ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ಏರಿಕೆ ಬಳಿಕ ಪೆಟ್ರೋಲ್, ಡೀಸೆಲ್ ದರದಲ್ಲಿ ಭಾರಿ ಇಳಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 5: ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಶನಿವಾರ ಭಾರಿ ಇಳಿಕೆಯಾಗಿದೆ. ಕೆಲವು ದಿನಗಳ ಹಿಂದೆ ಸತತ ಏರಿಕೆಯಾಗಿದ್ದ ತೈಲ ಬೆಲೆ ಸತತ ಮೂರನೇ ದಿನ ಇಳಿಕೆಯ ಹಾದಿಯಲ್ಲಿದೆ. ಶನಿವಾರ ದೇಶಾದ್ಯಂತ ಪೆಟ್ರೋಲ್ ದರವು 29-31 ಪೈಸೆ ಇಳಿಕೆಯಾಗಿದ್ದರೆ, ಡೀಸೆಲ್ ದರವು 19-20 ಪೈಸೆಯಷ್ಟು ಕಡಿಮೆಯಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ತಗ್ಗುವ ಸೂಚನೆ ಇರುವುದರಿಂದ ಪೆಟ್ರೋಲ್ ಹಾಗೂ ಡೀಸೆಲ್ ಇನ್ನೂ ಅಗ್ಗವಾಗುವ ಸಾಧ್ಯತೆ ಇದೆ ಎಂದು ಇಂಡಿಯನ್ ಆಯಿಲ್ ತಿಳಿಸಿದೆ.

ಮೂರು ವಾರಗಳ ಬಳಿಕ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಸ್ವಲ್ಪ ಇಳಿಕೆ ಮೂರು ವಾರಗಳ ಬಳಿಕ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಸ್ವಲ್ಪ ಇಳಿಕೆ

ಜಗತ್ತಿನ ಅತಿ ದೊಡ್ಡ ತೈಲ ಉತ್ಪಾದಕ ದೇಶವಾದ ಸೌದಿ ಅರೇಬಿಯಾದಲ್ಲಿ ಅರ್ಧದಷ್ಟು ತೈಲ ಉತ್ಪಾದನೆ ಮಾಡುವ ಕಚ್ಚಾ ತೈಲ ಸಂಸ್ಕರಣಾ ಘಟಕಗಳ ಮೇಲೆ ಬಂಡುಕೋರರು ಸೆ. 14ರಂದು ಡ್ರೋನ್‌ ದಾಳಿ ನಡೆಸಿದ ಬಳಿಕ ತೈಲ ಬೆಲೆಯಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದೆ. ರಾಜಧಾನಿ ದೆಹಲಿಯಲ್ಲಿ ಲೀಟರ್‌ಗೆ 71.97 ರೂ ಇದ್ದ ಪೆಟ್ರೋಲ್ ಹಾಗೂ 65.37 ರೂ. ಇದ್ದ ಡೀಸೆಲ್ ಬೆಲೆಯಲ್ಲಿ ಈ ದಾಳಿಯ ಬಳಿಕ ತೈಲ ಬೆಲೆಯ ಸ್ವಯಂಚಾಲಿತ ಬದಲಾವಣೆಯಲ್ಲಿ ಭಾರಿ ಏರಿಕೆ ಉಂಟಾಗಿತ್ತು.

ರಾಜಧಾನಿ ದೆಹಲಿಯಲ್ಲಿ ಬೆಲೆ

ರಾಜಧಾನಿ ದೆಹಲಿಯಲ್ಲಿ ಬೆಲೆ

ಶನಿವಾರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 29 ಪೈಸೆ ಇಳಿಕೆಯಾಗಿದ್ದು, ಲೀಟರ್‌ಗೆ 74.04 ರೂ. ಇದೆ. ಶುಕ್ರವಾರ ಲೀಟರ್‌ಗೆ 74.33 ರೂ ಇತ್ತು. ಡೀಸೆಲ್ ಬೆಲೆಯು 20 ಪೈಸೆ ಇಳಿಕೆಯಾಗಿದ್ದು, ಶುಕ್ರವಾರದ 67.35 ರಿಂದ 67.15 ರೂ ಪ್ರತಿ ಲೀಟರ್‌ಗೆ ಇಳಿಕೆಯಾಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ತ್ವರಿತ ಏರಿಕೆ, ಮುಂಬೈನಲ್ಲಿ ಅಧಿಕಪೆಟ್ರೋಲ್, ಡೀಸೆಲ್ ಬೆಲೆ ತ್ವರಿತ ಏರಿಕೆ, ಮುಂಬೈನಲ್ಲಿ ಅಧಿಕ

ಮುಂಬೈನಲ್ಲಿ ಎಷ್ಟು ಇಳಿಕೆ?

