ಸತತ 12ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ
ನವದೆಹಲಿ, ಜೂನ್ 18: ಭಾರತೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರುತ್ತಿದೆ. ಸತತ 12ನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿದೆ. ಗುರುವಾರ (ಜೂನ್ 18) ಪೆಟ್ರೋಲ್ ಲೀಟರ್‌ಗೆ 53 ಪೈಸೆ ಏರಿಕೆ ಕಂಡಿದ್ದು, 77.81 ರುಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 64 ಪೈಸೆ ಹೆಚ್ಚಳವಾಗಿ 76.43 ರುಪಾಯಿ ದಾಖಲಾಗಿದೆ.
Recommended Video
ಭಾನುವಾರ (ಜೂನ್ 7) ರಂದು ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿತು. ಅಂದಿನಿಂದ ಸತತ 12ನೇ ದಿನ ತೈಲ ಬೆಲೆ ಏರಿಕೆ ಕಂಡಿದೆ. 12 ದಿನಗಳಲ್ಲಿ ಪೆಟ್ರೋಲ್ ಬೆಲೆ 6.5 ರುಪಾಯಿ ಏರಿಕೆಗೊಂಡರೆ, ಡೀಸೆಲ್ ಬೆಲೆ 7 ರುಪಾಯಿ ಹೆಚ್ಚಳವಾಗಿದೆ.

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 18: 80.33 (54 ಪೈಸೆ ಏರಿಕೆ)
ಜೂನ್ 17: 79.79
ಜೂನ್ 16: 79.22
ಜೂನ್ 15: 78.73
ಡೀಸೆಲ್ (ಪ್ರತಿ ಲೀಟರ್)
ಜೂನ್ 18: 72.68 (61 ಪೈಸೆ ಏರಿಕೆ)
ಜೂನ್ 17: 72.07
ಜೂನ್ 16: 71.49
ಜೂನ್ 15: 70.95

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 18: 77.81 (53 ಪೈಸೆ ಏರಿಕೆ)
ಜೂನ್ 17: 77.28
ಜೂನ್ 16: 76.73
ಜೂನ್ 15: 76.26
ಡೀಸೆಲ್ (ಪ್ರತಿ ಲೀಟರ್)
ಜೂನ್ 18: 76.43 (64 ಪೈಸೆ ಏರಿಕೆ)
ಜೂನ್ 17: 75.79
ಜೂನ್ 16: 75.19
ಜೂನ್ 15: 74.62

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 18: 84.66 (51 ಪೈಸೆ ಏರಿಕೆ)
ಜೂನ್ 17: 84.15
ಜೂನ್ 16: 83.62
ಜೂನ್ 15: 83.17
ಡೀಸೆಲ್ (ಪ್ರತಿ ಲೀಟರ್)
ಜೂನ್ 18: 74.93 (61 ಪೈಸೆ ಏರಿಕೆ)
ಜೂನ್ 17: 74.32
ಜೂನ್ 16: 73.75
ಜೂನ್ 15: 73.21

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 18: 81.32 (46 ಪೈಸೆ ಏರಿಕೆ)
ಜೂನ್ 17: 80.86
ಜೂನ್ 16: 80.37
ಜೂನ್ 15: 79.96
ಡೀಸೆಲ್ (ಪ್ರತಿ ಲೀಟರ್)
ಜೂನ್ 18: 74.23 (54 ಪೈಸೆ ಏರಿಕೆ)
ಜೂನ್ 17: 73.69
ಜೂನ್ 16: 73.18
ಜೂನ್ 15: 72.69

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 18: 80.77 (55 ಪೈಸೆ ಏರಿಕೆ)
ಜೂನ್ 17: 80.22
ಜೂನ್ 16: 79.65
ಜೂನ್ 15: 79.17
ಡೀಸೆಲ್ (ಪ್ರತಿ ಲೀಟರ್)
ಜೂನ್ 18: 74.70 (63 ಪೈಸೆ ಏರಿಕೆ)
ಜೂನ್ 17: 74.07
ಜೂನ್ 16: 73.49
ಜೂನ್ 15: 72.93












Click it and Unblock the Notifications