ಎರಡು ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ ದರ ಏರಿಕೆ
ನವದೆಹಲಿ, ನವೆಂಬರ್ 20: ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಶುಕ್ರವಾರ ಪೆಟ್ರೋಲ್ ಬೆಲೆಯನ್ನು ಏರಿಕೆ ಮಾಡಿದ್ದು ದೆಹಲಿಯಲ್ಲಿ ಲೀಟರ್‌ಗೆ 17 ಪೈಸೆಯಂತೆ 81.23 ರೂಪಾಯಿಗೆ ಏರಿಕೆ ಮಾಡಿವೆ. ಇನ್ನು ಡೀಸೆಲ್ ದರದಲ್ಲೂ ಲೀಟರ್‌ಗೆ 22 ಪೈಸೆ ಏರಿಕೆ ಕಂಡಿದ್ದು 70.68 ರೂಪಾಯಿ ದಾಖಲಾಗಿದೆ.
ಆಗಸ್ಟ್ ತಿಂಗಳವರೆಗೂ ಸತತ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ದರಗಳು ನಂತರದ ದಿನಗಳಲ್ಲಿ ಇಳಿಮುಖ ಸಾಧಿಸಿದ್ದವು. ಆದರೆ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ನವೆಂಬರ್ 20 ಶುಕ್ರವಾರ ದೇಶೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಎರಡು ತಿಂಗಳ ವಿರಾಮದ ನಂತರ ಹೆಚ್ಚಿಸಿವೆ. ಒಎಂಸಿಗಳು ನಾಲ್ಕು ಮಹಾನಗರಗಳಲ್ಲಿ ಇಂಧನ ದರವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಿವೆ.
ದೆಹಲಿ, ಚೆನ್ನೈ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 17 ರಿಂದ 20 ಪೈಸೆ ಹೆಚ್ಚಿಸಲಾಗಿದ್ದು, ಭಾರತೀಯ ತೈಲ ನಿಗಮದ ಅಧಿಸೂಚನೆಯ ಪ್ರಕಾರ ಡೀಸೆಲ್ ಅನ್ನು ಪ್ರತಿ ಲೀಟರ್‌ಗೆ 22 ರಿಂದ 25 ಪೈಸೆ ಹೆಚ್ಚಿಸಲಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ನಗರಗಳು ಪೆಟ್ರೋಲ್ ಡೀಸೆಲ್
ಬೆಂಗಳೂರು 83.92 74.91
ನವದೆಹಲಿ 81.23 70.68
ಮುಂಬೈ 87.92 77.11
ಚೆನ್ನೈ 84.45 76.31
ಹೈದ್ರಾಬಾದ್ 84.47 77.12
ನೊಯ್ಡ 81.73 71.21
ಚಂಡೀಗಡ 78.19 70.43
ಜೈಪುರ 88.14 79.28
ಪಾಟ್ನಾ 83.87 76.30












Click it and Unblock the Notifications