ಮುಂಬೈನಲ್ಲಿ ಎಷ್ಟು ಇಳಿಕೆ?

ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀ. 79.65 ರೂ. ಇಳಿಕೆಯಾಗಿದೆ. ಶುಕ್ರವಾರದ ದರಕ್ಕೆ ಹೋಲಿಸಿದರೆ 28 ಪೈಸೆ ಕಡಿಮೆಯಾಗಿದೆ. ಹಾಗೆಯೇ ಡೀಸೆಲ್ ಬೆಲೆ 21 ಪೈಸೆ ಕಡಿಮೆಯಾಗಿದ್ದು, 70.39 ರೂ,ಗೆ ಮಾರಾಟವಾಗುತ್ತಿದೆ.

ಚೆನ್ನೈ ಮತ್ತು ಕೋಲ್ಕತಾ

ಚೆನ್ನೈ ಮತ್ತು ಕೋಲ್ಕತಾ

ಚೆನ್ನೈನಲ್ಲಿ ಪೆಟ್ರೋಲ್ ದರ 31 ಪೈಸೆ ಕಡಿಮೆಯಾಗಿದೆ. ಲೀಟರ್‌ಗೆ 76.90 ರೂ. ಇದೆ. ಡೀಸೆಲ್ ಪ್ರತಿ ಲೀಟರ್‌ಗೆ 70.94 ರೂ.ಗೆ ತಲುಪಿದೆ. ಶುಕ್ರವಾರಕ್ಕೆ ಹೋಲಿಸಿದರೆ ಡೀಸೆಲ್ ದರ 21 ಪೈಸೆ ಇಳಿಕೆಯಾಗಿದೆ. ಕೋಲ್ಕತಾದಲ್ಲಿ ಪೆಟ್ರೋಲ್ 29 ಪೈಸೆ ಅಗ್ಗವಾಗಿದ್ದು, ಲೀಟರ್‌ಗೆ 76.67 ರೂ. ಇದೆ. ಡೀಸೆಲ್ ಬೆಲೆ 69.51ಕ್ಕೆ ಇಳಿದಿದೆ.

ತೈಲ ಪೂರೈಕೆಯಲ್ಲಿ ವ್ಯತ್ಯಯವಿಲ್ಲ, ಭಾರತಕ್ಕೆ ಸೌದಿ ಅಭಯತೈಲ ಪೂರೈಕೆಯಲ್ಲಿ ವ್ಯತ್ಯಯವಿಲ್ಲ, ಭಾರತಕ್ಕೆ ಸೌದಿ ಅಭಯ

ಬೆಂಗಳೂರಿನಲ್ಲಿ ತೈಲ ಬೆಲೆ ಎಷ್ಟು?

ಬೆಂಗಳೂರಿನಲ್ಲಿ ತೈಲ ಬೆಲೆ ಎಷ್ಟು?

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಶನಿವಾರ 30 ಪೈಸೆಯಷ್ಟು ಕಡಿಮೆಯಾಗಿದೆ. ಶುಕ್ರವಾರ 76.87 ರೂ. ಇದ್ದ ಪೆಟ್ರೋಲ್ ಬೆಲೆ 76.57 ರೂ.ಗೆ ಇಳಿಕೆಯಾಗಿದೆ. ಶುಕ್ರವಾರ 69.65 ರೂ. ಇದ್ದ ಪ್ರತಿ ಲೀಟರ್ ಡೀಸೆಲ್ ದರದಲ್ಲಿ 21 ಪೈಸೆ ಇಳಿಕೆಯಾಗಿದ್ದು, ಶನಿವಾರ ಲೀ.ಗೆ 69.44 ರೂ.ಗೆ ಮಾರಾಟವಾಗುತ್ತಿದೆ.

English summary
Petrol and diesel prices decreased across India on Saturday. Petrol rate came down 29-31 paise and diesel 19-20 paise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X