ಪೆಟ್ರೋಲ್ ದರದಲ್ಲಿ ಮತ್ತೆ ಏರಿಕೆ, ನಿಮ್ಮ ನಗರದಲ್ಲಿ ದರ ಎಷ್ಟು?
ಬೆಂಗಳೂರು, ಆ. 22: ಕಳೆದ ಭಾನುವಾರದಿಂದ ಮೊದಲುಗೊಂಡು ಮೆಟ್ರೋ ನಗರಗಳಲ್ಲಿ ಏರಿಕೆ ಕಂಡಿದ್ದ ಪೆಟ್ರೋಲ್ ದರ ಒಂದೆರಡು ದಿನಗಳ ಬಿಡುವಿನ ನಂತರ ಮತ್ತೆ ಸತತ ಮೂರನೇ ದಿನ ಏರಿಕೆಯಾಗಿದೆ. ಆದರೆ, ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸ ಕಂಡು ಬಂದಿಲ್ಲ
Recommended Video
ದೆಹಲಿಯಲ್ಲಿ ಪ್ರತಿ ಲೀಟರ್ ಬೆಲೆ 81.19 ರು ನಷ್ಟಿದ್ದ ಪೆಟ್ರೋಲ್ ದರ ಶನಿವಾರ(ಆಗಸ್ಟ್ 22)ದಂದು 81.35ರು ಗೇರಿದೆ. ಒಟ್ಟಾರೆ ಕಳೆದ ಒಂದು ವಾರದಿಂದ 92 ಪೈಸೆ ಏರಿಕೆಯಾಗಿದೆ. ಮುಂಬೈನಲ್ಲಿ ಒಂದು ವಾರದಲ್ಲಿ 83ಪೈಸೆ ಏರಿಕೆ ಕಂಡು ಬಂದಿದೆ. ಆಗಸ್ಟ್ 22ರಂದು ಹೈದರಾಬಾದ್ 17 ಪೈಸೆ, ಬೆಂಗಳೂರು 16 ಪೈಸೆ, ಚೆನ್ನೈನಲ್ಲಿ 13 ಪೈಸೆ ಪ್ರತಿ ಲೀಟರ್ ಮೇಲೆ ಏರಿಕೆಯಾಗಿದೆ.
ದೆಹಲಿಯಲ್ಲಿ ಜೂನ್ 29ರಂದು 80. 43 ಬೆಲೆ ಇತ್ತು. ಬೆಲೆ ಏರಿಕೆಗೂ ಮುನ್ನ ಮುಂಬೈನಲ್ಲಿ ಪೆಟ್ರೋಲ್ ದರ 87.31ರು, ಚೆನ್ನೈ-83.75 ರು ಹಾಗೂ ಕೋಲ್ಕತಾದಲ್ಲಿ 82.17 ಪ್ರತಿ ಲೀಟರ್ ನಷ್ಟು ಬೆಲೆ ಇತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಾಣುತ್ತಿದ್ದು, ಬ್ರೆಂಟ್ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಬೆಲೆ 45 ಯುಎಸ್ ಡಾಲರ್ ನಷ್ಟಿತ್ತು.

ಆಗಸ್ಟ್ 22ರಂದು ದರ ಪಟ್ಟಿ:
* ಮುಂಬೈನಲ್ಲಿ ಪ್ರತಿ ಲೀಟರ್ 88.02 ರು ಆಗಿದೆ.
* ಕೋಲ್ಕತಾದಲ್ಲಿ 82.87ರು ನಷ್ಟಿದೆ.
* ಚೆನ್ನೈನಲ್ಲಿ 84.40 ರು ನಷ್ಟಿದೆ.
* ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಬೆಲೆ 83.99 ರು ನಷ್ಟಿದೆ.
ಡೀಸೆಲ್ ಬೆಲೆ ಬದಲಾಗಿಲ್ಲ:
ಕಳೆದ 20 ದಿನಗಳಿಂದ ದೆಹಲಿಯಲ್ಲಿ ಡೀಸೆಲ್ ಬೆಲೆ ಬದಲಾಗಿಲ್ಲ. ಪ್ರತಿ ಲೀಟರ್ ಗೆ 73.56 ರು ನಷ್ಟೇ ಇದೆ. ಜುಲೈ 31ರಂದು 8 ರು ಕುಸಿತ ಕಂಡಿತ್ತು. ಕೇಜ್ರಿವಾಲ್ ಸರ್ಕಾರ ವ್ಯಾಟ್ ಇಳಿಸಿದ್ದರ ಪರಿಣಾಮವಿದು. ಮಿಕ್ಕಂತೆ ಮುಂಬೈನಲ್ಲಿ ಪ್ರತಿ ಲೀಟರ್ ಬೆಲೆ 80.11 ರು , ಚೆನ್ನೈನಲ್ಲಿ 78.86ರು, ಕೋಲ್ಕತಾದಲ್ಲಿ 77.06 ರು ಹಾಗೂ ಬೆಂಗಳೂರಲ್ಲಿ 77.88 ರು ನಷ್ಟಿದೆ.












Click it and Unblock the Notifications