ಶತಕದತ್ತ ಪೆಟ್ರೋಲ್ ಬಿರುಸಿನ ಹೆಜ್ಜೆ, ಗ್ರಾಹಕರ ಜೇಬಿಗೆ ಇನ್ನೂ ವಜ್ಜೆ
Recommended Video

ನವದೆಹಲಿ, ಸೆಪ್ಟೆಂಬರ್ 20: ಮಹಾರಾಷ್ಟ್ರದ ಕೆಲವು ನಗರಗಳಲ್ಲಿ ಗುರುವಾರದಂದು ಪೆಟ್ರೋಲ್ ದರ 90 ರುಪಾಯಿ ಗಡಿ ದಾಟಿದೆ. ಪರಿಷ್ಕೃತ ದರವು ಗುರುವಾರ ಬೆಳಗ್ಗೆ 6ರಿಂದಲೇ ಅನ್ವಯವಾಗಿದೆ. ದೆಹಲಿ ಹಾಗೂ ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್ ಗೆ 6 ಪೈಸೆ ಏರಿಕೆಯಾಗಿದ್ದು, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ದೆಹಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಲೀಟರ್ ಗೆ ಕ್ರಮವಾಗಿ ರು. 82.22 ಹಾಗೂ ರು. 73.87 ಇದೆ. ಇನ್ನು ಮುಂಬೈನಲ್ಲಿ 89.60 ಮತ್ತು 78.42 ಇದೆ. ಮೆಟ್ರೋ ನಗರಗಳು ಹಾಗೂ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ತೆರಿಗೆ ಎಂಬ ಕಾರಣಕ್ಕೆ ದೆಹಲಿಯಲ್ಲಿ ಬೆಲೆ ಕಡಿಮೆ ಇದೆ. ಮುಂಬೈನಲ್ಲಿ ವ್ಯಾಟ್ ಅತಿ ಹೆಚ್ಚಿದೆ.

ರುಪಾಯಿ ಮೌಲ್ಯದಲ್ಲಿನ ಕುಸಿತ ಹಾಗೂ ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆ ಕಾರಣಕ್ಕೆ ಆಗಸ್ಟ್ ಮಧ್ಯದಿಂದಲೇ ತೈಲ ಬೆಲೆಯಲ್ಲಿ ನಿರಂತರ ಏರಿಕೆ ಆಗುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎರಡರ ಬೆಲೆಯಲ್ಲೂ ಐದು ರುಪಾಯಿಗಿಂತ ಹೆಚ್ಚು ಏರಿಕೆಯಾಗಿದೆ. ಕಳೆದ ವರ್ಷ ಜೂನ್ ನಲ್ಲಿ ನಿತ್ಯವೂ ತೈಲ ದರ ಪರಿಷ್ಕರಣೆ ಪರಿಚಯಿಸಿದ ಮೇಲೆ ಇದು ಯಾವುದೇ ಒಂದು ತಿಂಗಳಲ್ಲಿ ಕಂಡ ಅತಿ ಹೆಚ್ಚಿನ ಏರಿಕೆ.












Click it and Unblock the Notifications