• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿ ವೀಕ್ಷಣೆಗೆ ಪಾವತಿಸುವ ಮಾದರಿ ಜಾರಿಗೆ ತಂಡ ವಿ ಆಪ್

|

ಮುಂಬೈ, ಫೆಬ್ರವರಿ 23: ಅಗ್ರಗಣ್ಯ ದೂರಸಂಪರ್ಕ ಬ್ರಾಂಡ್ ಆಗಿರುವ ವಿ ಇಂದು ತನ್ನ ಪೇಪರ್ ವ್ಯೂ ಸರ್ವೀಸ್ ಮಾಡೆಲ್‍ಗೆ ಚಾಲನೆ ನೀಡಿದೆ. ಇದು ಹಂಗಾಮಾ ಡಿಜಿಟಲ್ ಮೀಡಿಯಾ ಎಂಟರ್ ಟೈನ್ಮೆಂಟ್‍ನ ಡೀಲ್‍ಗಳ ಜತೆ ಜೋಡಿಕೊಂಡಿದೆ. ಭಾರತದ ಪ್ರಿಮಿಯಂ ವಿಡಿಯೊ ಆನ್ ಡಿಮ್ಯಾಂಡ್ (ಪಿವಿಓಡಿ) ಮಾರುಕಟ್ಟೆಯಲ್ಲಿ ಯಾವುದೇ ಟೆಲಿಕಾಂ ಸೇವಾ ಕಂಪನಿಯ ಮೊಟ್ಟಮೊದಲ ಆಫರ್ ಎನಿಸಿದೆ.

ಇದು ವಿ ಗ್ರಾಹಕರಿಗೆ, ಭಾರತದಲ್ಲಿ 2020ರ ಬಹುಚರ್ಚಿತ ಮಾಸ್ಟರ್ ಚಿತ್ರ ನಿರ್ಮಾಪಕ ಕ್ರಿಸ್ತೋಪರ್ ನೊಲಾನ್ ಅವರ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಹೀಗೆ ನಾಲ್ಕು ಭಾಷೆಗಳ 'ಟಿನೆಟ್' ಚಲನಚಿತ್ರ ಸೇರಿದಂತೆ 380ಕ್ಕೂ ಅಧಿಕ ಚಲನಚಿತ್ರಗಳನ್ನು ಲಭ್ಯವಾಗಿಸಲಿದೆ.

ವಿ ಹಾಗೂ ಹಂಗಾಮಾ ನಡುವಿನ ಪಾಲುದಾರಿಕೆಯನ್ನು ಭಾರತದಲ್ಲಿ ಡಿಜಿಟಲ್ ಪರಿಸರ ಪ್ರಗತಿಯಾಗುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ಇದು ವಿ ಗ್ರಾಹಕರು ಪ್ರಿಮಿಯಂ ಹಾಲಿವಿಡ್ ಚಿತ್ರಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಈ ವಿನೂತನ ಉಪಕ್ರಮದ ಅಂಗವಾಗಿ ಪ್ರದರ್ಶಿಸಲಾಗುವ ಹಾಗೂ ಗ್ರಾಹಕರಿಗೆ ಲಭ್ಯವಿರುವ ಕೆಲ ಚಿತ್ರಗಳೆಂದರೆ, ಟೆನೆಟ್, ಜೋಕರ್, ಬರ್ಡ್ಸ್ ಆಫ್ ಪ್ರೇ, ಸ್ಕೂಬ್, ಅಕ್ವಾಮನ್ ಮತ್ತಿತರ ಚಿತ್ರಗಳು.

ಟೆನೆಟ್ ಇದೀಗ ವಿ ಗ್ರಾಹಕರಿಗೆ ಆಕರ್ಷಕ ಅಂದರೆ 120 ರೂಪಾಯಿ ಬೆಲೆಯಲ್ಲಿ ಲಭ್ಯವಿದ್ದು, 2020ರ ಇತರ ಅತ್ಯುತ್ತಮ ಚಿತ್ರಗಳು 60 ರೂಪಾಯಿಗೆ ಲಭ್ಯ. ಇದು ಹಂಗಾಮಾ ಮೂವಿಸ್‍ಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಬೆಲೆಯಾಗಿದೆ. ಗ್ರಾಹಕರು ಚಿತ್ರಶೀರ್ಷಿಕೆಯನ್ನು ಬಾಡಿಗೆಗೆ ಪಡೆದು 48 ಗಂಟೆಗಳ ಒಳಗಾಗಿ ತಮ್ಮ ಮನೆಗಳಲ್ಲೇ ಕುಳಿತುಕೊಂಡು ವೀಕ್ಷಿಸಬಹುದಾಗಿದೆ. ಇದರ ಜತೆಗೆ ಚಿತ್ರವನ್ನು ಕ್ರೋಮ್‍ಕಾಸ್ಟ್ ಮಾಡಿಕೊಳ್ಳಲು ಅವಕಾಶವಿದ್ದು, ಈ ಮೂಲಕ ದೊಡ್ಡ ಪರದೆಯಲ್ಲಿ ವೀಕ್ಷಿಸಬಹುದಾಗಿದೆ.

ಪ್ರಸ್ತುತ ಕೊಡುಗೆಯು ತಮ್ಮ ಪೋಸ್ಟ್‍ಪೆಯ್ಡ್ ಅಥವಾ ರಿಚಾರ್ಜ್ ಪ್ಲಾನ್‍ಗಳನ್ನು ಬಳಸಿಕೊಂಡು ಬಳಕೆದಾರರಿಗೆ ಯಾವುದೇ ಹೆಚ್ಚಿನ ವೆಚ್ಚವಿಲ್ಲದೇ ಚಲನಚಿತ್ರಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಪ್ರತಿ ವೀಕ್ಷಣೆಗೆ ಪಾವತಿಸಿ ಎಂಬ ಸೇವೆಯು ಬಳಕೆದಾರರನ್ನು ಸಶಕ್ತಗೊಳಿಸುವ ಕಾರ್ಯಸೂಚಿಯನ್ನು ಬಲಪಡಿಸಿದ್ದು, ಗ್ರಾಹಕರು ತಾವು ಬಯಸುವ ಭಾಷೆಯಲ್ಲಿ ತಾವು ವೀಕ್ಷಿಸಲು ಬಯಸುವ ಕಾರ್ಯಕ್ರಮಗಳಿಗೆ ಮಾತ್ರ ಪಾವತಿಸಬೇಕಾಗುತ್ತದೆ.

English summary
Leading telecom brand, Vi today announced the launch of its Pay Per View service model, clubbed with deals from Hungama Digital Media Entertainment. This is a first-of-its-kind offering by a telco in India’s exploding Premium Video On Demand (PVOD) market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X