ಸತತ 12ನೇ ದಿನ ತೈಲ ಬೆಲೆ ಏರಿಕೆ: ಬೆಂಗಳೂರಲ್ಲಿ ಪೆಟ್ರೋಲ್ 1.30 ರೂ ಹೆಚ್ಚಳ

ನವದೆಹಲಿ, ಫೆಬ್ರವರಿ 20: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಸತತ 12ನೇ ದಿನವೂ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಇದರಿಂದ ತೈಲ ದರವು ಶನಿವಾರ ಹೊಸ ಗಡಿ ತಲುಪಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಶನಿವಾರ 35-40 ಪೈಸೆಗಳವರೆಗೂ ಹೆಚ್ಚಳವಾಗಿದೆ. ಕಳೆದ 12 ದಿನಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ 3.64 ರೂಪಾಯಿ ಹೆಚ್ಚಾಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 4.18 ರೂಪಾಯಿಯಷ್ಟು ರಾಜಧಾನಿ ದೆಹಲಿಯಲ್ಲಿ ಏರಿಕೆ ಕಂಡಿದೆ.

ಹೆಚ್ಚಿನ ನಗರಗಳಲ್ಲಿ ಪೈಸೆ ಲೆಕ್ಕದಲ್ಲಿ ತೈಲ ಬೆಲೆ ಹೆಚ್ಚಳವಾಗಿದ್ದರೆ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಒಂದು ರೂಪಾಯಿಯನ್ನೂ ದಾಟಿ ಭಾರಿ ಏರಿಕೆಯಾಗಿದೆ. ದೆಹಲಿಯಲ್ಲಿ ಶುಕ್ರವಾರ ಪೆಟ್ರೋಲ್ ಬೆಲೆ 90 ರೂ ದಾಟಿತ್ತು. ಈಗ ಮತ್ತೆ 39 ಪೈಸೆ ಹೆಚ್ಚಳವಾಗಿದ್ದು, ಲೀಟರ್‌ಗೆ 90.58 ರೂ. ತಲುಪಿದೆ. ಹಾಗೆಯೇ ಡೀಸೆಲ್ ದರ 37 ಪೈಸೆ ತುಟ್ಟಿಯಾಗಿದ್ದು, ಪ್ರತಿ ಲೀಟರ್‌ಗೆ 80.97 ಮುಟ್ಟಿದೆ.

ಬೆಂಗಳೂರಿನಲ್ಲಿ ತೈಲ ದುಬಾರಿ

ಬೆಂಗಳೂರಿನಲ್ಲಿ ತೈಲ ದುಬಾರಿ

ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ ಶುಕ್ರವಾರಕ್ಕಿಂತ ಬರೋಬ್ಬರಿ 1.30 ರೂ ಹೆಚ್ಚಳವಾಗಿದೆ. ಲೀಟರ್ ಪೆಟ್ರೊಲ್ ಬೆಲೆ 93.67 ರೂಪಾಯಿಯಾಗಿದೆ. ಇನ್ನು ಡೀಸೆಲ್ ದರವು 10 ಪೈಸೆ ದುಬಾರಿಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 85.84 ರೂ.ಆಗಿದೆ.

ಮುಂಬೈ, ನೋಯ್ಡಾ

ಮುಂಬೈ, ನೋಯ್ಡಾ

ಮುಂಬೈನಲ್ಲಿ ಪೆಟ್ರೋಲ್ ಬೆಲೆಯು ಲೀಟರ್‌ಗೆ 97 ರೂ ಮುಟ್ಟಿದೆ. ನಿನ್ನೆಯ ಬೆಲೆಗೆ ಹೋಲಿಸಿದರೆ 38 ಪೈಸೆ ಏರಿಕೆಯಾಗಿದೆ. ಡೀಸೆಲ್ ದರವು 39 ಪೈಸೆ ಹೆಚ್ಚಳದೊಂದಿಗೆ 87.06ಕ್ಕೆ ಏರಿಕೆಯಾಗಿದೆ. ನೋಯ್ಡಾದಲ್ಲಿ ಪೆಟ್ರೋಲ್ ಬೆಲೆ 88.92 ರೂ,ಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ 81.41 ರೂ. ಆಗಿದೆ.

ಕೋಲ್ಕತಾ, ಚೆನ್ನೈ

ಕೋಲ್ಕತಾ, ಚೆನ್ನೈ

ಕೋಲ್ಕತಾದಲ್ಲಿ ಪೆಟ್ರೋಲ್ ಬೆಲೆಯು ಪ್ರತಿ ಲೀಟರ್‌ಗೆ 91.78 ರೂ. ತಲುಪಿದೆ. ಇನ್ನು ಡೀಸೆಲ್ ಬೆಲೆ 84.56 ರೂ.ಗೆ ಮುಟ್ಟಿದೆ. ಚೆನ್ನೈನಲ್ಲಿ ಡೀಸೆಲ್ ಬೆಲೆ 85.98 ರೂ.ಗೆ ಹೆಚ್ಚಾಗಿದೆ. ಪೆಟ್ರೋಲ್ ಬೆಲೆ 92.59ಕ್ಕೆ ಏರಿಕೆಯಾಗಿದೆ.

ಇತರೆ ನಗರಗಳಲ್ಲಿ ತೈಲ ದರ

ಇತರೆ ನಗರಗಳಲ್ಲಿ ತೈಲ ದರ

* ಹೈದರಾಬಾದ್ - 93.18 (ಪೆಟ್ರೋಲ್) , 88.31 (ಡೀಸೆಲ್)

* ಪಟ್ನಾ- 92.91 (ಪೆಟ್ರೋಲ್) , 86.22 (ಡೀಸೆಲ್)

* ಭೋಪಾಲ್- 98.60 (ಪೆಟ್ರೋಲ್) , 89.23 (ಡೀಸೆಲ್)

* ಜೈಪುರ- 97.10 (ಪೆಟ್ರೋಲ್) , 89.44 (ಡೀಸೆಲ್)

* ಗುರುಗ್ರಾಮ- 88.54 (ಪೆಟ್ರೋಲ್) , 81.55 (ಡೀಸೆಲ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+