್ಲಾ ಪ್ರದೇಶಗಳಲ್ಲೂ ಪ್ರಾರಂಭಿಸುವ ಉದ್ದೇಶವನ್ನು ಹೊಂದಿರುವುದಾಗಿ ಕಾಮತ್ ಅವರು ಹೇಳಿದ್ದಾರೆ. ಪ್ರೀಮಿಯಂ ಆಲ್ಕೋಹಾಲ್ ಹೊಸ ಇತಿಹಾಸ ಸೃಷ್ಟಿ ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+